ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಕೆಲ ಬಿಜೆಪಿ ಶಾಸಕರು, ವರಿಷ್ಠರ ಸೂಚನೆ ಮೀರಿ ಒಂದು ಹೆಜ್ಜೆ ಮುಂದಿಡಲು ಸಿದ್ಧತೆ ನಡೆಸಿದ್ದಾರೆ.
ದಾವಣಗೆರೆ, (ಜ.18): ಸಚಿವ ಸಂಪುಟ ವಿಸ್ತರಣೆಯಾಗಿ ವಾರಗಳೇ ಕಳೆಯುತ್ತಾ ಬಂದರೂ ಇನ್ನೂ ಅಸಮಾಧಾನಿತ ಶಾಸಕರ ಕೋಪ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ.
ಸಣ್ಣಪುಟ್ಟ ಸಮಸ್ಯೆಗಳಿದ್ದರೆ ರಾಜ್ಯ ನಾಯಕರ ಜೊತೆ ಚರ್ಚಿಸಿ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸದ ವೇಳೆ ಸ್ಪಷ್ಟವಾಗಿಯೇ ಹೇಳಿದ್ದಾರೆ. ಆದ್ರೆ, ಅಸಮಾಧಾನಿತ ಶಾಸಕರು ಅದ್ಯಾವುದನ್ನು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ.
ಹೌದು..ಇದಕ್ಕೆ ಪೂರಕವೆಂಬಂತೆ ಸಚಿವ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಶಾಸಕರ ಸಭೆ ಫಿಕ್ಸ್ ಆಗಿದೆ. ಈ ಬಗ್ಗೆ ಸ್ವತಃ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರೇ ಖಚಿತಪಡಿಸಿದ್ದಾರೆ.
ಅಮಿತ್ ಶಾ ಭೇಟಿ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ದೊಡ್ಡ ಬೆಳವಣಿಗೆ
ಇಂದು (ಸೋಮವಾರ) ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ನಾಳೆ (ಮಂಗಳವಾರ) ಬೆಂಗಳೂರಲ್ಲಿ ಅಸಮಧಾನಿತ ಶಾಸಕರ ಸಭೆ ಪಿಕ್ಸ್ ಆಗಿದೆ. ನಾವು ರೇಸಾರ್ಟ್ ರಾಜಕಾರಣ ಮಾಡಲ್ಲ. ಪಂಚತಾರಾ ಹೋಟೆಲ್ ನಲ್ಲಿ ಸಭೆ ಮಾಡುವುದಿಲ್ಲ. ಆದ್ರೆ ಎಲ್ಲೋ ಒಂದು ಕಡೆ ಸಭೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಮಂಗಳವಾರ (ಜ.19) ಬೆಳಿಗ್ಗೆ ಕೆಲ ಶಾಸಕರು ಬೆಂಗಳೂರಿಗೆ ಬರುತ್ತಾರೆ. ಕುಳಿತು ಚರ್ಚಿಸುತ್ತಾರೆ. ನಾವು ಕದ್ದುಮುಚ್ಚಿ ದೆಹಲಿಗೆ ಹೋಗಲ್ಲಪಕ್ಷದ ಚೌಕಟ್ಟಿನಲ್ಲಿ ನಾಲ್ಕು ಗೋಡೆಗಳ ಮಧ್ಯೆ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ. ಈ ಹಿಂದೆ ಅನೇಕ ತಪ್ಪುಗಳನ್ನು ಮಾಡಿದ್ದೇವೆ. ಈ ಬಾರಿ ಅಂತಹ ತಪ್ಪುಗಳು ಆಗೊಲ್ಲ ಎಂದು ಹೇಳಿದರು.
ಮಾನ್ಯ ಮುಖ್ಯಮಂತ್ರಿ ಗಳ ಬಗ್ಗೆ ಆಪಾರ ಗೌರವ ಪ್ರೀತಿ ಇದೆ. ನಮ್ಮನ್ನು ರಾಜಕೀಯವಾಗಿ ಬೆಳೆಸಿರೋದು ಯಡಿಯೂರಪ್ಪ. ನಾವು ಅಸಮಾಧಾನಿತರಲ್ಲ, ಬಂಡಾಯವಲ್ಲ ನಾಯಕರಲ್ಲ. ನಮ್ಮ ನೋವುಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದೇವೆ. ನಮ್ಮ ಶಾಸಕರು ನೋವುಗಳನ್ನು ತೋಡಿಕೊಂಡಿದ್ದಾರೆ ಎಂದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 18, 2021, 7:40 PM IST