ಬೈ ಎಲೆಕ್ಷನ್‌ಗೆ ಬಿಜೆಪಿ ಪಡೆ ರೆಡಿ: 15 ಕ್ಷೇತ್ರಗಳಿಗೆ ಉಸ್ತುವಾರಿಗಳ ನೇಮಕ
ಸುಪ್ರೀಂಕೋರ್ಟ್ ತೀರ್ಪಿನ ಬೆನ್ನಲ್ಲೇ 15 ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿಗೆ ಬೈ ಎಲೆಕ್ಷನ್ ಉಸ್ತುವಾರಿಯಾಗಿ ನೇಮಕಮಾಡಲಾಗಿದೆ. ಇನ್ನು ಯಾವ್ಯಾವ ಕ್ಷೇತ್ರದ ಉಸ್ತುವಾರಿಯನ್ನ ಯಾರಿಗೆ ನೀಡಲಾಗಿದೆ ಅನ್ನೋದನ್ನ ಮುಂದೆ ನೋಡಿ..
ಬೆಂಗಳೂರು, [ನ.13]: ಸುಪ್ರೀಂ ಕೋರ್ಟ್‌ನಲ್ಲಿ ಅನರ್ಹರ ಶಾಸಕರ ಪ್ರಕರಣದ ತೀರ್ಪು ಹೊರಬೀಳುತ್ತಿದ್ದಂತೆಯೇ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹರಾಗಿರುವ ಶಾಸಕರನ್ನು ಗುರುವಾರ ಬಿಜೆಪಿಗೆ ಬರಮಾಡಿಕೊಳ್ಳಲು ಈಗಾಗಲೇ ವೇದಿಕೆಯೂ ಸಹ ಸಿದ್ಧವಾಗಿದೆ.
ಬೆಳಗ್ಗೆ 10.30ಕ್ಕೆ ಅನರ್ಹ ಶಾಸಕರು ಪಕ್ಷ ಸೇರುತ್ತಿದ್ದಂತೆಯೇ ಸಂಜೆ ವೇಳೆಗೆ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಅಷ್ಟೇ ಅಲ್ಲದೇ ಅನರ್ಹರ ಕ್ಷೇತ್ರಗಳಿಗೆ ಉಸ್ತುವಾರಿಗಳನ್ನ ನೇಮಕ ಮಾಡಿಲಾಗಿದೆ.
ಅನರ್ಹ ಶಾಸಕರನ್ನು ಮನೆ ತುಂಬಿಸಿಕೊಳ್ಳಲು ಮುಹೂರ್ತ ಫಿಕ್ಸ್ ಮಾಡಿದ ಬಿಜೆಪಿ
ಇಂದು [ಬುಧವಾರ] ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ 15 ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಸಾರಥ್ಯದಲ್ಲಿ ಚುನಾವಣಾ ಉಸ್ತುವಾರಿಗಳನ್ನ ನೇಮಿಸಲಾಗಿದೆ.
ಕಮಲ ಕಲಿಗಳ ಉಸ್ತುವಾರಿ..!
* ಅಥಣಿ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ಕೆ. ಎಸ್. ಈಶ್ವರಪ್ಪ
* ಕಾಗವಾಡ: ಸಚಿವ ಸಿ.ಸಿ. ಪಾಟೀಲ್, ಮಹಾಂತೇಶ್ ಕವಟಿಗಮಠ
* ಗೋಕಾಕ್: ಕೇಂದ್ರ ಸಚಿವ ಸುರೇಶ್ ಅಂಗಡಿ
* ಯಲ್ಲಾಪುರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕೋಟಾ ಶ್ರೀನಿವಾಸಪೂಜಾರಿ
* ಹಿರೇಕೆರೂರು: ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಯುಬಿ ಬಣಕಾರ್
* ರಾಣೆಬೆನ್ನೂರು: ಸಚಿವ ಜಗದೀಶ್ ಶೆಟ್ಟರ್, ಪ್ರಭು ಚವ್ಹಾಣ್
* ವಿಜಯನಗರ: ಡಿಸಿಎಂ ಗೋವಿಂದ ಕಾರಜೋಳ
* ಚಿಕ್ಕಬಳ್ಳಾಪುರ: ಕೇಂದ್ರ ಸಚಿವ ಸದಾನಂದ ಗೌಡ, ಸಚಿವ ಸಿ. ಟಿ. ರವಿ, ಬಚ್ಚೆಗೌಡ
* ಕೆ. ಆರ್. ಪುರಂ: ಅಶೋಕ್, ಸದಾನಂದಗೌಡ, ನಂದೀಶ್ ರೆಡ್ಡಿ
* ಯಶವಂತಪುರ: ಶೋಭಾ ಕರಂದ್ಲಾಜೆ, ಜಗ್ಗೇಶ್
* ಮಹಾಲಕ್ಷ್ಮಿ ಲೇಔಟ್: ಸಚಿವರಾದ ವಿ. ಸೋಮಣ್ಣ ಹಾಗೂ ಎಸ್. ಸುರೇಶ್ ಕುಮಾರ್
* ಕೆ. ಆರ್. ಪೇಟೆ: ಸಚಿವ ಮಾಧುಸ್ವಾಮಿ, ಬಿ.ವೈ ವಿಜಯೇಂದ್ರ
* ಹುಣಸೂರು: ಸಚಿವ ಶ್ರೀರಾಮುಲು, ಸಂಸದ ಪ್ರತಾಪ್ ಸಿಂಹ
* ಶಿವಾಜಿ ನಗರ: ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಶಾಸಕ ಎಸ್.ರಘು
* ಹೊಸಕೋಟೆ: ಡಿಸಿಎಂ ಡಾ. ಅಶ್ವಥ್ ನಾರಾಯಣ್