ವಿಧಾನಮಂಡಲ ಜಂಟಿ ಅಧಿವೇಶನಕ್ಕೆ ಸಿದ್ಧತೆ/  ಮೊದಲಿಗೆ ರಾಜ್ಯಪಾಲರ ಭಾಷಣ/ ಜ.  28 ರಿಂದ ಅಧಿವೇಶನ ಆರಂಭ/ ಹನ್ನೊಂದು ಬಿಲ್ ಗಳ ಮಂಡನೆಗೆ ಸಿದ್ಧತೆ

ವಿಧಾನಮಂಡಲ ಜಂಟಿ ಅಧಿವೇಶನಕ್ಕೆ ಸಿದ್ಧತೆಯಾಗಿದೆ. ಒಂದು ದೇಶ,ಒಂದು ಚುನಾವಣೆ ಚರ್ಚೆಯಾಗಬೇಕಿದೆ. ಕಳೆದ ಬಾರಿಯೇ ಇದು ಚರ್ಚೆಗೆ ಬಂದಿತ್ತು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಬೆಂಗಳೂರು(ಜ. 27 )  ಗುರುವಾರ(ಜ.  28) ವಿಧಾನಮಂಡಲ ಜಂಟಿ ಅಧಿವೇಶನ ನಡೆಯಲಿದೆ. ಗುರುವಾರ ಬೆಳಗ್ಗೆ 11 ಗಂಟೆಗೆ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಎರಡು ಸದನಗಳ ಸದಸ್ಯರನ್ನು ಉದ್ದೇಶಿಸಿ ರಾಜ್ಯಪಾಲರು ಮಾತನಾಡಲಿದ್ದದಾರೆ.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿವರ ನೀಡಿದ್ದಾರೆ. ರಾಜ್ಯಪಾಲರನ್ನ ಭೇಟಿಯಾಗಿ ಜಂಟಿ ಅಧಿವೇಶನಕ್ಕೆ ಆಹ್ವಾನಿಸಿದ್ದೇನೆ. ಗುರುವಾರದಿಂದ ಫೆಬ್ರುವರಿ 5 ರ ವರೆಗೆ ಅಧಿವೇಶನ ನಡೆಯಲಿದೆ. 11 ಬಿಲ್ ಮಂಡನೆಯಾಗಲಿವೆ. ಈ ಬಿಲ್ ಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಕರ್ನಾಟಕದಲ್ಲಿ ಲವ್ ಜಿಹಾದ್ ಮಸೂದೆ ಕತೆ ಏನಾಯ್ತು?

ಯಾವುದೇ ವಿಧೇಯಕಗಳಿದ್ದರೂ, ಸರ್ಕಾರ ನಮಗೆ ಪೂರ್ವಭಾವಿಯಾಗಿ ನಮ್ಮ ಕಚೇರಿಗೆ ಕಳಿಸಿಕೊಡಬೇಕು. ಸದಸ್ಯರಿಗೆ ನಾವು ವಿಧೇಯಕ ಪ್ರತಿಗಳನ್ನ ಕೊಟ್ಟು ಚರ್ಚೆ ನಡೆಸಬೇಕು. ಹೀಗಾಗಿ ಸರ್ಕಾರ ವಿಧಾನ ಸಭೆ ಕಚೇರಿಗೆ ಮೊದಲೇ ಬಿಲ್ ಗಳನ್ನ ಕಳಿಸಿಕೊಡಬೇಕು ಎಂದು ಸ್ಪೀಕರ್ ತಿಳಿಸಿದರು.

ಯಾವುದೇ ಬಿಲ್ ಇದ್ದರೂ ಬೇಗ ಕೊಡಿ, ಹಾಗೆ  ಕೊಟ್ಟರೆ ನಮಗೂ,ಸದಸ್ಯರಿಗೂ ಅನುಕೂಲವಾಗಲಿದೆ. ನಗರಪಾಲಿಕೆ ವಿಧೇಯಕ, ನಗರಪಾಲಿಕೆಗಳ ಎರಡನೇ ತಿದ್ದುಪಡಿ ವಿಧೇಯಕ ಬಂದಿವೆ. ಗೋ ಹತ್ಯೆ ನಿಷೇಧ ಕಾಯ್ದೆ ಕೌನ್ಸಿಲ್ ನಲ್ಲಿದೆ. ಅದು ಅಲ್ಲಿಂದ ಬರಬೇಕಿದೆ. ತೋಟಗಾರಿಕೆ, ಸಾಂಕ್ರಾಮಿಕ, ಮೋಟಾರುವಾಹನ, ಲೋಕಾಯುಕ್ತ 3ನೇ ತಿದ್ದುಪಡಿ ವಿಧೇಯಕ ಬಂದಿವೆ.ಏಟ್ರಿಯಾ ವಿವಿ, ವಿದ್ಯಾಶಿಲ್ಪ ವಿವಿ ವಿಧೇಯಕಗಳು ಇವೆ. ಮುರುಘರಾಜೇಂದ್ರ ಟ್ರಸ್ಟ್ ವಿಧೇಯಕಗಳು ಸ್ವೀಕೃತಿಯಾಗಿವೆ ಎಂದು ತಿಳಿಸಿದರು.

ಈ ವಿಧೇಯಕಗಳನ್ನ ನಾವು ಈ ಬಾರಿ ವಿಧಾನ ಸಭೆಯಲ್ಲಿ ಮಂಡನೆಯಾಗಲಿವೆ. ಈ ಬಾರಿಯೂ ಅಧಿವೇಶನದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಅವಕಾಶವಿಲ್ಲ. ಈ ಬಾರಿ ಕೋವಿಡ್ 19 ಟೆಸ್ಟ್ ಕಡ್ಡಾಯವಿಲ್ಲ. ಆದ್ರೆ ಟೆಸ್ಟಿಂಗ್ ಗೆ ಕೌಂಟರ್ ವ್ಯವಸ್ಥೆ ಇರಲಿದೆ. ಬೇಕಾದವರು ಟೆಸ್ಟ್ ಮಾಡಿಸಿಕೊಳ್ಳಬಹುದು ಎಂದು ತಿಳಿಸಿದರು.

ಮಾರ್ಚ್ ನಲ್ಲಿ ಬಜೆಟ್ ಅಧಿವೇಶನ ನಡೆಯಲಿದೆ. ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ನಡೆದ ಘಟನೆ ಒಂದು ಕಪ್ಪುಚುಕ್ಕೆ. ಇದು ದೇಶದ ಜನರ ಮನಸಿಗೆ ಘಾಸಿ ತಂದಿದೆ. ಘಟನೆಗೆ ಯಾರ ಪ್ರಚೋದನೆ ಇತ್ತೋ ಮುಂದೆ ತನಿಖೆ ವೇಳೆಗೊತ್ತಾಗಲಿದೆ. ಸಂವಿಧಾನ ಆಶಯಕ್ಕೆ ಮೀರಿ  ಘಟನೆ ನಡೆದಿದೆ. ಸಂವಿಧಾನ ಒಪ್ಪಿಕೊಂಡಿರುವ ದಿನ ಈ ರೀತಿಯ ಘಟನೆ ನಡೆದಿದ್ದನ್ನ ನಾನು ಖಂಡಿಸುತ್ತೇನೆ ಎಂದರು.

ಒಂದು ದೇಶ,ಒಂದು ಚುನಾವಣೆ ಚರ್ಚೆಯಾಗಬೇಕಿದೆ. ಕಳೆದ ಬಾರಿಯೇ ಇದು ಚರ್ಚೆಗೆ ಬಂದಿತ್ತು. ಈ ಸಾರಿ ಅದನ್ನ ಚರ್ಚೆಗೆ ಎತ್ತುಕೊಳ್ಳುವ ಸಾಧ್ಯತೆಯಿದೆ. ಕೊರೊನಾ ಹಿನ್ನೆಲೆ ಮುನ್ನಚ್ಚರಿಕೆ ವಹಿಸಿದ್ದೇವೆ. ಸ್ಯಾನಿಟೈಸ್,ಮಾಸ್ಕ್ ಕಡ್ಡಾಯ ಮಾಡಲಾಗಿದೆ. ವಿಧಾನ ಪರಿಷತ್ ಘಟನೆ ವಿಚಾರವಾಗಿ ಆತ್ಮಾವಲೋಕನಕ್ಕೆ ಒಂದು ದಿನ ಚರ್ಚೆಗೆ ದಿನಾಂಕ ನಿಗದಿ ಮಾಡುತ್ತೇನೆ ಎಂದರು.