Asianet Suvarna News Asianet Suvarna News

ಧಾರವಾಡ: ಪೂರ್ವ ಬಿಟ್ಟರೆ ಆರೂ ಕ್ಷೇತ್ರಗಳಲ್ಲಿ ಲಿಂಗಾಯತರೇ ನಿರ್ಣಾಯಕರು!

ನಾವೆಷ್ಟೇ ಅಭಿವೃದ್ಧಿ ಹೊಂದಿದರೂ ಅಭಿವೃದ್ಧಿ ರಾಜಕಾರಣ ಮಾಡಿದರೂ ಕೆಲವೇ ಕೆಲವು ಸಂದರ್ಭಗಳನ್ನು ಹೊರñ Üುಪಡಿಸಿ ಜಾತಿ ಆಧಾರದ ಮೇಲೆ ಚುನಾವಣೆ ನಡೆಯುವುದಂತೂ ಸತ್ಯ. ಯಾರೇ ಎಷ್ಟೇ ಪ್ರಯತ್ನ ನಡೆಸಿದರೂ ಜಾತಿಬಲ, ಹಣ ಬಲ ಇದ್ದವನೇ ಅಧಿಕಾರದ ಗದ್ದುಗೆ ಹಿಡಿದಿರುವ ಅದೆಷ್ಟೋ ಉದಾಹರಣೆಗಳು ನಮ್ಮೆದುರಿಗಿವೆ.

Karnataka Assembly Elections Who Will Win Hubli-Dharwad Constituency rav
Author
First Published Mar 9, 2023, 9:13 AM IST

ಬಸವರಾಜ ಹಿರೇಮಠ

 ಧಾರವಾಡ (ಮಾ.9) : ನಾವೆಷ್ಟೇ ಅಭಿವೃದ್ಧಿ ಹೊಂದಿದರೂ ಅಭಿವೃದ್ಧಿ ರಾಜಕಾರಣ ಮಾಡಿದರೂ ಕೆಲವೇ ಕೆಲವು ಸಂದರ್ಭಗಳನ್ನು ಹೊರñ Üುಪಡಿಸಿ ಜಾತಿ ಆಧಾರದ ಮೇಲೆ ಚುನಾವಣೆ ನಡೆಯುವುದಂತೂ ಸತ್ಯ. ಯಾರೇ ಎಷ್ಟೇ ಪ್ರಯತ್ನ ನಡೆಸಿದರೂ ಜಾತಿಬಲ, ಹಣ ಬಲ ಇದ್ದವನೇ ಅಧಿಕಾರದ ಗದ್ದುಗೆ ಹಿಡಿದಿರುವ ಅದೆಷ್ಟೋ ಉದಾಹರಣೆಗಳು ನಮ್ಮೆದುರಿಗಿವೆ.

ಇದೀಗ ರಾಜ್ಯ ವಿಧಾನಸಭೆ ಚುನಾವಣೆ(Karnataka Assembly election) ಹೊಸ್ತಿಲಲ್ಲಿದೆ. ಮತ್ತೆ ಜಾತಿ ಮುನ್ನೆಲೆಗೆ ಬರುತ್ತಿದ್ದು, ಅದರಲ್ಲೂ ಉತ್ತರ ಕರ್ನಾಟಕ(North Karnataka) ಭಾಗದಲ್ಲಿ ಲಿಂಗಾಯತ ಮತ(Lingayata voters)ದಾರರು ಅತ್ಯಧಿಕ ಸಂಖ್ಯೆಯಲ್ಲಿರುವ ಕಾರಣ ಅವರೇ ನಿರ್ಣಾಯಕ ಮತದಾರರು. ಅದೇ ರೀತಿ ಧಾರವಾಡ ಜಿಲ್ಲೆಯಲ್ಲಿರುವ ಏಳು ಕ್ಷೇತ್ರಗಳ ಪೈಕಿ ಮೀಸಲು ಕ್ಷೇತ್ರವಾಗಿರುವ ಹು-ಧಾ ಪೂರ್ವದಲ್ಲಿ ಮಾತ್ರ ಹೊರತು ಪಡಿಸಿ ಉಳಿದೆಲ್ಲ ಆರು ಕ್ಷೇತ್ರಗಳಲ್ಲಿ ಲಿಂಗಾಯತ ಸಮುದಾಯದ ಮತದಾರರೇ ನಿರ್ಣಾಯಕರು.

ಹುಬ್ಬಳ್ಳಿ: ಒಳ್ಳೆಯ ಆಡಳಿತ ನೀಡುವುದು ಬಿಜೆಪಿ ಡಿಎನ್‌ಎದಲ್ಲಿದೆ: ಸಮೀರ್

ಜಿಲ್ಲೆಯ ಮತದಾರರ ಅಂಕಿ-ಸಂಖ್ಯೆ ಗಮನಿಸಿದರೆ ಇದು ಸ್ಪಷ್ಟವಾಗಿ ತಿಳಿದು ಬರುತ್ತದೆ. ಜಿಲ್ಲೆಯಲ್ಲಿ 14,79,450 ಮತದಾರರಿದ್ದು, ಈ ಪೈಕಿ ಪುರುಷರು-7,50,636, ಮಹಿಳೆಯರು-7,28,714 ಹಾಗೂ ಇತರೆ- 100 ಮತದಾರರಿದ್ದಾರೆ.

ಕ್ಷೇತ್ರವಾರು ಮತಹಳ ಜಾತಿಗಳ ಮತಗಳೆಷ್ಟು?

ನವಲಗುಂದ ಕ್ಷೇತ್ರ:

ಸಚಿವ ಶಂಕರ ಪಾಟೀಲ ಮುನೇನಕೊಪ್ಪ(Shankara patil munenkoppa) ಪ್ರತಿನಿಧಿಸಿರುವ ನವಲಗುಂದ ಕ್ಷೇತ್ರದಲ್ಲಿ 2,03,777 ಮತದಾರರು ಇದ್ದು, ಪುರುಷ-1,04,200, ಮಹಿಳೆ- 99,570, ಇತರೆ- 7 ಮತದಾರರಿದ್ದಾರೆ. ಲಿಂಗಾಯತ- 67,000, ಕುರುಬ- 45,000, ಮುಸ್ಲಿಂ- 35,000, ಎಸ್ಸಿ/ಎಸ್ಟಿ- 30,000, ರೆಡ್ಡಿ- 15,000, ಇತರೆ- 11,500 ಇದ್ದಾರೆ.

ಕುಂದಗೋಳ:

ಕಾಂಗ್ರೆಸ್‌ ಶಾಸಕಿ ಕುಸುಮಾವತಿ ಶಿವಳ್ಳಿ(Congress MLA Kusumavati shivalli) ಪ್ರತಿನಿಧಿಸಿರುವ ಕುಂದಗೋಳ ಕ್ಷೇತ್ರದಲ್ಲಿ ಒಟ್ಟು ಮತದಾರರು- 1,87,513, ಪುರುಷ- 96,923, ಮಹಿಳೆ- 90,590 ಮತದಾರರಿದ್ದಾರೆ. ಜಾತಿವಾರು ಗಮನಿಸಿದಾಗ, ಲಿಂಗಾಯತ- 52,000, ಕುರುಬ- 37,000, ಮುಸ್ಲಿಂ- 28,000, ಎಸ್ಸಿ/ಎಸ್ಟಿ- 23,000, ಬ್ರಾಹ್ಮಣ- 9,000, ಇತರೆ- 38,000 ಮತದಾರರಿದ್ದಾರೆ.

ಧಾರವಾಡ ಗ್ರಾಮೀಣ:

ಬಿಜೆಪಿಯ ಅಮೃತ ದೇಸಾಯಿ(BJP MLA Amrit desai) ಪ್ರತಿನಿಧಿಸಿರುವ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಒಟ್ಟು ಮತದಾರರು- 2,06,711, ಪುರುಷ- 1,04,646, ಮಹಿಳೆ- 1,02,051, ಇತರೆ- 14 ಇದ್ದಾರೆ. ಜಾತಿವಾರು ಲೆಕ್ಕಾಚಾರ ಮಾಡಿದರೆ, ಲಿಂಗಾಯತ- 73,000, ಮುಸ್ಲಿಂ- 45,000, ಎಸ್ಸಿ/ಎಸ್ಟಿ- 32,000, ಮರಾಠಾ- 30,000, ಕುರುಬ- 13,000, ಬ್ರಾಹ್ಮಣ- 6000, ಇತರೆ- 7500 ಇದ್ದಾರೆ.

ಹು-ಧಾ ಮೀಸಲು ಕ್ಷೇತ್ರ:

ಇನ್ನು, ಕಾಂಗ್ರೆಸ್‌ನ ಪ್ರಸಾದ ಅಬ್ಬಯ್ಯ ಪ್ರತಿನಿಧಿಸಿರುವ ಹುಬ್ಬಳ್ಳಿ-ಧಾರವಾಡ ಪೂರ್ವ ಮೀಸಲು ಕ್ಷೇತ್ರ. ಅಲ್ಲಿ ಒಟ್ಟು ಮತದಾರರು- 1,94,201, ಪುರುಷ- 97,926, ಮಹಿಳೆ- 96264, ಇತರೆ- 11 ಇದ್ದಾರೆ. ಇಲ್ಲಿ ಜಾತಿವಾರು ಗಮನಿಸಿದಾಗ, ಮುಸ್ಲಿಂ -57000, ಲಿಂಗಾಯತ- 50,000, ಎಸ್ಸಿ/ಎಸ್ಟಿ- 42,000, ಮರಾಠಾ- 20,000, ಬ್ರಾಹ್ಮಣ- 18,000 ಹಾಗೂ ಇತರೆ- 7000 ಮತದಾರರಿದ್ದಾರೆ.

ಹು-ಧಾ ಸೆಂಟ್ರಲ್‌:

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌(Jagadish Shettar) ಪ್ರತಿನಿಧಿಸಿರುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ ಒಟ್ಟು ಮತದಾರರು- 2,42,700, ಪುರುಷ- 1,21,695, ಮಹಿಳೆ- 1,20,972, ಇತರೆ- 33 ಮತದಾರರಿದ್ದಾರೆ. ಇಲ್ಲಿ ಜಾತಿವಾರು ಲೆಕ್ಕಾಚಾರ ಮಾಡಿದರೆ, ಲಿಂಗಾಯತ- 71,000, ಮುಸ್ಲಿಂ- 43,000, ಎಸ್ಸಿ/ಎಸ್ಟಿ- 32,000, ಕ್ರೈಸ್ತರು- 26,500, ಮರಾಠಾ- 22,700, ಬ್ರಾಹ್ಮಣ- 22,000 ಹಾಗೂ ಇತರೆ- 25,000 ಮತದಾರರಿದ್ದಾರೆ.

ಹು-ಧಾ ಪಶ್ಚಿಮ:

ಬಿಜೆಪಿಯ ಅರವಿಂದ ಬೆಲ್ಲದ(BJP MLA Arvind Bellad) ಪ್ರತಿನಿಧಿಸಿರುವ ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ ಒಟ್ಟು ಮತದಾರರು- 2,55,154, ಪುರುಷ- 1,27,248, ಮಹಿಳೆ- 1,27,879, ಇತರೆ- 27 ಇದ್ದಾರೆ. ಜಾತಿವಾರು ಲೆಕ್ಕಾಚಾರದಂತೆ ಲಿಂಗಾಯತ- 82,000, ಮುಸ್ಲಿಂ- 65,000, ಎಸ್ಸಿ/ಎಸ್ಟಿ- 42,500, ಮರಾಠಾ- 25,000, ಬ್ರಾಹ್ಮಣ- 22,000, ಇತರೆ- 19,000 ಇದ್ದಾರೆ.

ಕಲಘಟಗಿ:

ಹಾಗೆಯೇ ಬಿಜೆಪಿ ಸಿ.ಎಂ. ನಿಂಬಣ್ಣವರ ಪ್ರತಿನಿಧಿಸಿರುವ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರು- 1,89,394, ಪುರುಷ- 97,998, ಮಹಿಳೆ- 91,388, ಇತರೆ- 8 ಇದ್ದಾರೆ. ಜಾತಿವಾರು ನೋಡಿದಾಗ, ಲಿಂಗಾಯತ- 60,000, ಮರಾಠಾ- 40,000, ವಾಲ್ಮೀಕಿ- 30,500, ಮುಸ್ಲಿಂ- 22,500, ಎಸ್ಸಿ- 20,000, ಇತರೆ- 16,000 ಮತದಾರರಿದ್ದಾರೆ.

ಜಾತಿ ಲೆಕ್ಕಾಚಾರದಲ್ಲಿ ಟಿಕೆಟ್‌...

ಧಾರವಾಡ ಜಿಲ್ಲೆಯ ಎಲ್ಲ ಏಳು ಕ್ಷೇತ್ರಗಳ ಮತದಾರರ ಸಂಖ್ಯೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಲಿಂಗಾಯತರೇ ಪ್ರಮುಖ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಮುಸ್ಲಿಂ, ಎಸ್ಸಿ-ಎಸ್ಟಿಹಾಗೂ ಮರಾಠಾ ಸಮುದಾಯದ ಮತದಾರರು ನಂತರ ಸ್ಥಾನ ಪಡೆದುಕೊಂಡಿದ್ದಾರೆ. ಈ ಸ್ಥಾನಗಳು ಕೆಲವು ಕ್ಷೇತ್ರಗಳಲ್ಲಿ ತುಸು ಅದಲು-ಬದಲಾಗುತ್ತದೆ.

'ಇಷ್ಟು ವರ್ಷ ಕಾಂಗ್ರೆಸ್ ಕತ್ತೆ ಕಾಯ್ತಾ ಇತ್ತಾ'?; ಜೋಶಿ ಹೇಳಿಕೆಗೆ ಕಾಂಗ್ರೆಸ್ಸಿಗರ ಆಕ್ರೋಶ

ಉದಾಹರಣೆಗೆ ನವಲಗುಂದದಲ್ಲಿ 2ನೇ ಸ್ಥಾನ ಕುರುಬರು ಪಡೆಯುತ್ತಾರೆ. ಅಲ್ಲದೇ, ಈ ಕ್ಷೇತ್ರದಲ್ಲಿ ರೆಡ್ಡಿ ಸಮುದಾಯದ ಮತದಾರರೂ ಇದ್ದಾರೆ. ಕಲಘಟಗಿಯಲ್ಲಿ 2ನೇ ಸ್ಥಾನ ಮರಾಠಾ ಸಮುದಾಯ ಪಡೆಯುತ್ತದೆ. ಒಟ್ಟಾರೆ, ಯಾವ ಕ್ಷೇತ್ರದಲ್ಲಿ ಜಾತಿ ಬಲ ಎಷ್ಟಿದೆಯೋ ಆ ಪ್ರಮಾಣದಲ್ಲಿ ಅಲ್ಲಿನ ಸಮುದಾಯಗಳ ಮುಖಂಡರಿಗೆ ರಾಜಕೀಯ ಪಕ್ಷಗಳು ಮಣೆ ಹಾಕುತ್ತಿದ್ದು, ಅಳೆದು ತೂಗಿ ಟಿಕೆಟ್‌ ನೀಡಲು ಮುಂದಾಗಿವೆ.

Follow Us:
Download App:
  • android
  • ios