Karnataka Assembly election: ನಾಳೆಯಿಂದ ದಾವಣಗೆರೆಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ
ಕಾಂಗ್ರೆಸ್ ಪಕ್ಷದಿಂದ ಪ್ರಜಾಧ್ವನಿ ಕಾರ್ಯಕ್ರಮವನ್ನು ಮಾ.10 ಮತ್ತು 11ರಂದು ಜಿಲ್ಲೆಯ ವಿವಿಧ ಕಡೆಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ತಿಳಿಸಿದರು.
ದಾವಣಗೆರೆ (ಮಾ.9) : ಕಾಂಗ್ರೆಸ್ ಪಕ್ಷದಿಂದ ಪ್ರಜಾಧ್ವನಿ ಕಾರ್ಯಕ್ರಮವನ್ನು ಮಾ.10 ಮತ್ತು 11ರಂದು ಜಿಲ್ಲೆಯ ವಿವಿಧ ಕಡೆಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾ.10ರಂದು ಬೆಳಿಗ್ಗೆ 11ಕ್ಕೆ ಚನ್ನಗಿರಿಯಲ್ಲಿ, ಸಂಜೆ 4ಕ್ಕೆ ಬಸವಾಪಟ್ಟಣ, 6ಕ್ಕೆ ಜಗಳೂರು ಹಾಗೂ ಮಾ.11ರ ಬೆಳಿಗ್ಗೆ 11ಕ್ಕೆ ಹೊನ್ನಾಳಿ, ಮಧ್ಯಾಹ್ನ 3.30ಕ್ಕೆ ಹರಿಹರದಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ನಡೆಯಲಿದೆ ಎಂದರು. ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah), ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್(Saleem ahmde congress), ಪ್ರಜಾಧ್ವನಿ(Prajadhwani) ಉಸ್ತುವಾರಿ ಬಸವರಾಜ ರಾಯರೆಡ್ಡಿ(Basavaraj Rayareddy), ಎಂ.ಬಿ.ಪಾಟೀಲ್, ಸತೀಶ ಜಾರಕಿಹೊಳಿ(Satish jarkiholi), ಡಾ.ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜನ, ಜಮೀರ್ ಅಹಮ್ಮದ್ ಸೇರಿದಂತೆ ಅನೇಕ ಮುಖಂಡರು ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಹೇಳಿದರು.
ತುಂಡಾಗಿ ಬಿದ್ದ ಸೇಬಿನ ಹಾರ: ಡಾ.ಜಿ.ಪರಮೇಶ್ವರ ಪಾರು; ಸೇಬಿಗೆ ಮುಗಿಬಿದ್ದ ಕಾರ್ಯಕರ್ತರು!
ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಡಿದ್ದ ಶೇ.40 ಕಮಿಷನ್ ಆರೋಪಕ್ಕೆ ಕೆಎಸ್‌ಡಿಎಲ್ ಅಧ್ಯಕ್ಷರಾಗಿದ್ದ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ(Madalu virupakshappa) ಭ್ರಷ್ಟಾಚಾರದ ಪ್ರಕರಣವೇ ಕನ್ನಡಿ ಹಿಡಿದಂತಿದೆ. ಭ್ರಷ್ಟಾಚಾರದ ಆರೋಪ ಹೊತ್ತಿರುವ ಶಾಸಕ ವಿರೂಪಾಕ್ಷಪ್ಪಗೆ ಪ್ರಕರಣ ನಡೆದ 2-3 ದಿನದಲ್ಲೇ ನಿರೀಕ್ಷಣಾ ಜಾಮೀನು ಸಿಕ್ಕಿರುವುದು ನಾಯಾಲಯದ ಬಗ್ಗೆಯೇ ಸಾರ್ವಜನಿಕ ವಲಯದಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ ಎಂದು ದೂರಿದರು.
ಇಂದು ರಾಜ್ಯವ್ಯಾಪಿ ಸಾಂಕೇತಿಕ ಪ್ರತಿಭಟನೆ:
ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಮಾ.9ರಂದು ಕಾಂಗ್ರೆಸ್‌ನಿಂದ ರಾಜ್ಯವ್ಯಾಪಿ ಸಾಂಕೇತಿಕ ಪ್ರತಿಭಟನೆ ನಡೆಸಲಿದೆ. ಗುರುವಾರ ಬೆಳಿಗ್ಗೆ 8ಕ್ಕೆ ಇಲ್ಲಿನ ಶ್ರೀ ಜಯದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದೆ. ಭ್ರಷ್ಟಾಚಾರ ಮುಕ್ತ ಕರ್ನಾಟಕಕ್ಕಾಗಿ ಬಿಜೆಪಿ ಅಧಿಕಾರದಿಂದ ಕೆಳಗಿಳಿಯಬೇಕಾಗಿದೆ ಎಂದು ತಿಳಿಸಿದರು.
ಬಿಜೆಪಿ ಕೈಗೊಂಡಿರುವುದು ಭ್ರಷ್ಟಾಚಾರದ ಸಂಕಲ್ಪ ಯಾತ್ರೆ, ಶೇ.40 ಭ್ರಷ್ಟಾಚಾರದಿಂದಾಗಿ ಶೋಷಣೆ, ಹಿಂಸೆ, ಬೆಲೆ ಏರಿಕೆಯಿಂದಾಗಿ ಜನರ ಬದುಕು ಸರ್ವನಾಶವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೂ ಜನರಿಗೆದ್ರೋಹ ಮಾಡಿದ್ದನ್ನು ಬಿಟ್ಟರೆ, ಬೇರೇನೂ ಮಾಡಿಲ್ಲ. ಗುತ್ತಿಗೆದಾರರಿಂದ ಶೇ.40 ಕಮಿಷನ್ ದಂಧೆ ನಡೆಯುತ್ತಿದೆಯೆಂಬುದಕ್ಕೆ ಮಾಡಾಳು ವಿರುಪಾಕ್ಷಪ್ಪ ಪ್ರಕರಣವೇ ಬಲವಾದ ಸಾಕ್ಷಿ ಎಂದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ, ಮಾಜಿ ಮೇಯರ್ ಅನಿತಾಯ ಬಾಯಿ ಮಾಲತೇಶ, ಸುಷ್ಮಾ ಪಾಟೀಲ್, ಅಯೂಬ್ ಪೈಲ್ವಾನ್, ಎಸ್.ಮಲ್ಲಿಕಾರ್ಜುನ, ಎ.ನಾಗರಾಜ, ಹಿರಿಯ ವಕೀಲ ಪ್ರಕಾಶ ಪಾಟೀಲ್, ಮೈನುದ್ದೀನ, ಮಹಮ್ಮದ್ ಜಿಕ್ರಿಯಾ, ಕೆ.ಜಿ.ಶಿವಕುಮಾರ ಇತರರಿದ್ದರು.
Prajadhwani yatre: ಜನ ಜೀವನ ಸುಧಾರಣೆಗೆ ಕಾಂಗ್ರೆಸ್ ಕಂಕಣಬದ್ಧ: ಬಿಕೆ ಹರಿಪ್ರಸಾದ್
ಬಿಜೆಪಿ ಸರ್ಕಾರ ಪ್ರತಿ ಕಾಮಗಾರಿಗೆ ಶೇ.40 ಕಮಿಷನ್ ಪಡೆಯುತ್ತಿದ್ದು, ಗುತ್ತಿಗೆದಾರರು ಇದಕ್ಕೆ ಬಲಿಯಾಗುತ್ತಿದ್ದಾರೆ. ಇನ್ನೆಷ್ಟುಜನ ಬಲಿಯಾಗಬೇಕು. ಸಮಾಧಿ ಮೇಲೆ ಅಧಿಕಾರ ನಡೆಸುತ್ತಿರುವ ಬಿಜೆಪಿಯನ್ನು ತೊಲಗಿಸಬೇಕಿದ್ದು, ಕಾಂಗ್ರೆಸ್‌ನ ಹೋರಾಟಕ್ಕೆ ಜನತೆ ಸ್ವಯಂ ಪ್ರೇರೆಯಿಂದ ಸಹಕರಿಸಬೇಕು.
ದಿನೇಶ ಕೆ.ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಎಲ್ಲೆಲ್ಲಿ ಸಾಗಲಿದೆ ಪ್ರಜಾಧ್ವನಿ ಯಾತ್ರೆ
- ಮಾ.10ರಂದು ಚನ್ನಗಿರಿ ತಾಲೂಕಿಗೆ ಭೇಟಿ
- 10ರಂದು ಸಂಜೆ 4ಕ್ಕೆ ಬಸವಾಪಟ್ಟಣ
- 10ರಂದು 6ಕ್ಕೆ ಜಗಳೂರಿಗೆ ತೆರಳಿ, ರಾತ್ರಿ ದಾವಣಗೆರೆಯಲ್ಲಿ ವಾಸ್ತವ್ಯ
- ಮಾ.11ರ ಬೆಳಿಗ್ಗೆ 11ಕ್ಕೆ ಹೊನ್ನಾಳಿ.
- 11ರಂದು ಮಧ್ಯಾಹ್ನ 3.30ಕ್ಕೆ ಹರಿಹರ, ನಂತರ ಸಂಜೆ 6ಕ್ಕೆ ರಾಣೆಬೆನ್ನೂರಿಗೆ ಪಯಣ.