Asianet Suvarna News Asianet Suvarna News

ಶಿವಮೊಗ್ಗದ ಶಾಂತಿಗಾಗಿ ನನ್ನ ಸ್ಪರ್ಧೆ: ಆಯನೂರು ಮಂಜುನಾಥ್‌

ಕಾಂಗ್ರೆಸ್‌ ಒಂದು ಧರ್ಮ, ಬಿಜೆಪಿ ಇನ್ನೊಂದು ಧರ್ಮ ಇಟ್ಟುಕೊಂಡು ರಾಜಕೀಯ ಮಾಡುತ್ತಿರುವಾಗ ಜನರು ಶಾಂತಿ ವಾತಾವರಣವನ್ನು ಬಯಸುತ್ತಿದ್ದಾರೆ. ಹೀಗಾಗಿ ನನ್ನ ಸ್ಪರ್ಧೆ ಅನಿವಾರ್ಯವಾಯಿತು ಎಂದು ಜೆಡಿಎಸ್‌ ಅಭ್ಯರ್ಥಿ ಆಯನೂರು ಮಂಜುನಾಥ್‌ ಹೇಳಿದರು.

Karnataka assembly election Competition for peace and order says ayanur manjunath rav
Author
First Published May 7, 2023, 9:11 AM IST

ಶಿವಮೊಗ್ಗ (ಮೇ.7) : ಕಾಂಗ್ರೆಸ್‌ ಒಂದು ಧರ್ಮ, ಬಿಜೆಪಿ ಇನ್ನೊಂದು ಧರ್ಮ ಇಟ್ಟುಕೊಂಡು ರಾಜಕೀಯ ಮಾಡುತ್ತಿರುವಾಗ ಜನರು ಶಾಂತಿ ವಾತಾವರಣವನ್ನು ಬಯಸುತ್ತಿದ್ದಾರೆ. ಹೀಗಾಗಿ ನನ್ನ ಸ್ಪರ್ಧೆ ಅನಿವಾರ್ಯವಾಯಿತು ಎಂದು ಜೆಡಿಎಸ್‌ ಅಭ್ಯರ್ಥಿ ಆಯನೂರು ಮಂಜುನಾಥ್‌ ಹೇಳಿದರು.

ಇಲ್ಲಿನ ಪ್ರೆಸ್‌ ಟ್ರಸ್ಟ್‌ನಲ್ಲಿ ಶನಿವಾರ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರೆಸ್‌ಟ್ರಸ್ಟ್‌ ಸಹಯೋಗದಲ್ಲಿ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಅವರು ಮಾತನಾಡಿ, ಶಿವಮೊಗ್ಗ ಕೋಮುಗಲಭೆಗೆ ಪ್ರಚೋದನೆಗೆ ನೀಡುತ್ತಿರುವ ನಾಯಕರ ಹೇಳಿಕೆಗಳಿಂದ ನಗರದ ವಾತಾವರಣವೇ ಹದಗೆಟ್ಟು ಹೋಗಿದೆ. ಅಶಾಂತಿ, ಸಂಘರ್ಷಮಯ ವಾತಾವರಣ ಬದಲಿಸಬೇಕಿದೆ. ಇಲ್ಲವಾದರೆ ಒಡೆದುಹೋಗಿರುವ ಮನಸುಗಳು ಛಿದ್ರವಾಗುತ್ತವೆ. ಹೀಗಾಗಿ ಶಾಂತಿ ವಾತಾವರಣ ಸೃಷ್ಠಿ ಮಾಡುವ ಅನಿವಾರ್ಯತೆ ಇದೆ. ಜನರು ಭಯಸುತ್ತಿರುವುದು ಇದನ್ನೇ ಎಂದರು.

ರಾತ್ರೋರಾತ್ರಿ ಮನೆಗೆ ನುಗ್ಗಿದ ಚಿರತೆ: ಕಕ್ಕಾಬಿಕ್ಕಿಯಾದ ಮನೆಯ ನಿವಾಸಿಗಳು!

ಆದಾಯಕ್ಕೆ ಯಾವ ಮಾರ್ಗವೂ ಇಲ್ಲ:

ನನಗೆ ಶಾಸಕ ಸ್ಥಾನ ಹೊಸದಲ್ಲ, ಲೋಕಸಭೆ ರಾಜ್ಯಸಭೆ, ವಿಧಾನ ಪರಿಷತ್ತು ಸದನದ ಮನೆಗಳಲ್ಲಿ ಕೆಲಸ ಮಾಡಿದ್ದೇನೆ. ಅಗತ್ಯ ಬಿದ್ದಾಗ ಆಡಳಿತ ಪಕ್ಷದಲ್ಲಿದ್ದರೂ ಕಾರ್ಮಿಕರ ಸಮಸ್ಯೆ ಮತ್ತು ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸದನದಲ್ಲಿ ಮಂಡಿಸಿದ್ದೇನೆ. ಸರ್ಕಾರವನ್ನು ಎಚ್ಚರಿಸುವ ಪ್ರಯತ್ನ ಮಾಡಿ ಗಮನ ಸೆಳೆದಿದ್ದೇನೆ. ನಗರದಲ್ಲಿ ಈಚೆಗೆ ದುಬಾರಿ ವೆಚ್ಚದ ಆಸ್ಪತ್ರೆಗಳು, ಹೋಟೆಲ್‌ಗಳು ಎಲ್ಲವೂ ನಿರ್ಮಾಣವಾಗಿವೆ. ಆದರೆ, ಜನರಿಗೆ ಉದ್ಯೋಗ ಕೊಡುವ ಯಾವ ಸಂಸ್ಥೆ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ರೈಲು, ವಿಮಾನ ಸಹಿತ ಎಲ್ಲ ಮೂಲಸೌಕರ‍್ಯಗಳಿದ್ದರೂ ಕೈಗಾರಿಕೆಗಳು ಬರುತ್ತಿಲ್ಲ. ನಮ್ಮ ಮಕ್ಕಳಿಗೆ ಉದ್ಯೋಗವಿಲ್ಲ. ಹೀಗಾಗಿ, ನಿರುದ್ಯೋಗ ಸಮಸ್ಯೆ. ಶಿವಮೊಗ್ಗ ನಗರವನ್ನು ಸುರಕ್ಷಿತ ನಗರವನ್ನಾಗಿ ಮಾಡಲು ಪ್ರಥಮ ಆದ್ಯತೆ ಎಂದು ಹೇಳಿದರು.

ಅಲ್ಲದೇ ಕೊರೋನಾ ಸಂದರ್ಭ ಕೆಲಸ ಕಾರ್ಯ ಇಲ್ಲದೆ ಬಡ ವರ್ಗದ ಜನ ನಲುಗಿ ಹೋಗಿದ್ದಾರೆ. ದುಡಿಮೆಯನ್ನೇ ನಂಬಿಕೊಂಡು ಜೀವನ ಮಾಡುತ್ತಿರುವ ಸ್ವಾಭಿಮಾನಿಗಳು ಕೊರೋನಾ ಕಾಲದಲ್ಲಿ ಜನಪ್ರತಿನಿಧಿಗಳು ನೀಡಿದ ಆಹಾರ ಕಿಟ್‌ ಅನ್ನು ಅನಿವಾರ್ಯ ಕಾರಣದಿಂದ ಭಿಕ್ಷೆಯ ರೀತಿಯ ಪಡೆದು ಕಣ್ಣೀರು ಹಾಕಿದ್ದಾರೆ. ಅವರ ನೋವನ್ನು ಅರ್ಥ ಮಾಡಿಕೊಂಡಿದ್ದೇನೆ. ಅಲ್ಲದೇ ನಗರದಲ್ಲಿ ದುಬಾರಿ ಶಾಲೆ-ಕಾಲೇಜುಗಳನ್ನು ಕಟ್ಟುವರಿಗೆ ಒಂದು ಸರ್ಕಾರಿ ಶಾಲೆಯನ್ನು ನಿರ್ಮಿಸಲು ಆಗುತ್ತಿಲ್ಲ. ಇದರ ಪರಿಣಾಮ ಬಡ ವರ್ಗದ ಜನರು ಲಕ್ಷ ಲಕ್ಷ ರು.ಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸುರಿದು ತಮ್ಮ ಮಕ್ಕಳಿಗೆ ವಿದ್ಯಭ್ಯಾಸ ಕೊಡಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ. ಇದರಿಂದ ಸರ್ಕಾರಿ ಶಾಲೆಗಳಿಗೆ ಒತ್ತು ಕೂಡ ನನ್ನ ಆದ್ಯತೆ ಎಂದು ತಿಳಿಸಿದರು.

ಶಿವಮೊಗ್ಗದಲ್ಲಿ ಸ್ಮಾರ್ಚ್‌ ಸಿಟಿ ಯೋಜನೆ ಸರಿಯಾಗಿಲ್ಲ. ಕಳಪೆಯಾಗಿದೆ. ಅಗೆಯುವುದೇ ಒಂದು ದೊಡ್ಡ ಕಾಮಗಾರಿಯಾಗಿದೆ. ಭ್ರಷ್ಟಾಚಾರ ತಾಂಡವವಾಡಿದೆ. ಈ ಯೋಜನೆಯಲ್ಲಿ ಜ®ತಾ ಪ್ರಾತಿನಿಧ್ಯವಿಲ್ಲ. ಹಾಗಾಗಿಯೇ ಅದರ ಹೆಸರು ಕೆಡುತ್ತಿದೆ. ಪ್ರತಿ ವಾರ್ಡ್‌ನಲ್ಲಿ ಕಾರ್ಪೊರೇಟರ್‌ ಮುಖ್ಯಸ್ಥನಲ್ಲ. ಆ ವಾರ್ಡಿನ ನಾಗರಿಕ ಸಮಿತಿಯವರು ಮುಖ್ಯ. ಆದರೆ, ವಾರ್ಡ್‌ ಸಮಿತಿಯನ್ನೇ ಮೂಲೆಗುಂಪು ಮಾಡಿದ್ದಾರೆ. ಜನರ ವಿಶ್ವಾಸ ಗಳಿಸಿದೇ ಕಾಮಗಾರಿ ಮಾಡಿದ್ದಾರೆ ಎಂದು ದೂರಿದರು.

ಸಂವಾದದಲ್ಲಿ ಪ್ರೆಸ್‌ ಟ್ರಸ್ಟ್‌ ಅಧ್ಯಕ್ಷ ಎನ್‌.ಮಂಜುನಾಥ, ಕಾರ್ಯದರ್ಶಿ ನಾಗರಾಜ ನೇರಿಗೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ‍್ಯದರ್ಶಿ ಸಂತೋಷ್‌ ಕಾಚಿನಕಟ್ಟೆಹಾಜ​ರಿ​ದ್ದರು.

ಎದುರಾಳಿಗಳಿಗೆ ಪ್ರಬುದ್ಧತೆ ಇಲ್ಲ

ನನ್ನ ಈಗಿನ ವಿಧಾನಸಭೆ ಎದುರು ಸ್ಪರ್ಧಿಗಳು ತಾವು ಕಾರ್ಪೊರೇಟ್‌ ಆದಾಗ ಮಾಡಿದ ಕಾರ್ಯ ನೋಡಿದಾಗ ಪ್ರಬುದ್ಧತೆ ಕಂಡುಬಂದಿಲ್ಲ. ಲೀಜ್‌ ಅವಧಿ ಇದ್ದಾಗಾಲೇ ರಾತ್ರೋರಾತ್ರಿ ಸಿಟಿ ಸೆಂಟರ್‌ ಮಾಲ್‌ನ ಬಾಡಿಗೆ ಅವಧಿಯನ್ನು 99 ವರ್ಷಕ್ಕೆ ಬರೆದು ಕೊಡುವ ಪ್ರಯತ್ನ ನಡೆಯಿತು. ಆಗ ಒಬ್ಬರು ಆಡಳಿತ ಪಕ್ಷದ ನಾಯಕರಾಗಿದ್ದರೆ, ಇನ್ನೊಬ್ಬರು ವಿರೋಧ ಪಕ್ಷದ ನಾಯಕರಾಗಿದ್ದರು. ಕೆಲವು ನಾಯಕರ ಹಪಾಹಪಿತನದಿಂದ ಶಿವಮೊಗ್ಗ ಹಾಳಾಗಿದೆ. ಸುರಕ್ಷಿತ ವಾತಾವರಣ ಇಲ್ಲ ಎಂದು ಆಯ​ನೂರು ಮಂಜು​ನಾಥ್‌ ಅಭಿ​ಪ್ರಾ​ಯಿ​ಸಿ​ದ​ರು.

ಆಯನೂರಿಗೆ ಇಷ್ಟೊಂದು ಮಾನ್ಯತೆ ಖುಷಿ ತಂದಿದೆ

ನಾನು ಶಿವಮೊಗ್ಗದಲ್ಲಿ ಸ್ಪರ್ಧೆ ಮಾಡುತ್ತಿರುವ ಕಾರಣದಿಂದ ಆಯನೂರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಬರುತ್ತಿದ್ದಾರೆ. ಇಷ್ಟುವರ್ಷ ಚುನಾವಣೆಗಳಲ್ಲಿ ಮುಖ್ಯಮಂತ್ರಿಗಳು ಮಾತ್ರ ಬಂದುಹೋಗುತ್ತಿದ್ದರು. ಈಗ ಪ್ರಧಾನಿ ಮಂತ್ರಿಯೇ ಆಯನೂರಿಗೆ ಬರುತ್ತಿದ್ದಾರೆ. ನನ್ನ ಹುಟ್ಟೂರು ಇಷ್ಟೊಂದು ಮಾನ್ಯತೆ ನೀಡುವುದು ನೋಡಿ ಖುಷಿಯಾಗಿದ್ದೇನೆ ಎಂದು ಆಯನೂರು ಮಂಜುನಾಥ್‌ ಹೇಳಿದರು.

ಇಲ್ಲಿನ ನಾಯಕರ ಮೇಲೆ ಜನರ ವಿಶ್ವಾಸ ಕಡಿಮೆಯಾದಾಗ ಈ ರೀತಿ ಕೇಂದ್ರದ ಮಂತ್ರಿಗಳು ಬಂದು ಪ್ರಚಾರ ಮಾಡುವುದು ಅನಿವಾರ್ಯವಾಗುತ್ತದೆ. ಸ್ಥಳೀಯ ಬಿಜೆಪಿಯ ನಾಯಕರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಹೀಗಾಗಿ ಅವರು ಮೋದಿಯನ್ನು ಕರೆಸಿ ಮತ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಮೋದಿ ಆಗಮನದಿಂದ ದೊಡ್ಡ ಬದಲಾವಣೆ ಏನೂ ಆಗಲ್ಲ ಎಂದರು.

 

ರ್ಮ​ಸಿಂಗ್‌, ಮಲ್ಲಿ​ಕಾ​ರ್ಜುನ ಖರ್ಗೆ ಬಂಗಾ​ರ​ಪ್ಪರ ಕಣ್ಣು​ಗ​ಳಿ​ದ್ದಂತೆ: ಮಧು ಬಂಗಾರಪ್ಪ

ಇತ್ತೀಚೆಗೆ ರಾಜ್ಯದಲ್ಲಿ ಗ್ಲೋಬಲ್‌ ಇನ್ವೆಸ್ಟರ್ಸ್‌ ಮೀಟ್‌ ಆಯಿತು. ಉದ್ಯಮಿಗಳು ಇದ್ದರೂ ಯಾರೂ ಶಿವಮೊಗ್ಗದಲ್ಲಿ ಇನ್ವೆಸ್ಟ್‌ ಮಾಡಲು ಬರಲಿಲ್ಲ. ಹೀಗಾಗಿ, ಸ್ಥಳೀಯವಾಗಿ ಉದ್ಯೋಗ ಸಿಗದೇ ಇಲ್ಲಿನ ಯುವಕರು ಬೇರೆ ಜಿಲ್ಲೆ, ರಾಜ್ಯಗಳಿಗೆ ತೆರಳುತ್ತಿದ್ದಾರೆ. ಇದರಿಂದ ನಗರ ವೃದ್ಧಾಶ್ರಮವಾಗುತ್ತಿದೆ. ಕೋಮುಗಲಭೆಯಿಂದÜ ಸಾವಿರಾರು ಜನ ಬೀದಿಗೆ ಬಿದ್ದರು. ದಿನನಿತ್ಯ ದುಡಿಯುವವರ ತುತ್ತಿಗೂ ಕಷ್ಟವಾಯಿತು. ಈ ವಾತಾವರಣ ಬದಲಾಯಿಸಬೇಕೆಂದರೆ ಬದಲಾವಣೆ ಮುಖ್ಯ

- ಆಯನೂರು ಮಂಜುನಾಥ, ಅಭ್ಯರ್ಥಿ, ಜೆಡಿ​ಎ​ಸ್‌

Follow Us:
Download App:
  • android
  • ios