* ಬಿಜೆಪಿಯ ಮತ್ತೋರ್ವ ಶಾಸಕನ ಲವ್ವಿ-ಡವ್ವಿ* ಲೇಡಿ ಅಧಿಕಾರಿ ಜತೆ ಮಾತನಾಡಿರೋ ಆಡಿಯೋ ವೈರಲ್* ಬಿಜೆಪಿ ಶಾಸಕ ಬಸವರಾಜ ದಢೇಸ್ಗೂರು ಫೋನ್​ ಸಂಭಾಷಣೆ

ಕೊಪ್ಪಳ, (ಜ.04): ಕರ್ನಾಟಕ ಬಿಜೆಪಿಯ ಮತ್ತೋರ್ವ ಶಾಸಕನ ಲವ್ವಿ-ಡವ್ವಿ ಆಡಿಯೋ ಲೀಕ್(Audio Viral )​ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ.

ಕೊಪ್ಪಳ(Koppal) ಜಿಲ್ಲೆಯ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಢೇಸ್ಗೂರು ಫೋನ್​ ಸಂಭಾಷಣೆಯ ಆಡಿಯೋ ಫುಲ್​​​ ವೈರಲ್​​​​ ಆಗಿದ್ದು, ನೀನ್​​​​ ನನಗೆ ಕೊಟ್ಟ ಮಾತಿಗೆ ತಪ್ಪಿದ್ದೀಯ. ನನ್ನ ಬಳಿ ಬರದಿದ್ರೆ ಕಚೇರಿ ಬಳಿ ಬರ್ತೀನಿ, ರಂಪಾಟ ಮಾಡ್ತೀನಿ ಎಂದು ಮಹಿಳಾ ಅಧಿಕಾರಿ ಆಡಿಯೋದಲ್ಲಿ ಮಾತನಾಡಿದ್ದಾರೆ. ದಮ್ಮಯ್ಯಾ ಅಲ್ಲಿಗೆ ಬರ್ಬೇಡಾ. ನಾನಿರೋ ಕಡೆ ಬಾ ಎಂದು ಬಸವರಾಜ ದಢೇಸ್ಗೂರು ಮನವಿ ಮಾಡಿಕೊಂಡಿರೋ ಸುಮಾರು ಐದಾರು ನಿಮಿಷದ ಆಡಿಯೋ ವೈರಲ್ ಆಗಿದೆ.

ಕೇಂದ್ರ ಸಚಿವಗೂ ಸಿಡಿ ಭೀತಿ: ಪ್ರಸಾರ ಮಾಡದಂತೆ ನಿರ್ಬಂಧಕಾಜ್ಞೆ ತಂದ ಸದಾನಂದಗೌಡ

ನನಗೆ ಟಾರ್ಚರ್ ಯಾಕೆ ಮಾಡಬೇಕು. ಹೊತ್ತಿಲ್ಲದ ಹೊತ್ತಿನಲ್ಲಿ ಯಾಕೆ ಟಾರ್ಚರ್ ಕೊಡ್ತೀರಿ. ನಾನು ಕಾರಟಗಿಯಲ್ಲಿ ಇದ್ದೇನೆ. ಇಲ್ಲಿಗೆ ಬನ್ನಿ, ಮಾತನಾಡಿ ಎಲ್ಲಾ ಮುಗಿಸಬಹುದು. ನಾ ಆಫೀಸ್ ಹತ್ತಿರವೇ ಹೋಗುವೆ. ನೀವು ಅಲ್ಲಿಗೆ ಬನ್ನಿ. ಆಫೀಸ್ ಹತ್ತಿರ ಬರಲಿಲ್ಲ ಅಂದ್ರೇ.. ನಿನ್ನ ಮಾನ ಮರ್ಯಾದೆ ಎಲ್ಲಾ ಹರಾಜು ಹಾಕುವೆ. ನೀನು ಆಫೀಸ್ ಹತ್ತಿರವೇ ಬಾ ಅಂತೆಲ್ಲಾ ಆಡಿಯೋದಲ್ಲಿದೆ.

 ನಿನ್ನ ಮಾನ ಹರಾಜು ಹಾಕ್ತೀನಿ ಅಂತಾ ಮಹಿಳಾ ಅಧಿಕಾರಿ ಆಡಿಯೋದಲ್ಲಿ ವಾರ್ನಿಂಗ್ ಕೊಟ್ಟಿದ್ದು, ​​ ಸೋಷಿಯಲ್​ ಮೀಡಿಯಾದಲ್ಲಿ ಆಡಿಯೋ ಭಾರೀ ವೈರಲ್​ ಆಗುತ್ತಿದೆ. ಮೊದಲು ಶಾಸಕ ಬಸವರಾಜ ಮಹಿಳಾ ಅಧಿಕಾರಿಯನ್ನ ಪುಸಲಾಯಿಸಿದ್ದು, ಇದೀಗ ದೂರ ಆಗಿದ್ದಾರೆ. ಇದರಿಂದ ಮಹಿಳೆ ತಿರುಗಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ.

ಡಿಸೆಂಬರ್​​ 13ರಂದೇ ಈ ಸಂಬಂಧ ಎಸ್​ಪಿಗೆ ದೂರು ಹೋಗಿದೆ. ಆದರೆ ಪ್ರಭಾವ ಬೀರಿ ಈ ದೂರಿನ ಸಂಬಂಧ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಕಾಂಗ್ರೆಸ್ ಮಾಜಿ ಶಾಸಕ ಶಿವರಾಜ್​​ ತಂಗಡಗಿ ಗಂಭೀರ ಆರೋಪ ಮಾಡಿದ್ದಾರೆ. 

ಇನ್ನು ಈ ಬಗ್ಗೆ ಸ್ವತಃ ಬಸವರಾಜ ದಢೇಸ್ಗೂರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಅವರು ನನ್ನ ಸಂಬಂಧಿಕರು ಎಂದು ಸಮಜಾಯಷಿ ಕೊಟ್ಟಿದ್ದಾರೆ.

ಮದುವೆ ಮಾಡಿಕೊಳ್ಳುವುದಾಗಿ ಕೈಕೊಟ್ಟಿದ್ದರಿಂದ ಲೇಡಿ ಅಧಿಕಾರಿ ರೊಚ್ಚಿಗೆದ್ದಿದ್ದಾರೆ ಎಂದು ತಿಳಿದುಬಂದಿದ್ದು, ಕನಕಗಿರಿ ಕ್ಷೇತ್ರದಲ್ಲಿ ಈ ಆಡಿಯೋ ಭಾರೀ ಸಂಚಲನ ಮೂಡಿಸಿದೆ.

ಬಿಜೆಪಿ ನಾಯಕರ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಟ್ರಾಲ್ ಮಾಡಲಾಗುತ್ತಿದೆ. ಇದರಿಂದ ಬಿಜೆಪಿಗೆ ಮುಜುಗರ ಉಂಟು ಮಾಡಿದೆ.

ಈ ಹಿಂದೆ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ರಿಲೀಸ್ ಆಗಿದ್ದು, ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಅಲ್ಲದೇ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿ ಬಂತು.

ಬಳಿಕ ಇನ್ನುಳಿದ ಕೆಲ ಸಚಿವರು ಸಹ ತಮ್ಮ ವಿರುದ್ಧ ಯಾವುದೇ ಮಾನಹಾನಿ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳ ಮೇಲೆ ಕೋರ್ಟ್‌ನಿಂದ ತಡೆಯಾಜ್ಞೆ ತಂದಿರುವುದನ್ನು ಇಲ್ಲಿ ಸ್ಮರಿಸಬಹುದು.

 6 ಸಚಿವರು ನಿರ್ಬಂಧಕಾಜ್ಞೆ ತಂದಿದ್ರು
ಈ ಹಿಂದೆ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ಬಹಿರಂಗವಾಗುತ್ತಿದ್ದಂತೆಯೇ ರಾಜ್ಯ ಸರ್ಕಾರದ 6 ಸಚಿವರು ಇದೇ ರೀತಿ ತಮ್ಮ ವಿರುದ್ಧ ಯಾವುದೇ ರೀತಿಯ ಮಾನಹಾನಿಕರ ವರದಿ ಪ್ರಸಾರ ಮಾಡದಂತೆ ಅರ್ಜಿ ಸಲ್ಲಿಸಿ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಪಡೆದಿದ್ದರು.

ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕ್ರೀಡಾ ಸಚಿವ ನಾರಾಯಣಗೌಡ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಸಹ ತಮ್ಮ ವಿರುದ್ಧ ಮಾನಹಾನಿಕರ ವರದಿ ಪ್ರಸಾರ ಮಾಡದಂತೆ ಕೋರ್ಟ್​ಗೆ ಅರ್ಜಿ ಸಲ್ಲಿಸಿ ನಿರ್ಬಂಧ ತಂದಿದ್ದರು. ಆಗ ಇದಕ್ಕೆ ಸದಾನಂದಗೌಡ್ರು ಬೇಸರ ವ್ಯಕ್ತಪಡಿಸಿದ್ದರು