ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ಸಿಗರ ಗೂಂಡಾಗಿರಿ ಹೆಚ್ಚಿದೆ: ಸಂಸದ ಜಾಧವ್
ಯಾಕೆ ಸಂಸದರಿಗೆ ನಮ್ಮ ಹೆಸರು ಗೊತ್ತಿಲ್ಲವೇನು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳುತ್ತಾರೆ, ಯಾರು ತಪ್ಪು ಮಾಡುತ್ತಾರೆ. ಅವರಿಗೆ ಒದ್ದು ಒಳಗೆ ಹಾಕಿ ಎಂದು ಹೇಳುತ್ತಾರೆ, ಆ ಸಂದೇಶ ಯಾರಿಗೆ ಹೋಗಿದೆ ಎಂದು ತಿಳಿದಿಲ್ಲವೆಂದು ಕುಟುಕಿದ ಸಂಸದ ಉಮೇಶ ಜಾಧವ್
ಕಲಬುರಗಿ(ಸೆ.03): ಇಲ್ಲಿನ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಧನಾರಾಜ್ ಮೇಲಿನ ಹಲ್ಲೆ ಹಾಗೂ ಬೆದರಿಕೆ ಘಟನೆ ಉಗ್ರವಾಗಿ ಖಂಡಿಸಿರುವ ಕಲಬುರಗಿ ಬಿಜೆಪಿ ಸಂಸದ ಡಾ. ಉಮೇಶ ಜಾಧವ್ ಇಂತಹ ಘಟನೆಗಳು ಕಾಂಗ್ರೆಸ್ ಆಡಳಿತ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಕಲಬುರಗಿಯಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಕಾಂಗ್ರೆಸ್‌ನ ಜನ, ನೌಕರ ವಿರೋಧಿ ಧೋರಣೆಗೆ ಇವು ಕನ್ನಡಿ ಹಿಡಿಯುತ್ತಿವೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳ ಮೇಲೆ ಹಲ್ಲೆ ಮತ್ತು ಬೆದರಿಕೆ ಹಾಕುವ ಘಟನೆಗಳು, ಪದೇ ಪದೇ ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿದ್ದೆ. ಈ ಘಟನೆ ಸಿಸಿ ಟಿವಿಯಲ್ಲಿ ಸೆರೆ ಆಗಿದೆ. ಸಿಸಿಟಿವಿ ಇಲ್ಲದಿದ್ದರೆ ಇಂತಹ ಘಟನೆಗಳು ಸಹ ಬೆಳಕಿಗೆ ಬರುತ್ತಿಲಿಲ್ಲ. ಈ ಕುರಿತು ನಗರ ಪೊಲೀಸ್ ಕಮೀಷನರ್ ಜೊತೆ ಮಾತನಾಡಿದ್ದೇನೆ . ನೀವು ಸಿಸಿಟಿವಿಯ ದೃಶ್ಯಗಳನ್ನು ನೋಡಿ ಕ್ರಮಕೈಗೊಳ್ಳಿ ಎಂದು ಪೊಲೀಸರಿಗೆ ಹೇಳಿುದ್ದೇನೆಂದು ಜಾಧವ್ ಹೇಳಿದರು.
ಪ್ರಿಯಾಂಕ್ ಖರ್ಗೆ ತಾನೊಬ್ಬನೆ ಕರ್ನಾಟಕವನ್ನ ರಕ್ಷಣೆ ಮಾಡೋ ಹಾಗೆ ಮಾತಾಡ್ತಿದ್ದಾನೆ: ಸಂಸದ ಜಾಧವ್
ಯಾಕೆ ಸಂಸದರಿಗೆ ನಮ್ಮ ಹೆಸರು ಗೊತ್ತಿಲ್ಲವೇನು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳುತ್ತಾರೆ, ಯಾರು ತಪ್ಪು ಮಾಡುತ್ತಾರೆ. ಅವರಿಗೆ ಒದ್ದು ಒಳಗೆ ಹಾಕಿ ಎಂದು ಹೇಳುತ್ತಾರೆ, ಆ ಸಂದೇಶ ಯಾರಿಗೆ ಹೋಗಿದೆ ಎಂದು ತಿಳಿದಿಲ್ಲವೆಂದು ಸಂಸದರು ಕುಟುಕಿದರು.
ಪಾಲಿಕೆ ಹಲ್ಲೆ ಘಟನೆಯ ಗಂಭೀರತೆ ತಿಳಿದುಕೊಂಡು ಸಚಿವರು ಈ ವಿಷಯ ನಾನು ಹೇಳುವ ಮುಂಚೆ ತಪ್ಪಿತಸ್ಥರಿಗೆ ಒಳಗೆ ಹಾಕಬೇಕಿತ್ತು. ಅವಾಗ ನಾವು ಶಬ್ಬಾಶ ಎಂದು ಹೇಳುತ್ತಿದ್ದೇವು, ಯಾವುದೋ ಒಂದು ಬ್ಯಾನರ್ ವಿಚಾರಕ್ಕೆ ೫ ಸಾವಿರ ದಂಡ ಕಟ್ಟಿ ಮುಂಜಾನೆಯಿಂದ ಸಂಜೆವರೆಗೆ ಮಂತ್ರಿ ಪ್ರಚಾರ ಪಡೆದರು, ಹೀಗಾದ್ರೆ ಹೇಗೆ ಎಂದರು.
ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರಿಗೆ ಹುಡುಕಿಕೊಂಡು ಹೋಗಲು ಪೊಲಿಸ್ ಇಲಾಖೆಗೆ ಆಗುತ್ತೆ, ಅದರೇ ಹಲ್ಲೆ ಮಾಡಿದವರಿಗೆ ಸಿಸಿಟಿವಿ ವಿಡಿಯೋ ಇದ್ರೂ ಹಿಡಿಯಲು ಆಗುವುದಿಲ್ಲ, ಅದೇ ಮಣಿಕಂಠ ರಾಠೋಡ ಅವರಿಗೆ ಸ್ನಾನ ಮಾಡುವಾಗಲೇ ಪೊಲೀಸರು ಮನೆ ಹೊಕ್ಕು ಲುಂಗಿ ಮೇಲೆ ಕರೆದುಕೊಂಡು ಬರುತ್ತಾರೆ. ಪಾಲಿಕೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದವರಿಗೆ ಹಾಗೇ ಬಿಟ್ಟು ಬಿಡುತ್ತಾರೆ, ಇದನ್ನು ಗಮನಿಸಿದರೆ ಇವರ ಉದ್ದೇಶ, ಇವರ ಎಲ್ಲಾ ಕಾರ್ಯಕರ್ತರ ಹವಾ ಕಂಟ್ರೋಲ್, ಎಲ್ಲಾ ಕಚೇರಿಗಳಲ್ಲಿ ನಡೆಯಬೇಕು, ಜಂಗಲ್ ರಾಜ್ ಆಗಬೇಕೆಂಬ ಉದ್ದೇಶ ಅವರ ಆಗಿರಬಹುದು ಎಂದು ಸಂಸದ ಡಾ. ಜಾಧವ್ ಕಾಂಗ್ರೆಸ್ ಹಾಗೂ ಪ್ರಿಯಾಂಕ್ ವಿರುದ್ಧ ವಾಗ್ದಾಳಿ ನಡೆಸಿದರು.
ಪದೇ ಪದೇ ನನ್ನ ಯೋಗ್ಯತೆ ಬಗ್ಗೆ ಪ್ರಶ್ನೆ ಮಾಡುತ್ತಾರೆ?:
ಜಾಧವ್ ಅವರಿಗೆ 3.5 ಕಿಮಿ ರಸ್ತೆ ಮಾಡಲು ಯೋಗ್ಯತೆ ಇಲ್ಲ ಅಂತ ಹೇಳುತ್ತಾರೆ. ಸಿಎಂ ಸಿದ್ದರಾಮಯ್ಯನವರ ಬಗ್ಗೆ ಮಾತನಾಡೋ ಯೋಗ್ಯತೆ ಜಾಧವ್‌ಗಿಲ್ಲ ಎನ್ನುತ್ತಾರೆ. ಇವರೇನು ಅದನ್ನ ಕೇಳೋದು. ನಮಗೆ ಗೌರವ ಇದೆ. ಅವರು ನಮ್ಮ ಲೀಡರ್, ಮಾಜಿ ಸಿಎಂ ದಿ. ಧರ್ಮಸಿಂಗ್ ಅವರ ಬಗ್ಗೆ ನಮಗೆ ಗೌರವವಿದೆ. ನಾವು ಅವರ ಬಗ್ಗೆ ಅಗೌರವವಾಗಿ ಮಾತನಾಡಿಲ್ಲ ಎಂದರು.
ಜಿಲ್ಲಾ ಸಚಿವರಿಗೆ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸ ಏನು ಆಗಿದೆ ಎಂದು ಗೊತ್ತಿದ್ದಂತಿಲ್ಲ, ಭಾರತಮಾಲಾ ರೋಡ್ ವರ್ಷಕ್ಕೆ ಎರಡುವರೆ ಸಾವಿರ ಕೋಟಿ ರು., ಮೇಗಾ ಟೆಕ್ಸ್‌ಟೈಲ್ ಪಾರ್ಕ್ ಕೆಲಸ ಆರಂಭವಾಗಿದೆ. ಎರಡ್ಮೂರು ಸಾವಿರ ಕೋಟಿಯಲ್ಲಿ ಜಲಜೀವನ ಮಿಷನ್, 150 ಕೋಟಿ ರು. ಯಲ್ಲಿ ಸನ್ನತಿ ಬ್ರೀಜ್ ಕಂ. ಬ್ಯಾರೇಜ್, ಶಹಬಾದ ಇಎಸ್ ಐ ಆಸ್ಪತ್ರೆ ಹತ್ತಿರದ ಕಾಗಿಣಾ, ಬ್ರೇಜ್ ಕಂ ಬ್ಯಾರೇಜ್, ಇಂತಹ ಅನೇಕ ಅಭಿವೃದ್ಧಿ ಕೆಲಸಗಳು ಅಗುತ್ತಿದೆ.
ನಮಗೆ ಯೋಗ್ಯತೆ ಇಲ್ಲದಕ್ಕೆ ಇಂತಹ ಕೆಲಸಗಳು ಆಗುತ್ತಿದ್ದೆಯಾ ? ಎಂದು ಪ್ರಶ್ನೀಸಿದ ಸಂಸದರು, ನಿಮಗೆ ಯೋಗ್ಯತೆ ಇದಿದ್ದಕ್ಕೆ ನೀವು ಮೊದಲನೆಯ ಬಾರಿಗೆ ಐಟಿಬಿಟಿ ಸಚಿವಾಗಿದ್ರಿ, ನಿಮಗೆ ಯೋಗ್ಯತೆ ಇದಿದ್ದಕ್ಕೆ ನೀವು ಎರಡನೇ ಬಾರಿ ಸಮಿಶ್ರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವ ಆಗಿದ್ರಿ, ನಿಮಗೆ ಯೋಗ್ಯತೆ ಇದ್ದಿದ್ದಕ್ಕೆ ನೀವು ಮೂರನೇ ಬಾರಿ ಗ್ರಾಮೀಣ ಅಭಿವೃದ್ಧಿ ಐಟಿಬಿಟಿ ಪಂಚಾಯತ ರಾಜ್ ಸಚಿವಾಗಿರಿ. ಅದಕ್ಕೆ ನಿಮಗೆ ದೊಡ್ಡ ದೊಡ್ಡ ಖಾತೆಗಳು ನಿಮಗೆ ಯೋಗ್ಯತೆ ಇದ್ದಿದಕ್ಕೆ ನೀಡಿದ್ದಾರೆ. ಐಟಿಬಿಟಿ ಖಾತೆ ಎಂಬಿ ಪಾಟೀಲ ಅವರಿಂದ ತೆಗೆದುಕೊಂಡು ನಿಮಗೆ ಕೊಟ್ಟಿದ್ದಾರೆ ಎಂದು ಮಾತಲ್ಲೇ ಪ್ರಿಯಾಂಕ್‌ಗೆ ತಿವಿದರು.
ಕಲಬುರಗಿ: ಹೆಲ್ತ್ ಇನ್ಸ್‌ಪೆಕ್ಟರ್‌ಗೆ ಥಳಿಸಿದ ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರು?
ಅಭಿವೃದ್ಧಿ ವಿಷಯವಾಗಿ ಬಹಿರಂಗ ಚರ್ಚೆಗೆ ಬನ್ನಿ ಹತ್ತು ವರ್ಷದ ಅವಧಿಯಲ್ಲಿ ಜಿಲ್ಲೆಗೆ ನೀವು ಏನು ಕೆಲಸ ಮಾಡಿದ್ರಿ, ನಾನು ಏನು ಕೆಲಸ ಮಾಡಿದ್ದೇನೆ ಎಂದು ಮುಖಾಮುಖಿ ಚರ್ಚೆಗೆ ಬನ್ನಿ ಅವಾಗ ತೋರಿಸುತ್ತೇನೆ ಎಂದು ಸವಾಲ್ ಹಾಕಿದರು.
ಪ್ರಿಯಾಂಕ್ ಅವರು ಸಮಿಶ್ರ ಸರಕಾರದಲ್ಲಿ ಸಚಿವರಾಗಿದ್ದಾಗ ಜಿಲ್ಲೆಯ ಅಭಿವೃದ್ಧಿಗಾಗಿ ಒಂದು ಕೆಡಿಪಿ ಸಭೆ ಮಾಡಿದ್ದು, ಅಲ್ಲಿ ಅಧಿಕಾರಿಗೆ ಹಿಗ್ಗಾಮುಗ್ಗಾ ಬೈದಿದ್ದು ಅವರ ಸಾಧನೆ ಅಷ್ಟೇ ಅದನ್ನು ಬಿಟ್ರೆ ಬೇರೆ ಏನು ಇಲ್ಲ ಎಂದು ಸಂಸದ ಡಾ. ಜಾಧವ್ ಟಾಂಗ್ ನೀಡಿದರು.