Asianet Suvarna News Asianet Suvarna News

INDIA ಮೈತ್ರಿ ಬೆನ್ನಲ್ಲೇ ಕಾಂಗ್ರೆಸ್‌ಗೆ ಡಬಲ್ ಶಾಕ್, ಪಕ್ಷ ತೊರೆದು ಬಿಜೆಪಿ ಸೇರಿದ ಇಬ್ಬರು ನಾಯಕರು!

ಭಾರತ್ ಜೋಡೋ, ಇಂಡಿಯಾ ಒಕ್ಕೂಟ ಮೈತ್ರಿ ಸೇರಿದಂತೆ ವಿಪಕ್ಷಗಳನ್ನು ಭಾರತವನ್ನು ಒಗ್ಗೂಡಿಸುತ್ತಿರುವ ಕಾಂಗ್ರೆಸ್‌ಗೆ ಡಬಲ್ ಶಾಕ್ ಎದುರಾಗಿದೆ. ಚುನಾವಣೆ ಬೆನ್ನಲ್ಲೇ ಇಬ್ಬರು ಪ್ರಮುಖ ನಾಯಕರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

Jyoti Mirdha  Sawai Singh Chaudhary resing from Rajasthan Congress and joins BJP ahead of Election ckm
Author
First Published Sep 11, 2023, 4:41 PM IST

ಜೈಪುರ(ಸೆ.11) ಲೋಕಸಭಾ ಚುನಾವಣೆ, ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಿಂದ ಬಿಜೆಪಿ ಹಾಗೂ ಕಾಂಗ್ರೆಸ್ ತಯಾರಿ ಜೋರಾಗಿದೆ. ಬಿಜೆಪಿ ಸೋಲಿಸಲು ಪಣತೊಟ್ಟಿರುವ ವಿಪಕ್ಷಗಳು ಇಂಡಿಯಾ ಮೈತ್ರಿ ಒಕ್ಕೂಟ ರಚಿಸಿ ಒಗ್ಗಟ್ಟಿನಿಂದ ಹೋರಾಡಲು ನಿರ್ಧರಿಸಿದೆ.  ಆದರೆ ಪಕ್ಷಗಳನ್ನು ಒಂದೆಡೆ ಸೇರಿಸಿ ಒಂದೇ ಅಭಿಪ್ರಾಯ ಮೂಡಿಸಲು ಹೆಣಗಾಡುತ್ತಿರುವ ವಿಪಕ್ಷಗಳ ನಡುವೆ ಕಾಂಗ್ರೆಸ್‌ಗೆ ಡಬಲ್ ಶಾಕ್ ಎದುರಾಗಿದೆ. ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಇಬ್ಬರು ಪ್ರಮುಖ ನಾಯಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡಿದ್ದಾರೆ.

ರಾಜಸ್ಥಾನ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕಿ ಜ್ಯೋತಿ ಮಿರ್ಧಾ ಹಾಗೂ ಸವಾಯಿ ಸಿಂಗ್ ಚೌಧರಿ ಪಕ್ಷ ತೊರೆದು ಬಿಜೆಪಿ ಸೇರಿಕೊಂಡಿದ್ದಾರೆ.  ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಸ್ಥಾನ ಕಾಂಗ್ರೆಸ್ ತೀವ್ರ ಸಂಕಷ್ಟ ಎದುರಿಸುತ್ತಿದೆ. ಒಂದೆಡೆ ಅಶೋಕ್ ಗೆಹ್ಲೋಟ್ ಬಣ, ಮತ್ತೊಂದೆಡೆ ಸಚಿನ್ ಪೈಲೆಟ್ ಬಣ. ಎರಡೂ ಬಣದಲ್ಲಿ ಗುರುತಿಸಿಕೊಳ್ಳಲು ಇಷ್ಟವಿಲ್ಲದ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.  ಇತ್ತೀಚೆಗೆ ರಾಜಸ್ಥಾನ ಸಚಿವ, ಕಾಂಗ್ರೆಸ್ ನಾಯಕ ರಾಜೇಂದ್ರ ಸಿಂಗ್ ಗುಧಾ ಶಿವಸೇನೆ ಪಕ್ಷ ಸೇರಿಕೊಂಡಿದ್ದಾರೆ.

ಹಿಂದುತ್ವಕ್ಕೂ ಬಿಜೆಪಿಗೂ ಸಂಬಂಧವಿಲ್ಲ, ಪ್ಯಾರಿಸ್‌ನಲ್ಲಿ ರಾಹುಲ್ ಗಾಂಧಿ ವಾಗ್ದಾಳಿ

ಜ್ಯೋತಿ ಮಿರ್ಧಾ ಹಾಗೂ ಸವಾಯಿ ಸಿಂಗ್ ಚೌಧರಿ ದೆಹಲಿಯಲ್ಲಿ ಬಿಜೆಪಿ ಸೇರಿಕೊಂಡಿದ್ದಾರೆ. ರಾಜಸ್ಥಾನ ಬಿಜೆಪಿ ರಾಜ್ಯಾಧ್ಯಕ್ಷ ಸಿಪಿ ಜೋಶಿ ಹಾಗೂ ದೆಹಲಿಯ ಕೆಲ ನಾಯಕರ ಸಮ್ಮುಖದಲ್ಲಿ ಇಬ್ಬರು ನಾಯಕರು ಬಿಜೆಪಿ ಸೇರಿಕೊಂಡಿದ್ದಾರೆ.  ರಾಜಸ್ಥಾನದಲ್ಲಿ ಭರ್ಜರಿ ಪ್ರಚಾರ ಕಾರ್ಯ ಆರಂಭಿಸಿರುವ ಬಿಜೆಪಿ ಪರಿವರ್ತನಾ ರ್ಯಾಲಿ ಆಯೋಜಿಸಿದೆ. ಇದಕ್ಕಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾರನ್ನು ಆಹ್ವಾನಿಸಿದೆ.

ಕಾಂಗ್ರೆಸ್‌ನಲ್ಲಿ ಎರಡು ಬಣಗಳಿಂದ ಈ ಬಾರಿ ಮತ್ತೆ ಅಧಿಕಾರಕ್ಕೇರುವುದು ಕಷ್ಟವಾಗಿದೆ. ಇತ್ತ ಹೈಕಮಾಂಡ್ ಕೂಡ ಇಕ್ಕಟ್ಟಿಗೆ ಸಿಲುಕಿದೆ. ಸಿಎಂ ಅಭ್ಯರ್ಥಿ ಘೋಷಣೆ ಮಾಡಿದರೆ ಒಂದು ಬಣ ಮುನಿಸಿಕೊಂಡು ಚುನಾವಣೆಯಲ್ಲಿ ಪಕ್ಷಕ್ಕೆ ವಿರುದ್ಧಾಗಿ ಕೆಲಸ ಮಾಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ  ಸಿಎಂ ಅಭ್ಯರ್ಥಿ ಘೋಷಣೆ ಮಾಡದೇ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಸಜ್ಜಾಗಿದೆ.ಆದರೆ ಬಣ ರಾಜಕೀಯ ಎಷ್ಟರ ಮಟ್ಟಿಗೆ ಅನುವು ಮಾಡಿಕೊಡಲಿದೆ ಅನ್ನೋ ಸಂಕಷ್ಟ ಹೈಕಮಾಂಡ್ ತಲೆಕೆಡಿಸಿದೆ.

ಪಂಚೆಯೊಳಗೆ ಖಾಕಿ ಚಡ್ಡಿ ಹಾಕಿ ಸಮಾಜವಾದಿ ಅಂದ್ರೆ ಆಗೋದಿಲ್ಲ: ಸಿಎಂ ವಿರುದ್ಧ ಹರಿಪ್ರಸಾದ್‌ ವಾಗ್ದಾಳಿ

Follow Us:
Download App:
  • android
  • ios