ನಾನು ಇರುವಾಗ್ಲೇ ಈ ಕೆಲಸ ಪೂರ್ಣಗೊಳಿಸಿ: ಸಿಎಂಗೆ ದೇವೇಗೌಡ ಡಿಮ್ಯಾಂಡ್
ಹಾಸನ ವಿಮಾನ ನಿಲ್ದಾಣ ಸೇರಿದಂತೆ ಹಲವು ವಿಚಾರಗಳ ಚರ್ಚೆಗಾಗಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಸಿಎಂ ಭೇಟಿಗೆ ತೀರ್ಮಾನಿಸಿದ್ದಾರೆ. ಇನ್ನು ಈ ಬಗ್ಗೆ ಎಚ್‌ಡಿಡಿ ಪ್ರತಿಕ್ರಿಯಿಸಿದ್ದು ಹೀಗೆ..
ಹಾಸನ, (ಜ.24): ತುಮಕೂರು ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಶಿವಮೊಗ್ಗದಲ್ಲಿಯೂ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಹಾಸನದಲ್ಲಿ ಇನ್ನೂ ಕಾಮಗಾರಿ ಆರಂಭವೇ ಆಗಿಲ್ಲ. ನಾನು ಇರುವಾಗಲೇ ಏರ್‌ಪೋರ್ಟ್ ನಿರ್ಮಾಣವಾಗಲಿ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಆಗ್ರಹಿಸಿದ್ದಾರೆ.
"
ಹಾಸನದಲ್ಲಿ ಮಾತನಾಡಿದ ದೇವೇಗೌಡ, ಹಾಸನ ಜಿಲ್ಲೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ನನ್ನ ಅವಧಿಯಲ್ಲಿ ಆಗಿದ್ದು ಇನ್ನೂ ಕೆಲಸ ಆರಂಭ ಆಗಿಲ್ಲ. ನಮ್ಮ ಜಿಲ್ಲೆಯ ಕೆಲಸಗಳಿಗೆ ಆದ್ಯತೆ ನೀಡಿ. ನಾನು ಇರುವಾಗಲೇ ಏರ್‌ಪೋರ್ಟ್ ನಿರ್ಮಾಣವಾಗಲಿ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದರು.
'25 ರಂದು ಸಿಎಂ ಮನೆ ಮುಂದೆ ಪ್ರತಿಭಟನೆ'
ಮುಂದಿನ 2023ಕ್ಕೆ ತಮಗೆ 90 ವರ್ಷ ಪೂರ್ಣಗೊಳ್ಳಲಿದೆ. ಅಲ್ಲಿಯವರೆಗೂ ಯಡಿಯೂರಪ್ಪನವರು ಅಕಾರದಲ್ಲಿರುತ್ತಾರೆ ಎಂದಿದ್ದೇನೆ. ನಿಮ್ಮ ಅಕಾರ ಅವ ಮುಗಿಯುವುದರೊಳಗೆ ವಿಮಾನ ನಿಲ್ದಾಣದ ಉದ್ಘಾಟನೆಯಾಗಲಿ ಎಂದು ಹೇಳಿದ್ದೇನೆ. ಆದರೂ ಜಿಲ್ಲೆಗೆ ಯಡಿಯೂರಪ್ಪನವರು ಯಾವುದೇ ದೊಡ್ಡ ಕೆಲಸವನ್ನು ಮಾಡಿಲ್ಲ ಎಂದು ಆರೋಪಿಸಿದರು.
ಇನ್ನು ಹಾಸನ ಜಿಲ್ಲೆಗೆ ಯಾವುದು ಶಾಶ್ವತ ಯೋಜನೆ ಕೊಟ್ಟಿದ್ದೀರಿ. ಯೋಜನೆ ಬಗ್ಗೆ ಮಾಹಿತಿ ನೀಡಿ ಎಂದು ಮುಖ್ಯಂತ್ರಿಗಳನ್ನ ಪ್ರಶ್ನಿಸಿದ ದೇವೇಗೌಡರು, ಜಿಲ್ಲೆಗೆ ಐಐಟಿ ತರುವ ಬಗ್ಗೆ ಪ್ರಧಾನಿ ಭೇಟಿಯಾಗಿ ಚರ್ಚೆ ನಡೆಸುತ್ತೇನೆ ಎಂದು ಹೇಳಿದರು.