ಪ್ರಧಾನಿಗಳಿಗೆ ನಮ್ಮ ಬೆಂಬಲ ಎಂದ ದೇವೇಗೌಡ್ರು, ಆದ್ರೂ ಮೋದಿ ಮೇಲೆ ಮುನಿಸಿಕೊಂಡ್ರು..!
ಮೋದಿ ಘೋಷಿಸಿದ ಲಾಕ್‌ಡೌನ್ ಬಗ್ಗೆ ಪ್ರತಿಕ್ರಿಯಿಸಿರುವ ದೊಡ್ಡಗೌಡ್ರು, ಪ್ರಧಾನಿಗಳು ಲಾಕ್ ಡೌನ್ ಮೇ 3 ವರೆಗೆ ವಿಸ್ತರಣೆ ಮಾಡಿದ್ದಾರೆ. ಪ್ರಧಾನಿಗಳಿಗೆ ನಮ್ಮ ಬೆಂಬಲ ಇದ್ದು, ಅವರು ಹೇಳಿದ ಎಲ್ಲಾ ಕೆಲಸ ಮಾಡಿದ್ದೇವೆ. ಚಪ್ಪಾಳೆ ಹೊಡೆದು, ದೀಪ ಹಚ್ಚಿದ್ದೇವೆ. ಎಲ್ಲಾ ಹಂತದಲ್ಲಿ ಸಹಕಾರ ಕೊಟ್ಟಿದ್ದೇವೆ. ಈಗಲೂ ಬೆಂಬಲ ಕೊಡ್ತೀವಿ ಎಂದು ಸ್ಪಷ್ಟಪಡಿಸಿದರು.
ಮಾಜಿ ಪ್ರಧಾನಿ ದೇವೇಗೌಡ್ರ ನಡೆ ಶ್ಲಾಘಿಸಿದ ನರೇಂದ್ರ ಮೋದಿ..!
ಬೇರೆ ರಾಷ್ಟ್ರಗಳಲ್ಲಿ ವೇಗವಾಗಿ ಸೋಂಕು ಹರಡುತ್ತಿದೆ. ನಮ್ಮ ದೇಶದಲ್ಲಿ ಜನ ಸಂಖ್ಯೆಗೆ ಹೊಲಿಸಿದ್ರೆ ಸಾವಿನ ಪ್ರಮಾಣ ಕಡಿಮೆ ಇದೆ. ನಮ್ಮ ರಾಜ್ಯದಲ್ಲಿ 9 ಜನ ಸತ್ತಿದ್ದಾರೆ. ಹೀಗಾಗಿ ಮೋದಿ ಅವರ ಕಾರ್ಯಕ್ರಮಕ್ಕೆ ನಾವು ಬೆಂಬಲ ಕೊಡ್ತೀವಿ. ಇದ್ರಲ್ಲಿ ಯಾವುದೇ ಸಂಕೋಚ ಇಲ್ಲ ಎಂದು ಹೇಳಿದರು.
ಕೆಲ ವಿಚಾರಗಳ ಬಗ್ಗೆ ಅಸಮಾಧಾನ
ರಾಜಕೀಯ ಬೇರೆ. ಆದ್ರೆ ಇದಕ್ಕೆ ನಮ್ಮ ಬೆಂಬಲ ಇದೆ. ಕೆಲವು ದೋಷಗಳಿವೆ. ಬಡವರು ನಾನಾ ರೀತಿ ತೊಂದರೆ ಅನುಭವಿಸುತ್ತಿದ್ದಾರೆ. ಇದು ಮೋದಿ ಅವರ ಗಮನಕ್ಕೆ ಬಂದಿದೆ. ಕೆಲವರಿಗೆ ಊಟವೂ ಸಿಗುತ್ತಿಲ್ಲ. ಮಾಲೀಕರಿಗೆ ಸಂಬಳ ಕೊಡಿ ಅದ್ರು ಕೊಡ್ತಿಲ್ಲ ಎಂದು ತಿಳಿಸಿದರು.
ಸರ್ಕಾರದ ಸೂಚನೆ ಕಟ್ಟಡ ಮಾಲೀಕರು ಪಾಲನೆ ಮಾಡಿಲ್ಲ. ಅನೇಕ ರಾಜ್ಯದಲ್ಲಿ ಇದು ಜಾರಿಗೆ ಬಂದಿಲ್ಲ. ದೆಹಲಿಯಲ್ಲಿ 5 ಸಾವಿರ, ಬೇರೆ ಕಡೆ 2 ಸಾವಿರ ಕೊಡ್ತಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಗಳಿಗೆ ಹಣಕಾಸು ಸಹಕಾರ ಕೊಡಿ ಅಂತ ಸಿಎಂಗಳು ಮನವಿ ಮಾಡಿದ್ದಾರೆ. ಆದ್ರೆ ಪ್ರಧಾನಿಗಳು ಏನು ಇದಕ್ಕೆ ಪ್ರತಿಕ್ರಿಯಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾಳೆ (ಬುಧವಾರ) ಕೆಲ ಘೋಷಣೆ ಮಾಡೋದಾಗಿ ಹೇಳಿದ್ದಾರೆ. ನಾಳಿನ ಘೋಷಣೆ ನೋಡಿಕೊಂಡು ಏನು ಮಾಡಬೇಕು ಅಂತ ತೀರ್ಮಾನ ಮಾಡ್ತೀನಿ. ಪ್ರಧಾನಿಗಳು ಘೋಷಣೆ ನಂತರ ನಾನು ಮಾತಾಡುತ್ತೇನೆ ಎಂದರು