ಬೆಂಗಳೂರು, (ಸೆ.20): ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹುಸಿ ಸ್ವಾಭಿಮಾನದ ಕಾಗೆ ಬಂಗಾರ ಎಂದು ಜೆಡಿಎಸ್‌ ಶಾಸಕ ಸಾರಾ ಮಹೇಶ್ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಕುರಿತಾಗಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಆಕ್ರೋಶದ ಬೆನ್ನಲ್ಲೇ ಸಾರಾ ಮಹೇಶ್ ಕೂಡಾ ಟ್ವೀಟ್‌ ಮಾಡುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

'ಸಿದ್ಧರಾಮಯ್ಯ ಊಸರವಳ್ಳಿ ರಾಜಕಾರಣದ ನಿಜ ಬಣ್ಣ ಬಯಲು'

ಜೆಡಿಎಸ್‌ ಅವಕಾಶವಾದಿ ಪಕ್ಷ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಇದರಿಂದ ಕೆಂಡಾಮಂಡಲಾಗಿರುವ ಜೆಡಿಎಸ್ ಮುಖಂಡರು ಸಿದ್ದರಾಮಯ್ಯ ಅವರ ವಿರುದ್ಧ ಟ್ವಿಟ್ಟರ್‌ನಲ್ಲಿ ಕಿಡಿಕಾರುತ್ತಿದ್ದಾರೆ.

ಅಧಿಕಾರದ ಆಸೆಗಾಗಿ ಪಕ್ಷಾಂತರ ಮಾಡಿ ಸಮಾಜವಾದದ ಸೋಗನ್ನು ಕಳಚಿಕೊಂಡ ಸಿದ್ದರಾಮಯ್ಯನವರು ಹುಸಿ ಸ್ವಾಭಿಮಾನದ ಕಾಗೆ ಬಂಗಾರ ಎಂದು ಸಾರಾ ಮಹೇಶ್ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ತಾವು ಬೆಳೆದು ಬಂದ ಪಕ್ಷಕ್ಕೆ ದ್ರೋಹ ಬಗೆದ, ಹತ್ತಿದ ಏಣಿಯನ್ನು ಒದೆಯುವ ಜಾಯಮಾನದ ಸಿದ್ದರಾಮಯ್ಯ ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ.2/2

— Sa Ra Mahesh (@SaRa_Mahesh_JDS) September 20, 2020

ಸ್ವಾರ್ಥ ರಾಜಕಾರಣಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ. ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿ ಸನ್ಯಾಸಿ ಆದವರಂತೆ ಮಾತನಾಡುತ್ತಿರುವ ಸಿದ್ದರಾಮಯ್ಯ ನಮ್ಮ ಪಕ್ಷದ ಬಗ್ಗೆ ಮಾತನಾಡುವ ಕನಿಷ್ಠ ನೈತಿಕತೆಯೂ ಇಲ್ಲ. ತಾವು ಬೆಳೆದು ಬಂದ ಪಕ್ಷಕ್ಕೆ ದ್ರೋಹ ಬಗೆದ, ಹತ್ತಿದ ಏಣಿಯನ್ನು ಒದೆಯುವ ಜಾಯಮಾನದ ಸಿದ್ದರಾಮಯ್ಯ ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ನೋಡಿ |  ಕಾಂಗ್ರೆಸ್ ಸೇರಿದ ಜೆಡಿಎಸ್‌ ಮುಖಂಡ 

"