Asianet Suvarna News Asianet Suvarna News

ಸಿದ್ದು ಸಿಎಂ ಆಗಿದ್ದಕ್ಕೆ ನಾನು 2 ಸಲ ಶಾಸಕನಾದೆ: ರೇವಣ್ಣಗೆ ಜೆಡಿಎಸ್‌ ನಾಯಕನಿಂದಲೇ ತಿರುಗೇಟು

*   ಅನುದಾನ ತಾರತಮ್ಯ ಕುರಿತು ಚರ್ಚೆ
*   ನನಗೆ ಅನುದಾನ ಕೊಟ್ಟ ಯಡಿಯೂರಪ್ಪ
*  ಸಿದ್ದು, ಯಡಿಯೂರಪ್ಪ ಹತ್ತಿರ ಕೆಲಸ ಮಾಡಿಸಿಕೊಳ್ಳುವುದು ಹೇಗೆಂದು ಗೊತ್ತಿದೆ 

JDS MLA KM Shivalingegowda Talks Over Former CM Siddaramaiah grg
Author
Bengaluru, First Published Sep 22, 2021, 8:57 AM IST
  • Facebook
  • Twitter
  • Whatsapp

ಕೋಲಾರ(ಸೆ.22): ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರಿಂದಲೇ ನಾನು ಎರಡು ಬಾರಿ ವಿಧಾನಸಭೆಗೆ ಬಂದಿದ್ದೇನೆ..!’ ಅನುದಾನ ಹಂಚಿಕೆ ವಿಚಾರದಲ್ಲಿ ಜೆಡಿಎಸ್ ಸದಸ್ಯ ಎಚ್.ಡಿ. ರೇವಣ್ಣ ಮಾತಿಗೆ ಅವರದೇ ಪಕ್ಷದ ಸದಸ್ಯ ಶಿವಲಿಂಗೇಗೌಡ ನೀಡಿದ ತಿರುಗೇಟು ಇದು.

ಮಂಗಳವಾರ ಅನುದಾನ ತಾರತಮ್ಯ ಕುರಿತು ನಡೆದ ಚರ್ಚೆಯಲ್ಲಿ ರೇವಣ್ಣ, ಆಡಳಿತ ಪಕ್ಷದ ಸದಸ್ಯರಿಗೆ 20 ಕೋಟಿ ರು. ನೀಡಿದರೆ ನಮಗೆ ಐದಾರು ಕೋಟಿ ರು. ಆದರೂ ಕೊಡಿ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಶಿವಲಿಂಗೇಗೌಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನನಗೆ ಅನುದಾನ ಕೊಟ್ಟಿದ್ದಾರೆ. ಪದೇ ಪದೇ ಕೊಟ್ಟಿಲ್ಲ ಎಂದು ಹೇಳಿ ಅವರ ಮನಸ್ಸು ನೋಯಿಸಬೇಡಿ. ನಾವು ವಿರೋಧ ಪಕ್ಷದಲ್ಲಿ ದ್ದೇವೆ. ಆಡಳಿತ ಪಕ್ಷದವರ ಕೈ ಮುಗಿಯಲೇಬೇಕು. ಸಿದ್ದರಾಮಯ್ಯ ಮುಖ್ಯ ಮಂತ್ರಿ ಆಗಿದ್ದರಿಂದಲೇ ನಾನು 2 ಬಾರಿ ವಿಧಾನಸಭೆಗೆ ಬಂದಿದ್ದೇನೆ. 300 ಕೋಟಿ ರು. ಅನ್ನು 530 ಹಳ್ಳಿಗಳಿಗೆ ನೀಡಿದ್ದಾರೆ.

ಕಲಬುರಗಿ ಪಾಲಿಕೆ: ಮುಳುಗುವ ಹಡಗಿನ ಜತೆ ಏಕೆ ಬರುತ್ತೀರಿ? ಬಿಜೆಪಿಗೆ ರೇವಣ್ಣ ಟಾಂಗ್ 

ಎತ್ತಿನ ಹೊಳೆ ಯೋಜನೆಯನ್ನು ಮಂಜೂರು ಮಾಡಿದ್ದಾರೆ ಎಂದರು. ಆಗ ರೇವಣ್ಣ , ಶಿವಲಿಂಗೇಗೌಡರಿಗೆ ಚಾಣಾಕ್ಷತನ ಇದೆ. ಶಿವಮೊಗ್ಗ ರಸ್ತೆಯಲ್ಲಿ ಓಡಾಡುತ್ತಾರೆ. ಸಿದ್ದು, ಯಡಿಯೂರಪ್ಪ ಹತ್ತಿರ ಕೆಲಸ ಮಾಡಿಸಿಕೊಳ್ಳುವುದು ಹೇಗೆಂದು ಗೊತ್ತಿದೆ ಎಂದರು.
 

Follow Us:
Download App:
  • android
  • ios