ಮಂಡ್ಯ, (ಜ.31): ಬಿಡಿಎ ಚೇರ್ಮನ್ ಆಗಿದ್ದವನು ಬೀದೀಲಿ ನಿಂತು ಮುಖ್ಯಮಂತ್ರಿ ಬಗ್ಗೆ ಮಾತನಾಡಿದ್ರೆ ಸುಮ್ಮನಿರಲು ಆಗುತ್ತಾ ಎಂದು ಸಚಿವ ಸಿ.ಎಸ್​.ಪುಟ್ಟರಾಜು ಕಿಡಿಕಾರಿದ್ದಾರೆ.

ಇತ್ತೀಚೆಗೆ ಯಶವಂತಪುರ ಕ್ಷೇತ್ರದ ಶಾಸಕ ಎಸ್​.ಟಿ.ಸೋಮಶೇಖರ್ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು.

ಕುಮಾರಸ್ವಾಮಿ ರಾಜೀನಾಮೆ ಹೇಳಿಕೆ ಹಿಂದೆ ಸಿದ್ದರಾಮಯ್ಯ ಶಿಷ್ಯಂದಿರು..?

ಈ ಕಾಂಗ್ರೆಸ್​ ನಾಯಕನ ಟೀಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದ ಕುಮಾರಸ್ವಾಮಿ, ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದರು.

 ಇದೇ ವಿಚಾರವಾಗಿ ಮೇಲುಕೋಟೆಯಲ್ಲಿ ಇಂದು (ಗುರುವಾರ) ಪ್ರತಿಕ್ರಿಯಿಸಿರುವ ಸಚಿವ ಪುಟ್ಟರಾಜು, ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ 5 ವರ್ಷ ಸುಲಲಿತವಾಗಿ ನಡೆಯಬೇಕು ಅಂದ್ರೆ ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟವಾಗಿ ರಾಜ್ಯದ ಕಾಂಗ್ರೆಸ್​ ನಾಯಕರಿಗೆ ಸೂಚನೆ ನೀಡಬೇಕು. 

ಬಿಡಿಎ ಚೇರ್ಮನ್ ಆಗಿದ್ದವನು ಬೀದೀಲಿ ನಿಂತು ಮುಖ್ಯಮಂತ್ರಿ ಬಗ್ಗೆ ಮಾತನಾಡಿದರೆ ಸುಮ್ಮನಿರಲು ಆಗುತ್ತಾ ಎಂದು ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಇದೆಲ್ಲವನ್ನೂ ಕಾಂಗ್ರೆಸ್​ ಹೈಕಮಾಂಡ್​ ಸರಿಪಡಿಸಿಕೊಂಡು ಹೋಗಬೇಕು. ಇಲ್ಲದಿದ್ರೆ ಮುಂದಾಗೋದಕ್ಕೆ ಕಾಂಗ್ರೆಸ್​ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.