Asianet Suvarna News Asianet Suvarna News

ದಳಪತಿಗಳಿಗೆ ಮತ್ತೊಂದು ಶಾಕ್, ಮಹಾಶಿವರಾತ್ರಿಯಂದೇ ಬಿಜೆಪಿ ಸೇರಿದ ಜೆಡಿಎಸ್ ನಾಯಕ

* ಮಹಾಶಿವರಾತ್ರಿ ದಿನದಿಂದ ಜೆಡಿಎಸ್‌ಗೆ ಬಿಗ್ ಶಾಕ್
* ಜೆಡಿಎಸ್‌ನ ಮತ್ತೊಂದು ವಿಕೆಟ್ ಪತನ
* ಅಂತಿಮವಾಗಿ ಬಿಜೆಪಿ ಸೇರ್ಪಡೆಗೊಂಡ ಮಾಜಿ ಶಾಸಕ

JDS devanahalli former mla pillamunishamappa joins bjp On March 1st rbj
Author
Bengaluru, First Published Mar 1, 2022, 9:47 PM IST

ಬೆಂಗಳೂರು, (ಮಾ.01): 2023ರ ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ಹತ್ತಿರವಾಗುತ್ತಿದ್ದಂತೆ ರಾಜಕಾರಣಿಗಳ ಪಕ್ಷಾಂತರ ಶುರುವಾಗಿದೆ.

ಅಂತೆಯೇ, ಬಹುದಿನಗಳಿಂದ ಚರ್ಚೆಯಲ್ಲಿರುವ ಮಾಜಿ ಶಾಸಕ ಪಿಳ್ಳಮುನಿಶ್ಯಾಮಪ್ಪ (Pillamunishamappa) ಅವರು ಕೊನೆಗೂ ನಿರೀಕ್ಷೆಯಂತೆ ಬಿಜೆಪಿ(BJP) ಸೇರ್ಪಡೆಯಾಗಿದ್ದಾರೆ.

Karnataka Politics: ಸಭಾಪತಿ ಹೊರಟ್ಟಿ ಬಿಜೆಪಿಗೆ ಸೇರ್ಪಡೆ?

ಅಸಮಾಧಾನಗೊಂಡು ಜೆಡಿಎಸ್‌ನಿಂದ ದೂರ ಉಳಿದಿದ್ದ ದೇವನಹಳ್ಳಿ ಕ್ಷೇತ್ರದ ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಅವರು ಇಂದು(ಮಂಗಳವಾರ) ಅಧಿಕೃತವಾಗಿ ಬಿಜೆಪಿ ಸೇರಿದರು.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ದೇವನಹಳ್ಳಿ ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಸೇರಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಸಚಿವ ಡಾ. ಕೆ.‌ ಸುಧಾಕರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ, ಸಂಸದ ಪಿ. ಸಿ. ಮೋಹನ್ ಮುಂತಾದವರು ಉಪಸ್ಥಿತರಿದ್ದರು.

2013ರಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದು ಪಿಳ್ಳಮುನಿಶಾಮಪ್ಪ ಗೆಲುವು ಸಾಧಿಸಿದ್ದರು. ನಂತರ 2018ರ ವಿಧಾನಸಭಾ ಚುನಾವಣೆಯ ಕೊನೆಯ ಕ್ಷಣಗಳಲ್ಲಿ ಪಿಳ್ಳಮುನಿಶ್ಯಾಮಪ್ಪ ಅವರಿಗೆ ಜೆಡಿಎಸ್‌ ಟಿಕೆಟ್ ಕೈತಪ್ಪಿತ್ತು. ಆ ನಂತರ ರಾಜಕೀಯದಿಂದ ದೂರವೇ ಉಳಿದಿದ್ದರು. ಆದರೆ ತೆರೆಮರೆಯಲ್ಲಿ ಬಿಜೆಪಿ ರಾಜ್ಯ ಮಟ್ಟದ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು.  ಕಳೆದ ವರ್ಷ ಬಿಜೆಪಿ ಸೇರ್ಪಡೆಯಾಗುತ್ತಾರೆಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಪಿಳ್ಳಮುನಿಶ್ಯಾಮಪ್ಪ ತಟಸ್ಥರಾಗಿಯೇ ಉಳಿದಿದ್ದರು. 

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ನಾಯಕರು ಹೆಚ್ಚಿದ್ದಾರೆ. ಈಗಾಗಲೇ ಮಾಜಿ ಶಾಸಕರಾದ ಮಧು ಬಂಗಾರಪ್ಪ, ಎನ್‌. ಎಚ್. ಕೋನರಡ್ಡಿ ಕಾಂಗ್ರೆಸ್ ಸೇರಿದ್ದಾರೆ. ಅಲ್ಲದೇ ಶಿವಮೊಗ್ಗ ಜಿಲ್ಲಾ ಜೆಡಿಎಸ್‌ ಅಧ್ಯಕ್ಷರಾಗಿದ್ದ ಆರ್. ಎಂ. ಮಂಜುನಾಥ ಗೌಡ ಸಹ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. 

 ಕೋಲಾರ ಶಾಸಕ ಕೆ. ಶ್ರೀನಿವಾಸಗೌಡ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ. ಟಿ. ದೇವೇಗೌಡ ಕಾಂಗ್ರೆಸ್ ಸೇರ್ಪಡೆಯಾವುದು ಖಚಿತವಾಗಿದೆ ಆದ್ರೆ, ಜೆಡಿಎಸ್‌ನ ಹಾಲಿ ಶಾಸಕರಿರುವುದರಿಂದ ಇನ್ನೂ ಕಾಂಗ್ರೆಸ್ ಸೇರ್ಪಡೆಯಾಗಿಲ್ಲ. ಇನ್ನೇನು ಚುನಾವಣೆ ಸಮೀಪಿಸುತ್ತಿದ್ದಂತೆಯೇ ಅಧಿಕೃತವಾಗಿ ಕಾಂಗ್ರೆಸ್ ಸೇರಲಿದ್ದಾರೆ.

ಇನ್ನು ಪ್ರಮುಖವಾಗಿ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರ ಮಾನಸ ಪುತ್ರ ಎಂದೇ ಬಿಂಬಿಸಿಕೊಂಡಿರುವ ಕಡೂರು ಕ್ಷೇತ್ರದ ಮಾಜಿ ಶಾಸಕ ವೈ. ಎಸ್. ವಿ. ದತ್ತಾ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇತ್ತೀಚೆಗೆ ಅಷ್ಟೇ ಸಿದ್ಧಾಂತದ ವಿಚಾರವಾಗಿ ಕುಮಾರಸ್ವಾಮಿ ವಿರುದ್ಧ ಬಹಿರಂಗವಾಗಿಯೇ ಅಮಸಾಧಾನ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ದತ್ತಾ ಜೆಡಿಎಸ್‌ ತೊರೆಯುವುದು ಪಕ್ಕಾ ಎನ್ನುವಂತಾಗಿದೆ. ಆದ್ರೆ, ಅವರು ಅಂತಿಮವಾಗಿ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

ಮುಖ್ಯವಾಗಿ ಪ್ರಸ್ತುತ ವಿಧಾನಪರಿಷತ್ ಸಭಾಪತಿಯಾಗಿರುವ ಬಸವರಾಜ್ ಹೊರಟ್ಟಿ ಅವರು ಸಹ ಬಿಜೆಪಿ ಸೇರುತ್ತಾರೆ ಎನ್ನುವ ಮಾತುಗಳು ರಾಜ್ಯ ರಾಜಕಾರಣದಲ್ಲಿ ಕೇಳಿಬರುತ್ತಿದೆ.

ಹೌದು..

ಪರಿಷತ್‌ ಚುನಾವಣೆಯೊಳಗೆ ಬಸವರಾಜ ಹೊರಟ್ಟಿ(Basavaraj Horatti) ಬಿಜೆಪಿ ಸೇರಲಿದ್ದಾರೆಯೇ? ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ(Vidhan Parishat Election) ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆಯೇ? ಈ ರೀತಿಯ ವದಂತಿಗಳು ರಾಜಕೀಯ(Politics) ವಲಯದಲ್ಲಿ ಹರಿದಾಡುತ್ತಿದ್ದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad Joshi) ಅವರ ಮಾತುಗಳೂ ಇದಕ್ಕೆ ಪುಷ್ಟಿ ನೀಡುವಂತಿವೆ.

ಈ ಬಗ್ಗೆ ಮಾಧ್ಯಮದವರು ಪ್ರಹ್ಲಾದ ಜೋಶಿಯವರನ್ನು ಪ್ರಶ್ನಿಸಿದಾಗ, ನಮ್ಮ ಪಕ್ಷದಿಂದಲೂ ಒಬ್ಬ ಅಭ್ಯರ್ಥಿ ಕಣಕ್ಕಿಳಿಸಲಾಗುವುದು. ಹೈಕಮಾಂಡ್‌ಗೆ ಮೂರು ಜನರ ಹೆಸರನ್ನು ಕಳುಹಿಸಲಾಗಿದೆ. ಅದು ಹೊರಟ್ಟಿ ಆದರೂ ಆಗಬಹುದು. ಬೇರೆಯವರಾದರೂ ಆಗಬಹುದು ಎಂದು ಹೇಳಿದರು. ನಿಮ್ಮ ಆಕಾಂಕ್ಷಿಗಳ ಪಟ್ಟಿಯಲ್ಲಿ ಹೊರಟ್ಟಿ ಅವರ ಹೆಸರಿದೆಯಾ? ಎಂಬ ಪ್ರಶ್ನೆಗೆ, ಇಲ್ಲ ಹಾಗಿಲ್ಲ. ಅವರ ಪಕ್ಷದ ಪಟ್ಟಿಯಲ್ಲಿ ಅವರ ಹೆಸರಿರುತ್ತದೆ. ನಮ್ಮ ಪಕ್ಷದ ಅಭ್ಯರ್ಥಿ ಬೇರೆಯವರು ನಿಲ್ಲುತ್ತಾರಷ್ಟೇ ಎಂದರು. ಬಿಜೆಪಿ(BJP) ಸೇರ್ಪಡೆ ಬಗೆಗಿನ ಪ್ರಶ್ನೆಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು, ಬಿಜೆಪಿ ಸೇರುವ ಬಗ್ಗೆ ತೀರ್ಮಾನ ಕೈಗೊಂಡಿಲ್ಲ. ಚುನಾವಣೆ ಬಗ್ಗೆ ಮೇ ತನಕ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

Follow Us:
Download App:
  • android
  • ios