Asianet Suvarna News Asianet Suvarna News

ರಮೇಶ್ ಜಾರಕಿಹೊಳಿಯ 2 ಸ್ಥಾನಕ್ಕೆ ಬಿಜೆಪಿಯಲ್ಲಿ ಶುರುವಾಯ್ತು ಭಾರೀ ಪೈಪೋಟಿ

ರಾಜ್ಯ ರಾಜಕಾರಣದಲ್ಲಿ ಸಿ.ಡಿ. ಸದ್ದು ಜೋರಾಗಿದ್ದು, ನೈತಿಕ ಹೊಣೆ ಹೊತ್ತು ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ನೀಡಿದ್ದಾರೆ. ಇನ್ನು ಇವರ ಖಾತೆ ಭಾರೀ ಪೈಪೋಟಿ ಶುರುವಾಗಿದೆ.

jarkiholi Sex scandal laxman savadi umesh katti Fight for belgavi district in charge rbj
Author
Bengaluru, First Published Mar 5, 2021, 3:29 PM IST

ಮೈಸೂರು, (ಮಾ.05): ಯುವತಿಯೊಂದಿಗೆ ರಾಸಲೀಲೆ ಸಿ.ಡಿ. ರಮೇಶ್ ಜಾರಕಿಹೊಳಿ ಅವರ ಮಂತ್ರಿಗಿರಿಯನ್ನು ನುಂಗಿದೆ. ಇನ್ನು ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ‌ ರಾಜೀನಾಮೆ ನೀಡಿದ ಬೆನ್ನಲ್ಲೇ ಬೆಳಗಾವಿ ಜಿಲ್ಲಾ ಉಸ್ತುವಾರಿ ಪಟ್ಟಕ್ಕಾಗಿ ಜಟಾಪಟಿ ಶುರುವಾಗಿದೆ.

ಬೆಳಗಾವಿಯ ಇಬ್ಬರು ಸಚಿವರಿಂದ ಉಸ್ತುವಾರಿ ಸಚಿವ ಸ್ಥಾನಕ್ಕಾಗಿ ದೊಡ್ಡ ಮಟ್ಟದಲ್ಲಿ ಲಾಬಿ ನಡೆದಿದ್ದು, ಬೆಳಗಾವಿ ಜಿಲ್ಲೆಯನ್ನು ತಮ್ಮ ಕಂಟ್ರೋಲ್​ಗೆ ತೆಗೆದುಕೊಳ್ಳಲು ಡಿಸಿಎಂ ಲಕ್ಷ್ಮಣ ಸವದಿ, ಸಚಿವ ಉಮೇಶ್ ಕತ್ತಿ ಕಸರತ್ತು ನಡೆಸಿದ್ದಾರೆ.

ಸಚಿವ ಉಮೇಶ್ ಕತ್ತಿ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಧ್ಯೆ ಒಂದು ಬಾರಿ ಬೆಳಗಾವಿ ಉಸ್ತುವಾರಿ ಅವಕಾಶ ನಮಗೂ ಕೊಡಿ ಎಂದು ಅಂತಾ ಶಶಿಕಲಾ ಜೊಲ್ಲೆ ಬಿಜೆಪಿ ವರಿಷ್ಠರಿಗೆ ಮನವಿ ಮಾಡಿದ್ದಾರೆ ಎಂದು ತಿಳಿಸಿದು ಬಂದಿದೆ.  ಈ ಹಿನ್ನೆಲೆಯಲ್ಲಿ ಸಿಎಂಗೆ ಬೆಳಗಾವಿ ಉಸ್ತುವಾರಿ ಹಂಚಿಕೆ ವಿಚಾರ ಮತ್ತೆ ತಲೆನೋವಾಗಿ ಪರಿಣಮಿಸಿದೆ.

ಜಾರಕಿಹೊಳಿ ರಾಜೀನಾಮೆಯಿಂದ ತೆರವಾದ ಖಾತೆ ಯಾರ ಹೆಗಲಿಗೆ..?

ಜಗದೀಶ್ ಶೆಟ್ಟರ್‌ ಮತ್ತೆ ಸಿಗುತ್ತಾ ಬೆಳಗಾವಿ?
ಹೌದು..ರಮೇಶ್ ಜಾರಕಿಹೊಳಿ‌ಗೂ ಮುನ್ನ ಜಗದೀಶ್ ಶೆಟ್ಟರ್‌ಗೆ ಸಿಎಂ ಉಸ್ತುವಾರಿ ನೀಡಿದ್ದರು. ಇದೀಗ ಮತ್ತೆ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆಯಿಂದ ಜಗದೀಶ್ ಶೆಟ್ಟರ್‌ಗೆ ಉಸ್ತುವಾರಿನೀಡುವ ಸಾಧ್ಯತೆಗಳು ಹೆಚ್ಚಿವೆ. 

ಯಾಕಂದ್ರೆ ಒಂದೇ ಜಿಲ್ಲೆಯ ಸವದಿ, ಕತ್ತಿ ಶಶಿಕಲಾ ಜೊಲ್ಲೆ ಪೈಪೋಟಿ ನಡೆಸಿದ್ದಾರೆ. ಇವರುಗಳ ಪೈಲಿ ಒಬ್ಬರಿಗೆ ಉಸ್ತುವಾರಿ ಕೊಟ್ಟರೆ ಮತ್ತೊಬ್ಬರು ಮೇಲೆ ಮುನಿಸಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಸರ್ಕಾರ ರಚನೆಯಾದ ಸಂದರ್ಭದಲ್ಲಿ ನೀಡಿದಂತೆ ಹೊರಗಿನ ಜಿಲ್ಲೆಯವರಾದ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಉಸ್ತುವಾರಿ ನೀಡಲು ಸಿಎಂ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಮೇಶ್ ಖಾತೆ ಯಾರ ಹೆಗಲಿಗೆ?
ಉಸ್ತುವಾರಿಯೇನು ಬಗೆಹರಿಸಬಹುದು. ಆದ್ರೆ, ರಮೇಶ್ ಜಾರಕಿಹೊಳಿಯಿಂದ ತೆರವಾಗಿರುವ ಜಲಸಂಪನ್ಮೂಲ ಖಾತೆಯನ್ನು ಯಾರಿಗೆ ಹೆಚ್ಚುವರಿಯಾಗಿ ವಹಿಸಲಾಗುತ್ತೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ. ಪ್ರಮುಖ ಖಾತೆಯಾಗಿರುವುದರಿಂದ ಅನುಭವಿ ಸಚಿವರ ಹೆಗಲಿಗೆ ಈ ಖಾತೆ ವಹಿಸುವ ಸಾಧ್ಯತೆಗಳಿವೆ. ಈಗಾಗಲೇ ಬಸವರಾಜ್ ಬೊಮ್ಮಾಯಿ ಅವರು ಜಲಸಂನ್ಮೂಲ ಖಾತೆ ನಿಭಾಯಿಸಿದ ಅನುವಸ್ಥರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಜಾರಕಿಹೊಳಿ ಖಾತೆಯನ್ನು ಬೊಮ್ಮಾಯಿ ಅವರ ಹೆಗಲಿಗೆ ಹಾಕುವ ಸಾಧ್ಯತೆಗಳಿವೆ. ಇನ್ನೂ ಬಸವರಾಜ ಬೊಮ್ಮಾಯಿ ಬಳಿ ಈಗಾಗಲೇ ಗೃಹ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಇವೆ. ಇದರಿಂದ ಬೇರೆಯವರಿಗೆ ಜಲಸಂಪನ್ಮೂಲ ಖಾತೆ ನೀಡಿದರೂ ಅಚ್ಚರಿಪಡಬೇಕಿಲ್ಲ.

Follow Us:
Download App:
  • android
  • ios