Asianet Suvarna News Asianet Suvarna News

ಸಿಎಂ ಸ್ಥಾನ ಬಿಟ್ಟುಕೊಡುವ ವಿಚಾರ ಸ್ವಾಮೀಜಿ ಮಾತನಾಡಿದ್ದು ಸರಿಯಲ್ಲ: ಸಚಿವ ವೆಂಕಟೇಶ್‌

ನಾಡಪ್ರಭು ಕೆಂಪೇಗೌಡ ಜಯಂತಿ ಸಮಾರಂಭದಲ್ಲಿ ಒಕ್ಕಲಿಗ ಸಮಾಜದ ಚಂದ್ರಶೇಖರ ಸ್ವಾಮಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಾನ ಬಿಟ್ಟುಕೊಡಬೇಕು ಎನ್ನುವ ವಿಚಾರದ ಮಾತುಗಳನ್ನಾಡಿರುವುದು ಸರಿಯಲ್ಲ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ್‌ ಅಭಿಪ್ರಾಯ ವ್ಯಕ್ತಪಡಿಸಿದರು. 

It is not right that Swamiji talked about giving up the post of CM Says Minister K Venkatesh gvd
Author
First Published Jun 29, 2024, 7:24 PM IST

ರಾಯಚೂರು (ಜೂ.29): ನಾಡಪ್ರಭು ಕೆಂಪೇಗೌಡ ಜಯಂತಿ ಸಮಾರಂಭದಲ್ಲಿ ಒಕ್ಕಲಿಗ ಸಮಾಜದ ಚಂದ್ರಶೇಖರ ಸ್ವಾಮಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಾನ ಬಿಟ್ಟುಕೊಡಬೇಕು ಎನ್ನುವ ವಿಚಾರದ ಮಾತುಗಳನ್ನಾಡಿರುವುದು ಸರಿಯಲ್ಲ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ್‌ ಅಭಿಪ್ರಾಯ ವ್ಯಕ್ತಪಡಿಸಿದರು. ಸ್ಥಳೀಯ ಜಿಪಂ ಸಭಾಂಗಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮೀಜಿಗಳಿಗೂ ಮತ್ತು ರಾಜಕೀಯಕ್ಕು ಸಂಬಂಧವಿಲ್ಲ ಒಂದು ಸಮುದಾಯಕ್ಕೆ ಸೇರಿದ ಸ್ವಾಜೀಮಿಗಳು ಈ ರೀತಿಯ ಹೇಳಿಕೆಯನ್ನು ನೀಡಬಾರದು.

ಅವರು ತಿಳುವಳಿಕೆ ಇದ್ದುಕೊಂಡು ಮಾತನಾ ಡಿ ದ್ದಾರೋ ಇಲ್ಲವೋ ಎಂಬುವುದು ಗೊತ್ತಿಲ್ಲ. ಸ್ವಾಮೀಜಿಗಳು ಯಾಕೆ ರಾಜಕೀಯ ಮಾತುಗಳನ್ನಾಡಿದರೋ ಸಹ ಗೊತ್ತಿಲ್ಲ ಸ್ವಾಮೀಜಿಗಳು ಈ ರೀತಿಯಾಗಿ ಮಾತನಾಡಿ ರುವುದು ಸರಿಯಲ್ಲವೆಂದರು. ಡಿಕೆಶಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬಿಡುವ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಂದಿ ಸಿದ ಸಚಿವರು ಕಾಂಗ್ರೆಸ್‌ ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎನುವ ನೀತಿ-ನಿಯಮವಿದೆ. ಡಿಕೆಶಿ ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಹುದ್ದೆ ನಿಭಾಯಿಸುತ್ತಿದ್ದಾರೆ. ಈ ವಿಚಾರ ವನ್ನು ಹೈಕಮಾಂಡ್ ನೋಡಿ ಕೊಳ್ಳುತ್ತದೆ ಎಂದರು. 

ಜಾಗೃತಿ ನಡುವೆಯೂ ಪೋಕ್ಸೊ, ಬಾಲ್ಯವಿವಾಹ ಕೇಸು ಹೆಚ್ಚಳ: ಅಪ್ರಾಪ್ತ ವಯಸ್ಸಲ್ಲೇ ದಾಂಪತ್ಯದ ಜವಾಬ್ದಾರಿ

ರಾಜ್ಯ ಸರ್ಕಾರದಲ್ಲಿ ಮೂವರು ಡಿಸಿಎಂ ಮಾಡುವುದು ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿ ದ್ದು, ಇದರ ಕುರಿತು ನಾವೇನು ಹೇಳಲು ಬರುವುದಿಲ್ಲ. ಬೇಡಿಕೆ ಯನ್ನಿಟ್ಟುಕೊಂಡು ಕೆಲವರು ಮಾತನಾಡು ತಿದ್ದು, ಇಂತಹ ವಿಷಯಗಳನ್ನು ಬಹಿರಂಗ ವಾಗಿ ಹೇಳಿಕೆ ಕೊಡುತ್ತಿರುವುದ್ಯಾಕೆ ಎಂಬು ವುದು ಗೊತ್ತಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಗೋ-ಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯುವುದು ಇಲ್ಲವೇ ಪರಿಷ್ಕೃತಗೊಳಿಸುವುದರ ಕುರಿತ ಯಾವುದೇ ಪ್ರಸ್ತಾವನೆ ರಾಜ್ಯ ಸರ್ಕಾರದ ಮುಂದಿಲ್ಲ. ಕಾಯ್ದೆ ಕುರಿತು ಪರ-ವಿರೋಧ ಅಭಿಪ್ರಾಯಗಳಿದ್ದು, ಈ ಬಗ್ಗೆ ಸರ್ಕಾರ ಯಾವುದೇ ತೀರ್ಮಾನಕ್ಕೆ ಬಂದಿಲ್ಲವೆಂದು ಸ್ಪಷ್ಟಪಡಿಸಿದರು.

Latest Videos
Follow Us:
Download App:
  • android
  • ios