ಅಂತಿಮ ಹಂತದಲ್ಲಿ ಬದಲಾವಣೆಗಳು ಏನಾದರೂ ನಡೆದಲ್ಲಿ ಪರಮೇಶ್ವರ್ ಅವರಿಗಾಗಿ ಪುಲಕೇಶಿನಗರವನ್ನು ಆಯ್ಕೆಯ ಕ್ಷೇತ್ರವಾಗಿಡಲು ರಾಜ್ಯ ನಾಯಕತ್ವ ಈ ನಿರ್ಧಾರ ಕೈಗೊಂಡಿದೆ ಎನ್ನುತ್ತವೆ ಮೂಲಗಳು.
ಬೆಂಗಳೂರು(ಮಾ.17): ರಾಜ್ಯ ನಾಯಕತ್ವವು ಹೈಕಮಾಂಡ್‌ಗೆ ಶಿಫಾರಸು ಮಾಡಿರುವ ಒಂಟಿ ಹೆಸರಿನ ಪಟ್ಟಿಯಲ್ಲಿ ಕೊರಟಗೆರೆ ಕ್ಷೇತ್ರಕ್ಕೆ ಮಾಜಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರ ಹೆಸರು ಇದೆ. ಆದರೆ, ಪರಮೇಶ್ವರ್ ಅವರ ಅಂತಿಮವಾಗಿ ಅದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವರೇ ಎಂಬ ಬಗ್ಗೆ ಗುಮಾನಿ ಉಂಟಾಗಿದೆ. ಏಕೆಂದರೆ, ಹಾಲಿ ಶಾಸಕರುವ ಕ್ಷೇತ್ರವಾದ ಪುಲಕೇಶಿನಗರ (ಅಖಂಡ ಶ್ರೀನಿವಾಸ್ ಕ್ಷೇತ್ರ)ವನ್ನು ಮೊದಲ ಪಟ್ಟಿಯಲ್ಲಿ ಶಿಫಾರಸು ಮಾಡಿಲ್ಲ. ಏಕೆಂದರೆ, ಅಂತಿಮ ಹಂತದಲ್ಲಿ ಬದಲಾವಣೆಗಳು ಏನಾದರೂ ನಡೆದಲ್ಲಿ ಪರಮೇಶ್ವರ್ ಅವರಿಗಾಗಿ ಪುಲಕೇಶಿನಗರವನ್ನು ಆಯ್ಕೆಯ ಕ್ಷೇತ್ರವಾಗಿಡಲು ರಾಜ್ಯ ನಾಯಕತ್ವ ಈ ನಿರ್ಧಾರ ಕೈಗೊಂಡಿದೆ ಎನ್ನುತ್ತವೆ ಮೂಲಗಳು.
ರಾಣೆಬೆನ್ನೂರು ಹೈಕಮಾಂಡ್ ಹೆಗಲಿಗೆ:
ರಾಣೆಬೆನ್ನೂರು ಕ್ಷೇತ್ರಕ್ಕೆ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರು ತಮ್ಮ ಪುತ್ರ ಪ್ರಕಾಶ್ ಕೋಳಿವಾಡ್ ಅವರಿಗೆ ಟಿಕೆಟ್ ಬಯಸಿದ್ದಾರೆ. ಈ ತೀರ್ಮಾನವೂ ಸಿಇಸಿಯೇ ಕೈಗೊಳ್ಳಬೇಕಿದೆ.
ಇಂದು ನಡ್ಡಾ ಕರ್ನಾಟಕಕ್ಕೆ ಆಗಮನ: ವಿಜಯಸಂಕಲ್ಪ ಯಾತ್ರೆಯಲ್ಲಿ ಭಾಗಿ
ಮಲ್ಲೇಶ್ವರಕ್ಕೆ ಅನೂಪ್ ಆಯ್ಕೆ ಸಂಭವ:
ಮಲ್ಲೇಶ್ವರ ಕ್ಷೇತ್ರಕ್ಕೆ ರಾಜ್ಯ ನಾಯಕತ್ವ ರಶ್ಮಿ ರವಿಕಿರಣ್ ಹಾಗೂ ಅನೂಪ್ ಅಯ್ಯಂಗಾರ್ ಅವರ ಹೆಸರು ಶಿಫಾರಸು ಮಾಡಿದೆ. ಈ ಪೈಕಿ ಅನೂಪ್ ಅಯ್ಯಂಗಾರ್ ಅವರಿಗೆ ಅವಕಾಶ ಹೆಚ್ಚಿದೆ ಎನ್ನಲಾಗಿದೆ.
ಆಂಜನೆಯ ಹೊಳಲ್ಕೆರೆಗೋ? ಪಾವಗಡಕ್ಕೋ?
ಮಾಜಿ ಸಚಿವ ಹಾಗೂ ಹಿರಿಯ ನಾಯಕ ಎಚ್. ಆಂಜನೇಯ ಅವರ ಹೆಸರನ್ನು ಹೊಳಲ್ಕೆರೆ ಕ್ಷೇತ್ರಕ್ಕೆ ಒಂಟಿ ಹೆಸರಾಗಿ ರಾಜ್ಯ ನಾಯಕತ್ವ ಹೈಕಮಾಂಡ್‌ಗೆ ಶಿಫಾರಸು ಮಾಡಿದೆ. ಆದರೆ, ಹಾಲಿ ಶಾಸಕ ವೆಂಕಟರಮಣಪ್ಪ ಸ್ಪರ್ಧೆಯಿಂದ ಹಿಂದೆ ಸರಿದು ತಮ್ಮ ಪುತ್ರನಿಗಾಗಿ ಟಿಕೆಟ್ ಕೇಳುತ್ತಿರುವ ಪಾವಗಡ ಕ್ಷೇತ್ರಕ್ಕೂ ಆಂಜನೇಯ ಅವರ ಹೆಸರನ್ನು ಪರಿಗಣಿಲಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಈ ಎರಡು ಕ್ಷೇತ್ರಗಳ ಬಗ್ಗೆ ಶುಕ್ರವಾರ ನಡೆಯುವ ಸಿಇಸಿಯೇ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ.
ಪ್ರಧಾನಿ ಮೋದಿ ರ್ಯಾಲಿಗೆ 10 ಲಕ್ಷ ಜನರ ಸೇರಿಸಿ ಶಕ್ತಿ ಪ್ರದರ್ಶನಕ್ಕೆ ಬಿಜೆಪಿ ಸಜ್ಜು!
ತವರು ಪುತ್ರನಿಗೆ ಬಿಟ್ಟ ಎಚ್‌ಸಿಎಂಗೆ ಸಿ.ವಿ.ರಾಮನ್ ನಗರದ ಮೇಲೆ ಕಣ್ಣು
ರಾಜ್ಯ ನಾಯಕತ್ವವು ಸಿ.ವಿ. ರಾಮನ್ ನಗರ ಕ್ಷೇತ್ರಕ್ಕೆ ಮಾಜಿ ಮೇಯರ್ ಸಂಪತ್ ರಾಜ್ ಅವರ ಒಂಟಿ ಹೆಸರನ್ನು ಶಿಫಾರಸು ಮಾಡಿದೆ. ಆದರೆ, ಟಿ.ನರಸೀಪುರ ಕ್ಷೇತ್ರವನ್ನು ತಮ್ಮ ಪುತ್ರ ಸುನೀಲ್ ಬೋಸ್ ಅವರನ್ನು ಕಣಕ್ಕೆ ಇಳಿಸಲು ಬಯಸಿರುವ ಪ್ರಭಾವಿ ನಾಯಕ ಡಾ.ಎಚ್.ಸಿ.ಮಹದೇವಪ್ಪ ಅವರು ಅಂತಿಮ ಹಂತದಲ್ಲಿ ಸಿ.ವಿ. ರಾಮನಗರ ಕ್ಷೇತ್ರಕ್ಕಾಗಿ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ವಾಸ್ತವವಾಗಿ ಮಹದೇವಪ್ಪ ಅವರು ನಂಜನಗೂಡು ಕ್ಷೇತ್ರ ಬಯಸಿದ್ದರು. ಆದರೆ, ಮತ್ತೊಬ್ಬ ಆಕಾಂಕ್ಷಿಯಾಗಿದ್ದ ಕಾರ್ಯಾಧ್ಯಕ್ಷ ದ್ರುವನಾರಾಯಣ್ ಅವರ ಆಕಾಲಿಕ ನಿಧನದಿಂದಾಗಿ ಆ ಕ್ಷೇತ್ರ ಅನುಕಂಪದ ಕ್ಷೇತ್ರವಾಗಿ ಮಾರ್ಪಟ್ಟಕಾರಣ ಖುದ್ದು ಮಹದೇವಪ್ಪ ಅವರೇ ಧ್ರುವನಾರಾಯಣ್ ಪುತ್ರ ದರ್ಶನ್ ಧ್ರುವನಾರಾಯಣ್‌ಗೆ ಬೆಂಬಲ ಸೂಚಿಸಿದ್ದರು. ಇದೀಗ ಅವರು ಸಿ.ವಿ. ರಾಮನಗರ ಕ್ಷೇತ್ರದ ಬಯಕೆ ಹೊಂದಿದ್ದಾರೆ ಎನ್ನಲಾಗಿದ್ದು, ಈ ವಿಚಾರ ಸಿಇಸಿಯಲ್ಲೇ ಇತ್ಯರ್ಥವಾಗಬೇಕಿದೆ.
ಮುನಿಯಪ್ಪಗೆ ದೇವನಹಳ್ಳಿ ಭಾಗ್ಯ ಇದೆಯೇ?
ಮಾಜಿ ಕೇಂದ್ರ ಸಚಿವ ಹಾಗೂ ಪ್ರಭಾವಿ ನಾಯಕ ಕೆ.ಎಚ್. ಮುನಿಯಪ್ಪ ಅವರು ಸ್ಪರ್ಧಿಸಲು ಬಯಸಿರುವ ದೇವನಹಳ್ಳಿ ಕ್ಷೇತ್ರಕ್ಕೆ ರಾಜ್ಯ ನಾಯಕತ್ವವು ಎ.ಸಿ. ಶ್ರೀನಿವಾಸ್ ಅವರ ಒಂಟಿ ಹೆಸರನ್ನು ಶಿಫಾರಸು ಮಾಡಿದೆ. ಆದರೆ, ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿಯಾಗಿರುವ ಮುನಿಯಪ್ಪ ಅವರ ಸ್ಪರ್ಧೆ ಬಗ್ಗೆ ಸಿಇಸಿಯೇ ತೀರ್ಮಾನ ಕೈಗೊಳ್ಳಲಿರುವ ಕಾರಣ ಮೊದಲ ಪಟ್ಟಿಯಲ್ಲಿ ದೇವನಹಳ್ಳಿ ಕ್ಷೇತ್ರ ಬರುವುದೇ ಅಥವಾ ಇಲ್ಲವೇ ಎಂಬ ಕುತೂಹಲ ನಿರ್ಮಾಣವಾಗಿದೆ.
