ಕಾಂಗ್ರೆಸ್ ಶಾಸಕರಿಬ್ಬರ ನಡುವೆ ಮಾರಾಮಾರಿಯೇನೋ ನಡೆದು 12 ದಿನಗಳೆ ಕಳೆದಿವೆ. ಆರೋಪಿ ಶಾಸಕ ಗಣೇಶ್  ಬಂಧನ ಇನ್ನು ಆಗಿಲ್ಲ. ಆದರೆ ಏಟು ತಿಂದು ಆಸ್ಪತ್ರೆ ಸೇರಿರುವ ಆನಂದ್‌ ಸಿಂಗ್ ಚಿಕಿತ್ಸೆಗೆ ಮಾತ್ರ ಸಿಕ್ಕಾಪಟ್ಟೆ ವೆಚ್ಚ ತಗುಲಿದೆ.

ಬೆಂಗಳೂರು[ಜ.31]  12 ದಿನ.. 6 ಲಕ್ಷ ರೂ. ಬಿಲ್.. ಹೌದು ಅಪೋಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಹೊಸಪೇಟೆ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಚಿಕಿತ್ಸಾ ವೆಚ್ಚ 6 ಲಕ್ಷ ರೂ. ಆಗಿದೆ.

12 ದಿನಗಳಿಂದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆನಂದ್ ಸಿಂಗ್ ಚಿಕಿತ್ಸಾ ವೆಚ್ಚದ ಉಸ್ತುವಾರಿಯನ್ನು ಸಚಿವ ಡಿಕೆಶಿ ಆಪ್ತ ಶಾಸಕರ ಹೆಗಲಿಗೆ ವಹಿಸಲಾಗಿದೆ. ಕುಣಿಗಲ್ ಶಾಸಕ.ಡಾ.ರಂಗನಾಥ್ ಹೆಗಲಿಗೆ ಆನಂದ್ ಸಿಂಗ್ ಚಿಕಿತ್ಸಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಆಪರೇಶನ್ ಕಮಲ ಭೀತಿಯಲ್ಲಿ ಕಾಂಗ್ರೆಸ್ ಶಾಸಕರನ್ನು ಬಿಡದಿ ಸಮೀಪದ ಈಗಟಲ್ ಟನ್ ರೆಸಾರ್ಟ್‌ಗೆ ಕರೆದುಕೊಂಡು ಹೋಗಲಾಗಿತ್ತು. ರೆಸಾರ್ಟ್‌ನಲ್ಲಿ ರಾತ್ರಿ ನಡೆದ ಪಾರ್ಟಿ ವೇಳೆ ಹೊಸಪೇಟೆ ಶಾಸಕ ಆನಂದ್‌ ಸಿಂಗ್ ಮತ್ತು ಶಾಸಕ ಗಣೇಶ್ ನಡುವೆ ಗಲಾಟೆಯಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಆನಂದ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.