ರಾಜಕಾರಣದ ಮೇಲೆ ಧರ್ಮದ ಪ್ರಭಾವ ಹೆಚ್ಚುತ್ತಿದೆ, ಇದು ಪ್ರಜಾಪ್ರಭುತ್ವಕ್ಕೆ ಮಾರಕ: ವೀರಪ್ಪ ಮೊಯ್ಲಿ
ವಿಶ್ವದ ಇತರ ಎಲ್ಲಾ ರಾಷ್ಟ್ರಗಳಲ್ಲಿಯೂ ರಾಜಕಾರಣದ ಮೇಲೆ ಧರ್ಮ ಪ್ರಭಾವ ಬೀರುವುದು ಕಡಿಮೆ ಆಗುತ್ತಿದೆ. ಆದರೆ ಭಾರತ ದೇಶದಲ್ಲಿ ದುರಾದೃಷ್ಟಾವಶಾತ್ ರಾಜಕಾರಣದ ಮೇಲೆ ಧರ್ಮದ ಪ್ರಭಾವ ಹೆಚ್ಚುತ್ತಿದೆ ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಮಾಜಿ ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ತಿಳಿಸಿದರು.
ಚಿಕ್ಕಬಳ್ಳಾಪುರ (ಜ.28): ವಿಶ್ವದ ಇತರ ಎಲ್ಲಾ ರಾಷ್ಟ್ರಗಳಲ್ಲಿಯೂ ರಾಜಕಾರಣದ ಮೇಲೆ ಧರ್ಮ ಪ್ರಭಾವ ಬೀರುವುದು ಕಡಿಮೆ ಆಗುತ್ತಿದೆ. ಆದರೆ ಭಾರತ ದೇಶದಲ್ಲಿ ದುರಾದೃಷ್ಟಾವಶಾತ್ ರಾಜಕಾರಣದ ಮೇಲೆ ಧರ್ಮದ ಪ್ರಭಾವ ಹೆಚ್ಚುತ್ತಿದೆ ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಮಾಜಿ ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ತಿಳಿಸಿದರು.
ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಯಲುವಹಳ್ಳಿ.ಎನ್.ರಮೇಶ್ ಅಭಿಮಾನಿಗಳು ಹಾಗೂ ಸಮಾನ ಮನಸ್ಕರ ಸೇವಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಸಾಮೂಹಿಕ ಸೀಮಂತ ಕಾರ್ಯಕ್ರಮ ಬಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕ ಸ್ಥಾನಗಳನ್ನು ಗಳಿಸುತ್ತದೆ. ಆದರೆ ಇಷ್ಟೇ ಸ್ಥಾನ ಗಳಿಸುತ್ತದೆ ಎಂದು ಭವಿಷ್ಯ ಖಚಿತವಾಗಿ ಹೇಳುವುದಕ್ಕೆ ಆಗಲ್ಲ ಎಂದರು.
ಅಧಿಕಾರಕ್ಕೆ ಬಂದು 7 ತಿಂಗಳಲ್ಲಿ ಸಿದ್ದರಾಮಯ್ಯನವರು ಏನೂ ಕಡಿದು ಕಟ್ಟೆಹಾಕಿಲ್ಲ: ಸಂಸದ ಪ್ರತಾಪ್ ಸಿಂಹ
ರಾಜ್ಯದಲ್ಲಿ ಬಿಜೆಪಿ ಮತ್ತು ಜಾತ್ಯತೀತ ಜನತಾದಳ ಪಕ್ಷ ಚುನಾವಣಾ ರಾಜಕೀಯ ಹೊಂದಾಣಿಕೆ ಮಾಡಿಕೊಂಡಿರುವ ಬಗ್ಗೆ ವಿಶ್ಲೇಷಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಧಿಕಾರಕ್ಕಾಗಿ ಯಾರ ಬಳಿಗಾದರೂ ಹೋಗುತ್ತಾರೆ ಯಾರಿಗಾದರೂ ನಮಸ್ಕರಿಸುತ್ತಾರೆ ಅವರನ್ನು ಒಪ್ಪಿಕೊಂಡವರು ಗುಂಡಿಗೆ ಬೀಳುವುದಂತು ಖಚಿತ ಎಂದರು. ನಾನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ಪ್ರತಿನಿಧಿಸಿ ಕೇಂದ್ರದಲ್ಲಿ ಹಲವು ಖಾತೆಗಳನ್ನು ನಿಭಾಯಿಸಿದ್ದೇನೆ ಮುಂಬರುವ 2024ರ ಚುನಾವಣೆಯಲ್ಲಿ ನನಗೆ ಟಿಕೆಟ್ ದೊರೆತು ಅವಕಾಶ ದೊರೆತರೆ ಈ ಕ್ಷೇತ್ರದ ಜನತೆ ನಾನು ಹಿಂದೆ ಮಾಡಿರುವ ಜನಪರ ಯೋಜನೆಗಳ ಕಾರಣದಿಂದ ನನ್ನನ್ನು ಬೆಂಬಲಿಸುವರು ಎಂಬ ನಿರೀಕ್ಷೆ ನನಗೆ ಇದೆ ಎಂದರು.
ಯೂಟರ್ನ್ ಹೊಡೆದ ಮೊಯ್ಲಿ: 11 ದಿನ ಉಪವಾಸ ಮಾಡಿದ್ರೆ ಮನುಷ್ಯ ಬದುಕಲು ಸಾಧ್ಯವಿಲ್ಲ, ಮೋದಿ ವ್ರತದ ಮೇಲೆ ಅನುಮಾನ,ನಿಜವಾದ ಬ್ರಾಹ್ಮಣರು, ಸ್ವಾಮೀಜಿಗಳು ಮೋದಿಯನ್ನು ಗರ್ಭಗುಡಿಗೆ ಬಿಡಬಾರದಿತ್ತು ಎಂದು ಮಂಗಳವಾರ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಹೇಳಿದ್ದರು ಅದಕ್ಕೆ ಮತ್ತೆ ಪ್ರತಿಕ್ರಿಯಿಸಿದ ಮೋಯ್ಲಿ,ನರೇಂದ್ರ ಮೋದಿ ರವರ ಉಪವಾಸದ ಬಗ್ಗೆ ನಾನು ಹೇಳಿರುವ ಹೇಳಿಕೆಯನ್ನು ತಿರುಚಿ ಪ್ರಚಾರ ಮಾಡಲಾಗುತ್ತಿದೆ ಡಾಕ್ಟರ್ ಗಳು ಹೇಳಿರುವುದನ್ನು ನಾನು ಹೇಳಿದ್ದೇನೆ ಹೊರತು ಮೋದಿಯವರು 11 ದಿನ ಮಾಡಿದ ಉಪವಾಸದ ಬಗ್ಗೆ ಪ್ರತಿಕ್ರಿಯೆ ನನ್ನ ಸ್ವಂತದಲ್ಲ ಎಂದರು.
ಫಲಪುಷ್ಪ ಪ್ರದರ್ಶನದಿಂದ ಹೊಸ ವಿಚಾರದ ಬಗ್ಗೆ ಮಾಹಿತಿ: ಸಚಿವ ಪರಮೇಶ್ವರ್
ನಿತೀಶ್ ಕುಮಾರ್ ಅವರುಇಂಡಿಯಾ ಮಹಾ ಘಟಬಂಧನ್ ನಿಂದ ದೂರವಾಗುವುದರಿಂದ ಮಹಾ ಘಟಬಂಧನ್ ಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಅವರು ಇಂದಲ್ಲದಿದ್ದರೂ ನಾಳೆ ಆದರೂ ಹೋಗುವವರೇ ಆಗಿದ್ದರು ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಯಲವ ಹಳ್ಳಿ ಎನ್. ರಮೇಶ್ , ಯುವ ಮುಖಂಡ ಯಲವಹಳ್ಳಿ ಜನಾರ್ಧನ್, ಲಕ್ಷ್ಮಣ್ ಪುರದ ಗಡ್ಡೆ ಕೃಷ್ಣಪ್ಪ, ಅವಲ ರೆಡ್ಡಿ, ಕಳವಾರ ಶ್ರೀಧರ್, ಮತ್ತಿತರರು ಇದ್ದರು.