ಜು.11ರಿಂದ 24ರ ಅವಧಿಯಲ್ಲಿ ದೇಶದ 543 ಲೋಕಸಭಾ ಸ್ಥಾನಗಳ ಪೈಕಿ 136ರಲ್ಲಿ 34000 ಜನರನ್ನು ಸಂದರ್ಶಿಸಿ ಸಮೀಕ್ಷೆ ವರದಿ ತಯಾರಿಸಲಾಗಿದೆ

ನವದೆಹಲಿ(ಜು.30):  ತಕ್ಷಣಕ್ಕೆ ದೇಶದಲ್ಲಿ ಲೋಕಸಭಾ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ 362 ಸ್ಥಾನ ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬರಲಿದೆ. ಯುಪಿಎ ಮೈತ್ರಿಕೂಟ ಕೇವಲ 97 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬರಲಿದೆ. ಇತರೆ ಪ್ರಾದೇಶಿಕ ಪಕ್ಷಗಳು, ಪಕ್ಷೇತರರು 84 ಸ್ಥಾನ ಗೆಲ್ಲಲಿದ್ದಾರೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ. ‘ಇಂಡಿಯಾ ಟೀವಿ’ ನಡೆಸಿದ ‘ವಾಯ್ಸ್‌ ಆಫ್‌ ದ ನೇಷನ್‌’ ಸಮೀಕ್ಷೆಯಲ್ಲಿ ಈ ಅಂಕಿ ಅಂಶಗಳಿವೆ. ಜು.11ರಿಂದ 24ರ ಅವಧಿಯಲ್ಲಿ ದೇಶದ 543 ಲೋಕಸಭಾ ಸ್ಥಾನಗಳ ಪೈಕಿ 136ರಲ್ಲಿ 34000 ಜನರನ್ನು ಸಂದರ್ಶಿಸಿ ಸಮೀಕ್ಷೆ ವರದಿ ತಯಾರಿಸಲಾಗಿದೆ. ಸಮೀಕ್ಷೆ ಅನ್ವಯ ಎನ್‌ಡಿಎ ಶೇ.41, ಯುಪಿಎ ಶೇ.28 ಮತ್ತು ಇತರರು ಶೇ.31ರಷ್ಟುಮತ ಪಡೆದುಕೊಳ್ಳಲಿದ್ದಾರೆ.

ಪ್ರಮುಖ ರಾಜ್ಯಗಳಾದ ಯುಪಿ, ಮಹಾರಾಷ್ಟ್ರ, ಕರ್ನಾಟಕ ಮೊದಲಾದ ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಲಿದ್ದರೆ, ಬಂಗಾಳದಲ್ಲಿ ಟಿಎಂಸಿ, ತಮಿಳುನಾಡಲ್ಲಿ ಡಿಎಂಕೆ, ಕೇರಳದಲ್ಲಿ ಎಡಪಕ್ಷಗಳ ಅಧಿಪತ್ಯ ಮುಂದುವರೆಯಲಿದೆ ಎಂದು ಸಮೀಕ್ಷೆ ಹೇಳಿದೆ.

Punjab Polls: ಡ್ರಗ್ಸ್‌ ಮುಕ್ತ ‘ನಯಾ ಪಂಜಾಬ್‌’ ನಿರ್ಮಾಣ: ನರೇಂದ್ರ ಮೋದಿ

ಕರ್ನಾಟಕದಲ್ಲಿ ಬಿಜೆಪಿಗೆ 23 ಸ್ಥಾನ

ನವದೆಹಲಿ: ಕರ್ನಾಟಕದಲ್ಲಿ ಈಗ ಲೋಕಸಭಾ ಚುನಾವಣೆ ನಡೆದರೆ ಒಟ್ಟು 28 ಸ್ಥಾನಗಳ ಪೈಕಿ ಬಿಜೆಪಿ 23, ಕಾಂಗ್ರೆಸ್‌ 4 ಮತ್ತು ಜೆಡಿಎಸ್‌ 1 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ. ಹಾಲಿ ಕರ್ನಾಟಕದಲ್ಲಿ ಬಿಜೆಪಿ 25, ಕಾಂಗ್ರೆಸ್‌ 1, ಜೆಡಿಎಸ್‌ 1, ಪಕ್ಷೇತರರು 1 ಸ್ಥಾನ ಹೊಂದಿದ್ದಾರೆ.

ಯಾರಿಗೆ ಎಷ್ಟು ಸ್ಥಾನ?: ಪಕ್ಷ/ಮೈತ್ರಿಕೂಟ ಸ್ಥಾನ ಮತಪ್ರಮಾಣ

ಎನ್‌ಡಿಎ 362 ಶೇ.41
ಯುಪಿಎ 97 ಶೇ.28
ಇತರರು 84 ಶೇ.31

ಪ್ರಧಾನಿ ಹುದ್ದೆಗೆ ಯಾರು ಸೂಕ್ತ?

ನರೇಂದ್ರ ಮೋದಿ ಶೇ.48
ರಾಹುಲ್‌ ಗಾಂಧಿ ಶೇ.11
ಮಮತಾ ಬ್ಯಾನರ್ಜಿ ಶೇ.08
ಸೋನಿಯಾ ಗಾಂಧಿ ಶೇ.07
ಮಾಯಾವತಿ ಶೇ.06

ಪ್ರಮುಖ ರಾಜ್ಯಗಳು

ಯುಪಿ ಒಟ್ಟು ಸ್ಥಾನ (80): ಎನ್‌ಡಿಎ 76, ಯುಪಿಎ 2, ಇತರರು 2
ಮಹಾರಾಷ್ಟ್ರ ಒಟ್ಟು ಸ್ಥಾನ (48): ಎನ್‌ಡಿಎ 37, ವಿಪಕ್ಷಗಳು 11
ತಮಿಳುನಾಡು ಒಟ್ಟು ಸ್ಥಾನ (39): ಡಿಎಂಕೆ ಮೈತ್ರಿಕೂಟ 38, ಎನ್‌ಡಿಎ 1
ಪಶ್ಚಿಮ ಬಂಗಾಳ ಒಟ್ಟು ಸ್ಥಾನ (42): ಟಿಎಂಸಿ 26, ಎನ್‌ಡಿಎ 14, ಯುಪಿಎ 2
ಬಿಹಾರ ಒಟ್ಟು ಸ್ಥಾನ (40): ಎನ್‌ಡಿಎ 35, ಯುಪಿಎ 5
ಗುಜರಾತ್‌ ಒಟ್ಟು ಸ್ಥಾನ (26): ಎಲ್ಲಾ 26 ಸ್ಥಾನ ಎನ್‌ಡಿಎಗೆ
ರಾಜಸ್ಥಾನ ಒಟ್ಟು ಸ್ಥಾನ (25): ಎಲ್ಲಾ 25 ಸ್ಥಾನ ಎನ್‌ಡಿಎಗೆ
ಆಂಧ್ರ ಒಟ್ಟು ಸ್ಥಾನ (25): ಎಲ್ಲಾ 25 ವೈಎಸ್‌ಆರ್‌ ಕಾಂಗ್ರೆಸ್‌ಗೆ
ತೆಲಂಗಾಣ ಒಟ್ಟು ಸ್ಥಾನ (17): ಎನ್‌ಡಿಎ 6, ಯುಪಿಎ 2, ಟಿಆರ್‌ಎಸ್‌/ಇತರರು 9
ಕೇರಳ ಒಟ್ಟು ಸ್ಥಾನ (20): ಎಲ್ಲಾ 20 ಸ್ಥಾನ ಎಡಪಕ್ಷಗಳ ಮೈತ್ರಿಕೂಟಕ್ಕೆ
ಛತ್ತೀಸ್‌ಗಢ ಒಟ್ಟು ಸ್ಥಾನ (12): ಎನ್‌ಡಿಎಗೆ 11, ಯುಪಿಎಗೆ 1
ದೆಹಲಿ ಒಟ್ಟು ಸ್ಥಾನ (7): ಎಲ್ಲಾ 7 ಸ್ಥಾನ ಎನ್‌ಡಿಎಗೆ