ಸಂವಿಧಾನ ಉಳಿಸದಿದ್ದರೆ ಗುಲಾಮರಾಗಬೇಕಾಗುತ್ತೆ: ಮಲ್ಲಿಕಾರ್ಜುನ ಖರ್ಗೆ ಕಳವಳ
ಸಂವಿಧಾನ, ಪ್ರಜಾಪ್ರಭುತ್ವ ಉಳಿಸುವ ಕೆಲಸ ಮಾಡದಿದ್ದರೆ ಮುಂದಿನ ಪೀಳಿಗೆ ಗುಲಾಮರಾಗಿ ಬಾಳಬೇಕಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದರು.

ಮೈಸೂರು (ಆ.31): ಸಂವಿಧಾನ, ಪ್ರಜಾಪ್ರಭುತ್ವ ಉಳಿಸುವ ಕೆಲಸ ಮಾಡದಿದ್ದರೆ ಮುಂದಿನ ಪೀಳಿಗೆ ಗುಲಾಮರಾಗಿ ಬಾಳಬೇಕಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದರು. ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ ನಡೆದ ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು. ಭಾರತ ಸಂವಿಧಾನ ನೀಡಿದ ಸೌಲಭ್ಯ, ಸವಲತ್ತು ಉಳಿಸಿ, ಬೆಳೆಸಬೇಕು. 18 ವರ್ಷಕ್ಕೆ ಮತದಾನದ ಹಕ್ಕು ಕೊಟ್ಟಪಕ್ಷ ಕಾಂಗ್ರೆಸ್. ನೀವೆಲ್ಲರೂ ಒಗ್ಗೂಡಿದರೆ ಈ ಫ್ಯಾಸಿಸ್ವ್ ಮನಸ್ಸಿನ ಜನರನ್ನು ಒದ್ದೋಡಿಸಬಹುದು ಎಂದು ಕಿಡಿಕಾರಿದರು.
ಈ ದೇಶಕ್ಕೆ ಸಮರ್ಥ ಹಾಗೂ ಹೊಸ ಸಂವಿಧಾನ ಕೊಟ್ಟಿದ್ದು ಕಾಂಗ್ರೆಸ್. ದೇಶದಲ್ಲಿ ಸಂವಿಧಾನ ಉಳಿಯದಿದ್ದರೆ ನಾವೆಲ್ಲರೂ ಸತ್ತಂತೆ. ನಮ್ಮ ಸಂವಿಧಾನದಿಂದ ನಮ್ಮೆಲ್ಲರ ಬದುಕು ಹಸನಾಗಿದೆ. ಸರ್ಕಾರ ಕೊಟ್ಟಗ್ಯಾರಂಟಿ ಅನುಷ್ಠಾನವಾಗಿದೆ. ಇದನ್ನು ಭಾರತದ ಎಲ್ಲಾ ವರ್ಗ ಒಪ್ಪಿದೆ. ಈ ಯೋಜನೆಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ ಎಂದು ಮೋದಿ ಹೇಳಿದರು. ಅವರು ಇವತ್ತು ಕಣ್ತೆರೆದು ನೋಡಲಿ. ಗೃಹಲಕ್ಷ್ಮೀ ಯೋಜನೆಯನ್ನು ಜನ ಹೃದಯಪೂರ್ವಕವಾಗಿ ಒಪ್ಪಬಹುದು ಎಂಬುದನ್ನು ಮೋದಿ ತಿಳಿದುಕೊಳ್ಳಬೇಕು ಎಂದು ಮಾರ್ಮಿಕವಾಗಿ ನುಡಿದರು.
ರಾಜ್ಯದ 9ನೇ ಏರ್‌ಪೋರ್ಟ್ ಶಿವಮೊಗ್ಗದಲ್ಲಿಂದು ಶುರು: ವಿಮಾನ ನಿಲ್ದಾಣದ ವಿಶೇಷತೆಗಳು ಗೊತ್ತಾ?
ನಾವು ಜಾರಿ ಮಾಡಿದ ಯೋಜನೆಗಳನ್ನು ಬಿಜೆಪಿಯವರು ಉದ್ಘಾಟಿಸಿದ್ದಾರೆ ಅಷ್ಟೆ. ನಮ್ಮ ದೇಶದಲ್ಲಿ ಅಕ್ಷರ ಕಲಿತದ್ದು ಶೇ.18 ಜನ ಮಾತ್ರ. 2013-14ರಲ್ಲಿ ಆ ಪ್ರಮಾಣ ಶೇ.74ಕ್ಕೇರಿತು. ಈ ಮೂಲಕ ಜನ ಮುಂದುವರೆಯಲು ಅವಕಾಶ ಮಾಡಿಕೊಡಲಾಗಿದೆ. ಗುಜರಾತ್‌ನಲ್ಲಿ ಸಾವಿರ ಮಕ್ಕಳು ಹುಟ್ಟಿದರೆ 40-45 ಮಕ್ಕಳು ಸಾಯುತ್ತವೆ. ಕರ್ನಾಟಕಕ್ಕೂ ಗುಜರಾತ್‌ಗೂ ಇಷ್ಟೇ ವ್ಯತ್ಯಾಸ ಎಂದು ಟೀಕಿಸಿದರು. ಇಂದು ದೇಶದಲ್ಲಿ 8 ಲಕ್ಷ ಪ್ರಾಥಮಿಕ ಶಾಲೆಗಳಿವೆ. ನರೇಗಾ ಪ್ರಗತಿಪರ ವಿಚಾರ ಅಲ್ವೇ? ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿದ್ದು ಸೋನಿಯಾ ಗಾಂಧಿ. ಅದು ಉತ್ತಮ ಯೋಜನೆ ಅಲ್ವೇ? ಕುತಂತ್ರದಿಂದ ರಾಹುಲ್ ಗಾಂಧಿಯವರನ್ನು ಸಂಸದ ಸ್ಥಾನದಿಂದ ಅನರ್ಹ ಮಾಡಲಾಯಿತು. ಆದರೆ, ರಾಹುಲ್ ಗಾಂಧಿಯವರು ಹೆದರಲಿಲ್ಲ ಎಂದು ಹರಿಹಾಯ್ದರು.
ರಾಜಕಾರಣದಿಂದ ಹೊರಗೆ ಹೆಜ್ಜೆ ಇಟ್ಟಿಲ್ಲ, ಸಮಯ, ಸಂದರ್ಭ ಎಲ್ಲದಕ್ಕೂ ಉತ್ತರ ಕೊಡುತ್ತೆ: ನಿಖಿಲ್
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 4 ಸಾವಿರ ಕಿ.ಮೀ. ಪಾದಯಾತ್ರೆ ಮಾಡಿದರು. ಜನಮನ್ನಣೆ ಗಳಿಸಿದರು. ಸ್ವಾತಂತ್ರ್ಯಾನಂತರ ನೆಹರೂ ಕೈಯಲ್ಲಿ ಅಧಿಕಾರ ಸಿಗದಿದ್ದರೆ ದೇಶ ಈ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಸಣ್ಣ ಸಣ್ಣ ದೇಶ ಒಗ್ಗೂಡಿಸಿ ದೊಡ್ಡ ದೇಶ ಮಾಡಿದ್ದಾಗಿ ಹೇಳಿದರು. ಕಾಂಗ್ರೆಸ್ ನೀಡಿದ್ದ ಭರವಸೆ ಪೂರೈಸಿದೆ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ 5 ಗ್ಯಾರಂಟಿಗಳನ್ನು ಘೋಷಿಸಿದ್ದು, ಈಗಾಗಲೇ 4 ಗ್ಯಾರಂಟಿ ಘೋಷಣೆಯಾಗಿದೆ. ಒಂದು ಮಾತ್ರ ಬಾಕಿ ಇದೆ. ಯಾವ ಸರ್ಕಾರವೂ ಈ ರೀತಿಯ ಯೋಜನೆ ಮಾಡಿಲ್ಲ. ಇಡೀ ಭಾರತದಲ್ಲಿ ಒಪ್ಪುವಂಥ ಗ್ಯಾರಂಟಿಗಳಿವು ಎಂದರು.