ಬೊಮ್ಮಾಯಿ ಅಲ್ಲ ಬೇಕಾದ್ರೆ ಮೋದಿ‌ ಬಂದು ಸ್ಪರ್ಧಿಸಲಿ: ಮಲ್ಲಿಕಾರ್ಜುನ್ ಸವಾಲು

ಜಿಲ್ಲೆಯಲ್ಲಿ ಆಗಸ್ಟ್ 3 ರಂದು ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಭರ್ಜರಿ ಸಿದ್ದತೆ ನಡೆಸಿದ್ದಾರೆ‌. 40 ಎಕರೆ ವಿಸ್ತೀರ್ಣದ ಶಾಮನೂರು ಪ್ಯಾಲೇಸ್ ಗ್ರೌಂಡ್‌ನಲ್ಲಿ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ವೇದಿಕೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. 

if modi and bommai standing opposite me i will compete says ss mallikarjun in davanagere gvd

ವರದಿ: ವರದರಾಜ್, ದಾವಣಗೆರೆ

ದಾವಣಗೆರೆ (ಜು.18): ಜಿಲ್ಲೆಯಲ್ಲಿ ಆಗಸ್ಟ್ 3 ರಂದು ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಭರ್ಜರಿ ಸಿದ್ದತೆ ನಡೆಸಿದ್ದಾರೆ‌. 40 ಎಕರೆ ವಿಸ್ತೀರ್ಣದ ಶಾಮನೂರು ಪ್ಯಾಲೇಸ್ ಗ್ರೌಂಡ್‌ನಲ್ಲಿ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ವೇದಿಕೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಶಾಮನೂರು ಪ್ಯಾಲೇಸ್ ಗ್ರೌಂಡ್‌ನಲ್ಲಿ 200/50 ಅಳತೆಯಲ್ಲಿ ವೇದಿಕೆ ನಿರ್ಮಾಣ ಆಗಲಿದ್ದು 100ಕ್ಕೂ ಹೆಚ್ಚು ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ 5 ರಿಂದ 10 ಲಕ್ಷ ಜನ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ. ಅವರಿಗೆ ಊಟ ತಿಂಡಿ ಕೌಂಟರ್, ಪಾರ್ಕಿಂಗ್, ಗಣ್ಯರ ಆಗಮನಕ್ಕೆ ಹೆಲಿಪ್ಯಾಡ್ ಹೀಗೆ ಹಲವು ಸಿದ್ಧತೆಗಳನ್ನು ಮಾಡಲಾಗಿದೆ‌.

ಕಾರ್ಯಕ್ರಮದ ಖರ್ಚು ವೆಚ್ಚದ ಬಗ್ಗೆ ಗೌಪ್ಯತೆ ಕಾಪಾಡುತ್ತಿರುವ ಕಾಂಗ್ರೆಸ್ ಮುಖಂಡರು: ಸಿದ್ದರಾಮಯ್ಯನವರ ಅಭಿಮಾನಿಗಳ ಅವರವರ ಆಸಕ್ತಿಗನುಗುಣವಾಗಿ ನೀಡುವ ದೇಣಿಗೆಯಿಂದ‌ ಕಾರ್ಯಕ್ರಮ ನಡೆಸುತ್ತಿದ್ದೇವೆಂದು ಎಸ್.ಎಸ್.ಮಲ್ಲಿಕಾರ್ಜುನ್‌ ಅಭಿಪ್ರಾಯಿಸಿದ್ದಾರೆ. ಇಂದು ಒಬ್ಬರು 1 ಲಕ್ಷ ರೂ ಚೆಕ್ ಕೊಟ್ಟಿದ್ದಾರೆ. ಹೀಗೆ ಕೊಡುವ ದೇಣಿಗೆಯಿಂದ ಕಾರ್ಯಕ್ರಮ ಮಾಡುತ್ತೇವೆ ಎಂದು ಖರ್ಚು ವೆಚ್ಚದ ಗೌಪ್ಯತೆ ಕಾಪಾಡಿದ್ದಾರೆ.

ಇತ್ತ ಬಿಜೆಪಿ ಚಿಂತನ-ಮಂಥನ ಸಭೆ: ಮತ್ತೊಂದೆಡೆ ಸ್ವಪಕ್ಷದ ಸಚಿವರ ವಿರುದ್ಧ ಸಿಡಿದೆದ್ದ ರೇಣುಕಾಚಾರ್ಯ

ಶಾಮನೂರು ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ: ಮಾಜಿ ಸಚಿವ ಶಾಮನೂರು ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್‌ಗೆ ಕ್ಷೇತ್ರ ಬದಲಿಸುವ ಸೂಚನೆ ನೀಡಿದ್ದಾರೆ‌. ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಎಸ್.ಎಸ್.ಮಲ್ಲಿಕಾರ್ಜುನ ಎಲ್ಲಿ ನಿಲ್ಲಬೇಕು ಅಥವಾ ನಿಲ್ಲಬಾರದು ಎಂಬ ಬಗ್ಗೆ ಯೋಚಿಸಿಲ್ಲ ಎಂದರು. ದಾವಣಗೆರೆ ಉತ್ತರ ಕ್ಷೇತ್ರದಿಂದ ಕಳೆದ ಬಾರಿ ಸೋಲನ್ನು ಅನುಭವಿಸಿದ್ದ ಎಸ್.ಎಸ್.ಎಂ ಇನ್ನು ಸ್ಪರ್ಧೆಗೆ ಯಾವುದು ಸೂಕ್ತ ಎನ್ನುವುದರ ಬಗ್ಗೆ ಹುಡುಕಾಟ‌ ನಡೆಸಿದ್ದಾರೆ‌. 

ದಾವಣಗೆರೆಯಲ್ಲಿ ಏಳು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಬೇಕು. ಅದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರನ್ನು ಹುರಿದುಂಬಿಸಬೇಕು ಅದಕ್ಕೆ ಎಲ್ಲಾ ಪ್ರಯತ್ನವನ್ನು ಮಾಡುತ್ತಿದ್ದೇನೆ ಎಂದರು. ದಾವಣಗೆರೆ ಉತ್ತರದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಲ್ಲ ಬೇಕಾದ್ರೆ ಮೋದಿ‌ ಬಂದು ಸ್ಪರ್ಧಿಸಲಿ ಎಂದು ಎಸ್.ಎಸ್.ಮಲ್ಲಿಕಾರ್ಜುನ್ ಸವಾಲ್ ಹಾಕಿದರು‌. ನನ್ನ ಪತ್ನಿ ಪ್ರಭಾ ಮಲ್ಲಿಕಾರ್ಜುನ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ. ಅವರು ಡಾಕ್ಟರ್ ಇರುವುದರಿಂದ ವೈದ್ಯಕೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ ಅವರು ಚುನಾವಣೆಗೆ ಸ್ಪರ್ಧಿಸುವುದು ಮಾಧ್ಯಮಗಳ ಸೃಷ್ಟಿ ಎಂದರು.

Davanagere: ತುಂಗಾಭದ್ರಾ ಪ್ರವಾಹಕ್ಕೆ ಸಿಲುಕಿದ ಗಂಗಾನಗರ ನಿವಾಸಿಗಳ ಬದುಕು!

ಸ್ಥಳೀಯ ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ಮುಖಂಡ ಎಸ್.ಎಸ್.ಮಲ್ಲಿಕಾರ್ಜುನ: ನಾನು ಸಚಿವನಾಗಿದ್ದಾಗ  25 ಕೋಟಿ ವೆಚ್ಚದಲ್ಲಿ ಗ್ಲಾಸ್ ಹೌಸ್ ಮಾಡಿ ನಿರ್ಮಾಣ ಮಾಡಿಸಿದೆ. ಆದ್ರೆ ಅದರ ಧೂಳು ಹೊಡೆಸುವುದಕ್ಕು ಸ್ಥಳೀಯ ಬಿಜೆಪಿ ಮುಖಂಡರಿಂದ ಸಾಧ್ಯವಾಗುತ್ತಿಲ್ಲ. ಗ್ಲಾಸ್ ಹೌಸ್ ಪಾರ್ಕ್‌ನಲ್ಲಿ ಡಿಫರೆಂಟ್ ವಿದೇಶಿ ತಳಿಯ ಸಸಿಗಳನ್ನು ಬೆಳೆಸಿದ್ದೆವು.‌ ಆದ್ರೆ ಬಿಜೆಪಿಯವರು ಅದೇ ಪಾರ್ಕ್‌ನಲ್ಲಿ ಜಾಲಿಗಿಡ ಬೆಳೆಸುತ್ತಿದ್ದಾರೆ ಎಂದು ವ್ಯಂಗವಾಡಿದರು. ಮಳೆ ಬರದಿದ್ದೇ ದಾವಣಗೆರೆಯಲ್ಲೇ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸುತ್ತಿತ್ತು. ಮಳೆ ಸಕಾಲಕ್ಕೆ ಬಂದು ಸ್ವಲ್ಪ ಅವರ ಮರ್ಯಾದೆ ಉಳಿಸಿದೆ ಎಂದರು.

Latest Videos
Follow Us:
Download App:
  • android
  • ios