Asianet Suvarna News Asianet Suvarna News

ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಅರ್ಧ ಬೆಲೆಗೆ ಗ್ಯಾಸ್, ಆಟೋ ಚಾಲಕರಿಗೆ .2000: ಎಚ್‌ಡಿಕೆ ಭರವಸೆ

ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ದುಬಾರಿಯಾಗಿರುವ ಅಡುಗೆ ಅನಿಲಕ್ಕೆ ಶೇ.50ರಷ್ಟುಸಬ್ಸಿಡಿ, ಆಟೋ ಚಾಲಕರಿಗೆ ಪ್ರತಿ ತಿಂಗಳು ಎರಡು ಸಾವಿರ ರು. ಆರ್ಥಿಕ ನೆರವು, ಸರ್ಕಾರಿ ನೇಮಕಾತಿ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡುವುದಾಗಿ ಜೆಡಿಎಸ್‌ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಭರವಸೆ ನೀಡಿದ್ದಾರೆ.

If JDS comes to power, subsidized gas says hd kumaraswamy at bengaluru rav
Author
First Published Mar 29, 2023, 2:01 AM IST | Last Updated Mar 29, 2023, 6:44 AM IST

ಬೆಂಗಳೂರು (ಮಾ.29) :  ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ದುಬಾರಿಯಾಗಿರುವ ಅಡುಗೆ ಅನಿಲಕ್ಕೆ ಶೇ.50ರಷ್ಟುಸಬ್ಸಿಡಿ, ಆಟೋ ಚಾಲಕರಿಗೆ ಪ್ರತಿ ತಿಂಗಳು ಎರಡು ಸಾವಿರ ರು. ಆರ್ಥಿಕ ನೆರವು, ಸರ್ಕಾರಿ ನೇಮಕಾತಿ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡುವುದಾಗಿ ಜೆಡಿಎಸ್‌ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಭರವಸೆ ನೀಡಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಪುಕ್ಕಟೆ ಗ್ಯಾಸ್‌ ನೀಡುವುದಾಗಿ ಹೇಳಿ ಉಜ್ವಲ ಯೋಜನೆ(Pradhan Mantri Ujjwala Yojana)ಯನ್ನು ಜಾರಿಗೆ ತಂದಿದೆ. ಇದನ್ನು ನಂಬಿದ ಮಹಿಳೆಯರಿಗೆ ಒಂದು ಸಿಲಿಂಡರ್‌ ಕೊಟ್ಟಮೇಲೆ ಬೆಲೆ ಏರಿಕೆಯ ಶಾಕ್‌ ನೀಡಿತು. ಈಗ ಸಿಲಿಂಡರ್‌ ಬೆಲೆ ಸಾವಿರ ರು. ದಾಟಿದ್ದು, ಬಡವರು, ಮಧ್ಯಮ ವರ್ಗದವರು ಜೀವನ ಸಾಗಿಸುವುದೇ ದುಸ್ತರವಾಗಿದೆ. ನಮ್ಮಲ್ಲಿ ಅಡುಗೆ ಅನಿಲ ರಿಯಾಯಿತಿ ಒಂದೇ ಯೋಜನೆಯಲ್ಲ, ಇನ್ನೂ ಹಲವು ಯೋಜನೆಗಳಿವೆ. ವರ್ಷಕ್ಕೆ 10 ಸಿಲಿಂಡರ್‌ಗೆ ಅರ್ಧ ಹಣ ಪಡೆಯಲಿದ್ದೇವೆ ಎಂದು ಹೇಳಿದರು.

ಅಧಿಕಾರಕ್ಕೆ ಬಂದ್ರೆ ಬಿಜೆಪಿ ಜಾರಿ ಮಾಡಿದ ಮೀಸಲಾತಿ ರದ್ದು ಮಾಡ್ತೇವೆ: ಹೆಚ್‌ಡಿಕೆ

ಇದರ ಜತೆಗೆ ಆಟೋ ಚಾಲಕರಿಗೆ ಪ್ರತಿ ತಿಂಗಳು ಎರಡು ಸಾವಿರ ರು. ನೀಡಲಾಗುವುದು. ಅಂತೆಯೇ ಅಂಗನವಾಡಿ ಕಾರ್ಯಕರ್ತರ ಶಾಶ್ವತ ಬೇಡಿಕೆ ಏನಿದೆ, ಅದನ್ನು ಈಡೇರಿಸುವ ಕೆಲಸ ಮಾಡುತ್ತೇವೆ. ಈ ಬಗ್ಗೆ ಆರ್ಥಿಕ ತಜ್ಞರ ಜತೆ ಚರ್ಚೆ ಮಾಡಲಾಗುವುದು. ಮಾತ್ರವಲ್ಲ, ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಸರ್ಕಾರ ನೇಮಕಾತಿ ವ್ಯವಸ್ಥೆಯಲ್ಲಿ ಆಮೂಲಾಗ್ರವಾಗಿ ಬದಲಾಯಿಸುತ್ತೇವೆ ಮತ್ತು ಕರ್ನಾಟಕ ಲೋಕಸೇವಾ ಆಯೋಗ(Karnataka Public Service Commission)ಕ್ಕೆ ಸರಿಯಾದ ಚಿಕಿತ್ಸೆ ನೀಡುತ್ತೇವೆ. ಮೀಸಲಾತಿ ಎಂದು ಬಿಜೆಪಿ ಸರ್ಕಾರ(BJP govt) ಜನರನ್ನು ಯಾಮಾರಿಸುತ್ತಿದೆ. ಆದರೆ, ಸರ್ಕಾರಿ ಹುದ್ದೆಗಳನ್ನು ಲಕ್ಷ, ಕೋಟಿ ಲೆಕ್ಕದಲ್ಲಿ ಮಾಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಈ ಬಾರಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ನೇಮಕಾತಿ ವ್ಯವಸ್ಥೆಯನ್ನು ಸರಿ ಮಾಡಲಾಗುವುದು. ನೇಮಕಾತಿ ಮಾಡುವ ಸಂಸ್ಥೆಗಳ ವ್ಯವಸ್ಥೆ ಸುಧಾರಣೆ ಮಾಡುತ್ತೇನೆ ಎಂದು ತಿಳಿಸಿದರು.

ಬಿಜೆಪಿ ಸರ್ಕಾರವು ಸರ್ಕಾರಿ ನೌಕರಿಯನ್ನು ಯಾವ ರೀತಿ ಕೊಡುತ್ತಿದೆ ಎನ್ನುವುದು ಜಗಜ್ಜಾಹೀರು. ಹಣ ಪಡೆದು ನೌಕರಿ ಕೊಡುತ್ತಿದ್ದಾರೆ. ಮೀಸಲಾತಿ ಮೇಲೆ ನೌಕರಿ ಕೊಡುತ್ತಿಲ್ಲ. ಹಾಗಾದರೆ, ಮೀಸಲಾತಿ ತೆಗೆದುಕೊಂಡು ಏನು ಮಾಡುವುದು? ಹಣ ಕೊಟ್ಟವರಿಗೆ ಸರ್ಕಾರಿ ನೌಕರಿ ಮಾರಾಟವಾಗುತ್ತಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಇಂತಹ ಅವೈಜ್ಞಾನಿಕ, ತಾರತಮ್ಯದ ಮೀಸಲಾತಿ ವ್ಯವಸ್ಥೆಯನ್ನು ತೆಗೆದು ಹಾಕುತ್ತೇವೆ. ಅಷ್ಟೇ ಅಲ್ಲ, ಈ ಹಣ ಫಿಕ್ಸ್‌ ಮಾಡಿ ನೌಕರಿ ಕೊಡುತ್ತರಲ್ಲಾ, ಅದನ್ನು ನಿರ್ನಾಮ ಮಾಡುತ್ತೇವೆ. ಈ ವ್ಯವಸ್ಥೆ ಸ್ವ ಚ್ಛ ಮಾಡಬೇಕೆಂದರೆ ಕೆಪಿಎಸ್‌ಸಿ ಸ್ವಚ್ಛ ಮಾಡಬೇಕು. ಅದನ್ನು ನಾವು ಮಾಡುತ್ತೇವೆ ಎಂದರು.

50 ಸ್ಥಾನ ಗೆಲ್ಲೋದಲ್ಲ, ಸ್ಪಷ್ಟಬಹುಮತ ನಮ್ಮ ಗುರಿ, ಏ.10 ರವರೆಗೆ ಪಂಚರತ್ನ ಯಾತ್ರೆ ಮುಂದುವರಿಕೆ, ಎಚ್‌ಡಿಕೆ

ಬಿಜೆಪಿ-ಕಾಂಗ್ರೆಸ್‌ 80 ಸ್ಥಾನ ದಾಟುವುದಿಲ್ಲ.

ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ ಕೇವಲ ಅಬ್ಬರ ಮಾಡುತ್ತಿವೆ ಅಷ್ಟೇ. ಆದರೆ, ಈ ಎರಡೂ ಪಕ್ಷಗಳು 80 ಸ್ಥಾನ ದಾಟಲ್ಲ. ಈ ಬಗ್ಗೆ ಅಧಿಕಾರಿಗಳೇ ಚರ್ಚೆ ಮಾಡುತ್ತಿದ್ದಾರೆ. ಪಕ್ಷಗಳ ಒಳಗೆ ನಡೆಯುತ್ತಿರುವುದು ಬೇರೆ, ಹೊರಗೆ ನಡೆಯುತ್ತಿರುವುದು ಬೇರೆ ಎಂದು ಹೇಳಿದರು.

Latest Videos
Follow Us:
Download App:
  • android
  • ios