Exclusive Interview of Mansoor Ali Khan: ಕರ್ನಾಟಕ ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರು ವಿಶೇಷ ಸಂದರ್ಶನವೊಂದರಲ್ಲಿ ಇಂದಿನ ರಾಜ್ಯಸಭಾ ಚುನಾವಣೆಯ ಕುರಿತು ಸುದೀರ್ಘವಾಗಿ ಮಾತನಾಡಿದರು.
ಬೆಂಗಳೂರು (ಜೂ.09): ಕರ್ನಾಟಕ ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರು ವಿಶೇಷ ಸಂದರ್ಶನವೊಂದರಲ್ಲಿ ಇಂದಿನ ರಾಜ್ಯಸಭಾ ಚುನಾವಣೆಯ ಕುರಿತು ಸುದೀರ್ಘವಾಗಿ ಮಾತನಾಡಿದರು. 'ಜೆಡಿಎಸ್ ಅವರು ಜಾತ್ಯತೀತರು ಮತ್ತು ಅಲ್ಪಸಂಖ್ಯಾತರ ಪರ ಎಂದು ಹೇಳಿಕೊಂಡರೆ, ಅವರು ನನಗೆ ಮತ ನೀಡಬೇಕು. ಇಲ್ಲದಿದ್ದರೆ, ಅವರು ಅದನ್ನು ನಿಲ್ಲಿಸಬೇಕು ' ಎಂದು ಮನ್ಸೂರ್ ಅಲಿ ಖಾನ್ ಏಷ್ಯಾನೆಟ್ ನ್ಯೂಸ್ ಡಿಜಿಟಲ್‌ಗೆ ತಿಳಿಸಿದರು.
ಏಷ್ಯಾನೆಟ್ ನ್ಯೂಸ್ ಡಿಜಿಟಲ್ ಜೊತೆ ಮಾತನಾಡಿದ ಮನ್ಸೂರ್ ಅಲಿ ಖಾನ್ ಅವರು ರಾಜ್ಯಸಭೆ ಚುನಾವಣೆ ಏಕೆ ಆಗಬೇಕು. 'ರಾಜ್ಯಸಭೆಯಿಂದ ಅಲ್ಪಸಂಖ್ಯಾತರ ಸಂಖ್ಯೆ ಕಡಿಮೆಯಾಗುತ್ತಿದೆ ಮತ್ತು ಈಗ ಬಿಜೆಪಿಯು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಮುಸ್ಲಿಮರ ಶೂನ್ಯ ಅಸ್ತಿತ್ವವನ್ನು ಹೊಂದಿದೆ. ಅಲ್ಪಸಂಖ್ಯಾತರು, ದಲಿತರು, ಒಬಿಸಿಗಳು ಮತ್ತು ಸಮಾಜದಲ್ಲಿ ಶೋಷಣೆಗೊಳಗಾದವರ ಧ್ವನಿಯಾಗಲು ನಾನು ಬಯಸುತ್ತೇನೆ ಎಂದು ಹೇಳಿದರು.
ಅಲ್ಪಸಂಖ್ಯಾತ ಸಮುದಾಯದಿಂದ ಪ್ರತಿದಿನ ವರದಿಯಾಗುತ್ತಿರುವ ಅಸಹಿಷ್ಣುತೆಯ ಬಗ್ಗೆ ಕೇಳಿದ ಪ್ರಶ್ನೆಗೆ, 'ಮುಸ್ಲಿಮರು, ದಲಿತರು ಮತ್ತು ಒಬಿಸಿಯವರನ್ನು ಮೂಲೆಗುಂಪು ಮಾಡಿ ಗುರಿಯಾಗಿಸಲಾಗುತ್ತಿದೆ. ಹಾಗಾಗಿ ನಾನು ಅವರ ಪರವಾಗಿ ಮಾತನಾಡಬೇಕು ಮತ್ತು ಜೆಡಿಎಸ್ ನಾಯಕರು ಬಯಸಿದರೆ ನಾನು ಅದರ ಬಗ್ಗೆ ಕೆಲಸ ಮಾಡುತ್ತೇನೆ ಹಾಗಾಗಿ ನನಗೆ ಗೆಲ್ಲಲು ಸಹಾಯ ಮಾಡಬೇಕು ಎಂದರು. ನಾನು ಕನ್ನಡಿಗ ಮತ್ತು ಕರ್ನಾಟಕದಲ್ಲಿ ಪರಿಹರಿಸಬೇಕಾದ ಹಲವಾರು ಸಮಸ್ಯೆಗಳಿವೆ. ನನಗೆ ಮೊದಲ ಆದ್ಯತೆ ಕನ್ನಡ ಮತ್ತು ಕರ್ನಾಟಕ. ಆದ್ದರಿಂದ ಕನ್ನಡಿಗರಿಗಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ರಾಜ್ಯಸಭಾ ಸ್ಥಾನಕ್ಕೆ ಭಾರೀ ಪೈಪೋಟಿ; 3 ಗೆಲ್ಲುವತ್ತ ಬಿಜೆಪಿ ಚಿತ್ತ, 2ಕ್ಕೇರತ್ತ ಕಾಂಗ್ರೆಸ್‌ನ ಮೊತ್ತ
ಬೇರೆ ಪಕ್ಷದವರಿಗೆ ಮತ ಹಾಕುವ ಅಗತ್ಯವೇನಿದೆ ಎಂಬ ಪ್ರಶ್ನೆಗೆ, ತಾನೊಬ್ಬ ಯುವಕ, ಶಿಕ್ಷಣ ತಜ್ಞ ಎಂದು ಹೇಳಿದರು. 'ಬಿಜೆಪಿ ಮತಗಳನ್ನು ಕಸಿಯಲು ನನಗಿಷ್ಟವಿಲ್ಲ. ಎಲ್ಲ ಪಕ್ಷಗಳಿಂದಲೂ ಮತ ಕೇಳುತ್ತಿದ್ದೇನೆ. ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ನಾನು ಮತ್ತು ನನ್ನ ಕೆಲಸ ಎಲ್ಲರಿಗೂ ತಿಳಿದಿದೆ. ನಾನು ಅವರ ಆತ್ಮಸಾಕ್ಷಿಯನ್ನು ಕೇಳುತ್ತೇನೆ. ನಾನು ಯುವಕ, ಶಕ್ತಿಯುತ ಮತ್ತು ಅದಕ್ಕಿಂತ ಹೆಚ್ಚಾಗಿ ಕರ್ನಾಟಕಕ್ಕೆ ಏನಾದರೂ ದೊಡ್ಡದನ್ನು ಮಾಡಲು ಬಯಸುತ್ತೇನೆ ಎಂಬ ಕಾರಣದಿಂದ ನನಗೆ ಮತ ಹಾಕುವಂತೆ ನಾನು ಕೇಳುತ್ತೇನೆ' ಎಂದು ಅವರು ಹೇಳಿದರು.
ತುಮಕೂರು ಲೋಕಸಭಾ ಕ್ಷೇತ್ರದಿಂದ ಸೋತಿದ್ದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರನ್ನು ಬಿಜೆಪಿ ರಾಜ್ಯಸಭೆಗೆ ಆಯ್ಕೆ ಮಾಡಿದೆ ಎಂದು ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಖಾನ್, ಗೌಡರ ಕುಟುಂಬಕ್ಕೆ ಎಚ್‌ಡಿ ದೇವೇಗೌಡರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದವರು ಯಾರು ಎಂಬುದು ಗೊತ್ತಿದೆ. ಇದು ಅವರ ಆತ್ಮಸಾಕ್ಷಿಗೆ ಬಿಟ್ಟದ್ದು ಮತ್ತು ಸತ್ಯ ಯಾವಾಗಲೂ ಮೇಲುಗೈ ಸಾಧಿಸುತ್ತದೆ ಎಂದರು.
ಬಿಜೆಪಿಗೆ ಎರಡು ಸ್ಥಾನಗಳನ್ನು ಗೆಲ್ಲುವ ಸಂಖ್ಯಾಬಲವಿದೆ, ಕಾಂಗ್ರೆಸ್‌ಗೆ ಒಂದು ಸ್ಥಾನ ಮತ್ತು ಜೆಡಿಎಸ್‌ಗೆ ಯಾವುದೇ ಸ್ಥಾನ ಗೆಲ್ಲುವ ಸಂಖ್ಯೆಯಿಲ್ಲ. ಇದಕ್ಕೆ ಪ್ರತಿಕ್ರಿಯಿಸಿದ ಮನ್ಸೂರ್ ಖಾನ್, 'ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಆಯ್ಕೆ ಯಾವುದೇ ಪಕ್ಷಕ್ಕೂ ಇಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಕೆಲ ಶಾಸಕರು ಪಕ್ಷವನ್ನು ತೊರೆದು ಬಿಜೆಪಿಗೆ ಹೋದಾಗ ಡಿಕೆ ಶಿವಕುಮಾರ್ ಸರ್ಕಾರವನ್ನು ಉಳಿಸಲು ಇನ್ನಿಲ್ಲದ ಕೆಲಸ ಮಾಡಿದ್ದಾರೆ. ಅದನ್ನು ಎಚ್‌ಡಿ ಕುಮಾರಸ್ವಾಮಿ ಅಲ್ಲಗಳೆಯುವಂತಿಲ್ಲ. ಈಗ, ಪ್ರಗತಿಪರ, ಜಾತ್ಯತೀತ ವ್ಯಕ್ತಿಯನ್ನು ಕಾಂಗ್ರೆಸ್‌ನಿಂದ ಕಣಕ್ಕಿಳಿಸಿದಾಗ, ಅವರು ನನಗೆ ಮತ ಕೊಡುತ್ತಾರೆ ಎಂದು ಈಗಲೂ ನಿರೀಕ್ಷಿಸುತ್ತೇನೆ ಎಂದರು.
ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಹೆಚ್ ಡಿ ದೇವೇಗೌಡರ ಕುಟುಂಬಕ್ಕೆ 240 ಕೋಟಿ ರೂಪಾಯಿ ಸಾಲ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಅದ್ಯಾವುದೂ ದೃಢಪಟ್ಟಿಲ್ಲ. ಈ ವಿಷಯವನ್ನು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಮಾತನಾಡಿರುವ ಖಾನ್, ನನಗೆ ಅದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಮತ್ತು ನಾನು ಅದರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಮುಖ್ಯವಾಗಿ ಕುಪೇಂದ್ರ ರೆಡ್ಡಿ ಅವರೂ ನನ್ನನ್ನು ಬೆಂಬಲಿಸುವಂತೆ ಕೋರುತ್ತೇನೆ ಎಂದು ಹೇಳಿದರು. 'ಜೆಡಿಎಸ್ ಅಲ್ಪಸಂಖ್ಯಾತರನ್ನು ಬೆಂಬಲಿಸುತ್ತಿಲ್ಲ, ಸುಮ್ಮನೆ ನಟಿಸುತ್ತಿದ್ದಾರೆ. ಇದು ಪದೇ ಪದೇ ಸಾಬೀತಾಗುತ್ತಿದೆ. ಜೆಡಿಎಸ್ ಅಲ್ಪಸಂಖ್ಯಾತ ಸಮುದಾಯಗಳನ್ನು ಬೆಂಬಲಿಸುತ್ತದೆ ಎಂದು ಭಾವಿಸುವವರಿಗೆ ನಾನು ನಿಜವಾಗಿಯೂ ವಿಷಾದಿಸುತ್ತೇನೆ ಎಂದು ಮನ್ಸೂರ್ ಅಲಿ ಖಾನ್ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹತ್ತಾರು ಕಾಂಗ್ರೆಸ್ ನಾಯಕರು ಪಕ್ಷ ತೊರೆದು ಬಿಜೆಪಿ-ಆಪ್ ಸೇರಿದ್ದಾರೆ. ಸಾಧಕ-ಬಾಧಕಗಳ ಬಗ್ಗೆ ಏಷ್ಯಾನೆಟ್ ನ್ಯೂಸ್ ಅವರನ್ನು ಪ್ರಶ್ನಿಸಿದಾಗ, ನಾನು ಸೋತರೂ ಕಾಂಗ್ರೆಸ್ ತೊರೆದು ಬೇರೆ ಪಕ್ಷಕ್ಕೆ ಸೇರುವುದಿಲ್ಲ ಎಂದಿದ್ದಾರೆ. ಕಾಂಗ್ರೆಸ್ ನನಗೆ ಎಲ್ಲವನ್ನೂ ನೀಡಿದೆ. ನಾನು ಕೆಪಿಸಿಸಿ (ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ) ಸಂಶೋಧನಾ ವಿಭಾಗದ ಅಧ್ಯಕ್ಷನಾಗಿದ್ದೆ ಮತ್ತು ಈಗ ಪ್ರಧಾನ ಕಾರ್ಯದರ್ಶಿಯಾಗಿದ್ದೇನೆ. ಪಕ್ಷದ ಸಿಪಾಯಿ ಮತ್ತು ತಳಮಟ್ಟದಿಂದ ಎಲ್ಲಾ ಹಂತಗಳಿಗೆ ಬೆಳೆದಿದ್ದೇನೆ ಎಂದು ಮನ್ಸೂರ್ ಹೇಳಿದರು.
ಕಾಂಗ್ರೆಸ್‌ನಿಂದ ರಾಜ್ಯಸಭೆಗೆ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಅಲಿ ಖಾನ್ ಆಯ್ಕೆ
ಮನ್ಸೂರ್ ಅಲಿ ಖಾನ್ ಅವರ ತಂದೆ ಕೆ ರೆಹಮಾನ್ ಖಾನ್ ಅವರು ಯುಪಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದವರು. ಈ ಕಾರಣದಿಂದ ರಾಜ್ಯಸಭಾ ಟಿಕೆಟ್ ನೀಡಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಹಾಗಿದ್ದರೆ 2008ರಲ್ಲೇ ನಾನು ವಿಧಾನಸಭೆಯ ಸದಸ್ಯನಾಗುತ್ತಿದ್ದೆ. ನನ್ನ ತಂದೆ ಪಕ್ಷಕ್ಕಾಗಿ ದುಡಿದಿದ್ದಾರೆ ಮತ್ತು ಕಳೆದ 50 ವರ್ಷಗಳಿಂದ ಇನ್ನೂ ಕೆಲಸ ಮಾಡುತ್ತಿದ್ದಾರೆ ಅಲ್ಲದೇ ನಾನು 20 ವರ್ಷಕ್ಕೂ ಹೆಚ್ಚು ಕೆಲಸ ಮಾಡುತ್ತಿದ್ದೇನೆ. ಪಕ್ಷದಲ್ಲಿ ನನ್ನ ಸ್ಥಾನವನ್ನು ಸಮರ್ಪಣೆ ಮತ್ತು ಬದ್ಧತೆಯಿಂದ ಗಳಿಸಿದ್ದೇನೆ ಮತ್ತು ಅದು ಪಕ್ಷಕ್ಕೆ ತಿಳಿದಿದೆ ಎಂದರು.
'ಜೆಡಿಎಸ್ ಕೋಮುವಾದಿ ಶಕ್ತಿಗಳನ್ನು ಸೋಲಿಸಲು ಮತ್ತು ಜಾತ್ಯತೀತ ಮೌಲ್ಯಗಳನ್ನು ಎದುರಿಸಲು ಬಯಸಿದರೆ, ಅವರು ನನಗೆ ಮತ ಹಾಕುತ್ತಾರೆ ಎಂದು ಒಂದೇ ಒಂದು ವಿನಂತಿಯನ್ನು ಹೊಂದಿದ್ದೇನೆ. ನನ್ನ ರಾಜ್ಯಕ್ಕೆ ಸೇರಿದ ಎಲ್ಲರ ಸಮಸ್ಯೆಯನ್ನು ಪರಿಹರಿಸುವ ಮಾರ್ಗದಲ್ಲಿ ಕೆಲಸ ಮಾಡುತ್ತೇನೆ. ಆದರೆ ಈಗ ಚೆಂಡು ಜೆಡಿಎಸ್ ಅಂಗಳದಲ್ಲಿದೆ. ನನ್ನನ್ನು ಆಯ್ಕೆ ಮಾಡಬೇಕೋ ಅಥವಾ ಕೋಮುವಾದಿ ಶಕ್ತಿಗಳಿಗೆ ಸಹಾಯ ಮಾಡಬೇಕೋ ಎಂಬುದು ಅವರಿಗೆ ಬಿಟ್ಟದ್ದು ಎಂದು ಮನ್ಸೂರ್ ಅಲಿ ಖಾನ್ ಹೇಳಿದ್ದಾರೆ. ಇನ್ನು ಮನ್ಸೂರ್ ಅಲಿ ಖಾನ್ ಅವರು ಡೆಲ್ಲಿ ಪಬ್ಲಿಕ್ ಸ್ಕೂಲ್, ಸ್ಕೂಲ್ ಆಫ್ ಇಂಡಿಯಾ, ಅಲ್ ಅಮೀನ್ ಮತ್ತು ಅನೇಕ ದೈತ್ಯ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.
ಸಂದರ್ಶನಕಾರ: ಶರತ್ ಶರ್ಮಾ ಕಲಗಾರು
