Asianet Suvarna News Asianet Suvarna News

ಬಿಜೆಪಿ-ಜೆಡಿಎಸ್‌ ಒಂದಾದರೆ ಇಬ್ಬರಿಗೂ ಅನುಕೂಲ: ಯೋಗೇಶ್ವರ್‌

ವಿಧಾನಸಭಾ ಚುನಾವಣೆಯ ಫಲಿತಾಂಶ ಲೋಕಸಭಾ ಚುನಾವಣೆಯಲ್ಲೂ ಪುನರಾವರ್ತನೆ ಆಗಬಾರದು ಎಂದರೆ ಬಿಜೆಪಿ-ಜೆಡಿಎಸ್‌ ಮೈತ್ರಿ ಮಾಡಿಕೊಳ್ಳಬೇಕು. ಎರಡೂ ಪಕ್ಷಗಳ ಮತದಾರರ ಮನಸ್ಥಿತಿ ಒಂದೇ ಇರುವುದರಿಂದ, ಕಾಂಗ್ರೆಸ್‌ನ್ನು ಎದುರಿಸಲು ಮೈತ್ರಿ ನೆರವಾಗುತ್ತದೆ: ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌
 

If BJP and JDS come together it will be beneficial for both Says CP Yogeshawar grg
Author
First Published Sep 9, 2023, 3:30 AM IST

ರಾಮನಗರ(ಸೆ.09): ಬಿಜೆಪಿ ಮತ್ತು ಜೆಡಿಎಸ್‌ ಕಳೆದ 25 ವರ್ಷಗಳಿಂದ ಪರಸ್ಪರ ಹೋರಾಟ ಮಾಡಿಕೊಂಡು ಬಂದಿದ್ದರೂ, ಏನೂ ಪ್ರಯೋಜನವಾಗಿಲ್ಲ. ಇದರ ಲಾಭ ಪಡೆದು ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್‌ ವಿರುದ್ಧ ಹುಟ್ಟಿರುವ ಎರಡೂ ಪಕ್ಷಗಳು ಅಣ್ಣ-ತಮ್ಮಂದಿರಂತೆ ಒಂದಾದರೆ, ಇಬ್ಬರಿಗೂ ಅನುಕೂಲವಾಗಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಅಭಿಪ್ರಾಯಪಟ್ಟರು. 

ವಿಧಾನಸಭಾ ಚುನಾವಣೆಯ ಫಲಿತಾಂಶ ಲೋಕಸಭಾ ಚುನಾವಣೆಯಲ್ಲೂ ಪುನರಾವರ್ತನೆ ಆಗಬಾರದು ಎಂದರೆ ಬಿಜೆಪಿ-ಜೆಡಿಎಸ್‌ ಮೈತ್ರಿ ಮಾಡಿಕೊಳ್ಳಬೇಕು. ಎರಡೂ ಪಕ್ಷಗಳ ಮತದಾರರ ಮನಸ್ಥಿತಿ ಒಂದೇ ಇರುವುದರಿಂದ, ಕಾಂಗ್ರೆಸ್‌ನ್ನು ಎದುರಿಸಲು ಮೈತ್ರಿ ನೆರವಾಗುತ್ತದೆ ಎಂದರು. ನಮ್ಮ ಅಸ್ತಿತ್ವ ಮತ್ತು ಪಕ್ಷಗಳಿಗಾಗಿ ಹಿಂದೆ ಕುಮಾರಸ್ವಾಮಿ ಮತ್ತು ನಾನು, ನಾಯಿ-ನರಿಗಳಂತೆ ಕಿತ್ತಾಡಿದ್ದೇವೆ. ಯಾರಿಗೂ ಲಾಭವಾಗದ ಈ ಕಿತ್ತಾಟ ನಿಲ್ಲಿಸಿ, ಇಬ್ಬರೂ ಒಂದಾಗಬೇಕು ಎಂಬ ಭಾವನೆ ಮೊದಲಿನಿಂದಲೂ ನನ್ನಲ್ಲಿತ್ತು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ ಎಂದರು.

News Hour: ಕಾಂಗ್ರೆಸ್‌ ಕುದುರೆ ಕಟ್ಟಿಹಾಕಲು ಮೈತ್ರಿ ಹಗ್ಗ ಹಿಡಿದು ಬಂದ ಬಿಜೆಪಿ-ಜೆಡಿಎಸ್‌

ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರಕ್ಕೆ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡಿಲ್ಲ. ಪಕ್ಷ ಯಾರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಿದರೂ ತಕರಾರಿಲ್ಲ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಸಹೋದರರ ವಿರುದ್ಧ ಇರುವ ಜನಾಕ್ರೋಶ ಬಳಸಿಕೊಂಡು ಡಿ.ಕೆ.ಸುರೇಶ್‌ ಅವರನ್ನು ಸೋಲಿಸಬೇಕು. ಹಿಂದೆ ಒಂದು ಸ್ಥಾನ ಗೆದ್ದಿದ್ದ ಕಾಂಗ್ರೆಸ್‌ನ್ನು ಶೂನ್ಯಕ್ಕಿಳಿಸಬೇಕು. ಸೀಟು ಹಂಚಿಕೆ ಮತ್ತು ಅಭ್ಯರ್ಥಿ ವಿಷಯಕ್ಕೆ ನಮ್ಮಲ್ಲಿ ಮನಸ್ತಾಪ ಬರುವುದಿಲ್ಲ. ಈ ವಿಷಯದಲ್ಲಿ ದೇವೇಗೌಡರು ಸ್ವಲ್ಪ ಅಡ್ಜೆಸ್ಟ್‌ ಮಾಡಿಕೊಳ್ಳಬೇಕು. ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಲು ಒಂದಾಗಬೇಕು. ಇದರಿಂದ, ಜೆಡಿಎಸ್‌ಗೂ ಅನುಕೂಲವಾಗಲಿದೆ ಎಂದರು.

Follow Us:
Download App:
  • android
  • ios