ರಾಘವೇಂದ್ರ ಹೊರ ಬರ್ತಾರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜೀನಾಮೆ ನೀಡ್ತಾರೆ. ಗೀತಾ ಶಿವರಾಜ್ ಕುಮಾರ್ ಗೆಲ್ಲಲ್ಲ, ರಾಘವೇಂದ್ರಗೆ ಮತ ನೀಡಲು ಮನಸ್ಸಿಲ್ಲ ಎಂದು ಹೇಳುವ ಮೂಲಕ ಬಿ.ವೈ. ರಾಘವೇಂದ್ರ ವಿರುದ್ಧ ಹರಿಹಾಯ್ದ ಈಶ್ಬರಪ್ಪ 

ಶಿವಮೊಗ್ಗ(ಮೇ.07): ಶಿವಮೊಗ್ಗ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಜನ ಬೆಂಬಲ ಸಿಕ್ಕಿದೆ. ಎರಡು ಲಕ್ಷಗಳ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ. ನನಗೆ ಕಾಂಪಿಟೇಟರ್ ಇಲ್ಲ, ಮೊದಲನೇ ಸ್ಥಾನದಲ್ಲಿ ನಾನಿದ್ದರೆ ಎರಡನೇ ಸ್ಥಾನಕ್ಕೆ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಬಡಿದಾಡ್ತಾ ಇದ್ದಾರೆ. ಫಲಿತಾಂಶದ ಬಳಿಕ ಬಿಜೆಪಿಯಲ್ಲಿ ಭಾರೀ ಬದಲಾವಣೆ ಆಗಲಿದೆ. ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ತಿಲಾಂಜಲಿ ಬೀಳಲಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್‌. ಈಶ್ವರಪ್ಪ ತಿಳಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು(ಮಂಗಳವಾರ) ಶಿವಮೊಗ್ಗದ ತಮ್ಮ ನಿವಾಸದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಜತೆ ಮಾತನಾಡಿದ ಈಶ್ಬರಪ್ಪ ಅವರು, ರಾಘವೇಂದ್ರ ಹೊರ ಬರ್ತಾರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜೀನಾಮೆ ನೀಡ್ತಾರೆ. ಗೀತಾ ಶಿವರಾಜ್ ಕುಮಾರ್ ಗೆಲ್ಲಲ್ಲ, ರಾಘವೇಂದ್ರಗೆ ಮತ ನೀಡಲು ಮನಸ್ಸಿಲ್ಲ ಎಂದು ಹೇಳುವ ಮೂಲಕ ಬಿ.ವೈ. ರಾಘವೇಂದ್ರ ವಿರುದ್ಧ ಹರಿಹಾಯ್ದಿದ್ದಾರೆ. 

LIVE: SHIVAMOGGA ELECTIONS 2024: ಬಿವೈ ರಾಘವೇಂದ್ರ VS ಗೀತಾ ಶಿವರಾಜ್ ಕುಮಾರ್‌ VS ಕೆಎಸ್‌ ಈಶ್ವರಪ್ಪ

ರಾಘವೇಂದ್ರ ನೀಚ ಕೆಲಸ ಮಾಡ್ತಿದ್ದಾರೆ. ಹಳೇ ಕ್ಯಾಸೆಟ್ ಇಟ್ಕೊಂಡು ಅಪಪ್ರಚಾರಕ್ಕೆ ಮುಂದಾಗಿದ್ದಾರೆ. ಸೋಲು ಗ್ಯಾರಂಟಿ ಆದ ಮೇಲೆ ಅಪಪ್ರಚಾರ ಮಾಡ್ತಿದ್ದಾರೆ. ನಾನು ಕಣದಿಂದ ಹಿಂದೆ ಹೋಗೋ ಮಾತೇ ಇಲ್ಲ, ಗೆದ್ದೆ ಗೆಲ್ತೀನಿ. ನನ್ನ ಸಂಖ್ಯೆ 8, ಕಬ್ಬನ್ನ ಹಿಡಿದಿರೋ ರೈತ ನನ್ನ ಗುರುತು, ನನ್ನನ್ನ ಗೆಲ್ಸಿ. ಮೋದಿಯನ್ನ ಪ್ರಧಾನಿ ಮಾಡಲು ನನಗೆ ಮತ ನೀಡಿ, ನನ್ನನ್ನ ಗೆಲ್ಲಿಸಿ. ರಾಘವೇಂದ್ರ ನನ್ನ ವಿರುದ್ಧ ಎಲ್ಲಾ ಮಾಡಿ ಆಯ್ತು ಎಂದು ಹೇಳಿದ್ದಾರೆ.