Asianet Suvarna News Asianet Suvarna News

ನಾನು ಬದುಕಿರೋವರೆಗೂ ಬಿಜೆಪಿ ವಿರೋಧಿಸುವೆ: ಸಿದ್ದರಾಮಯ್ಯ

ದೇಶದಲ್ಲಿ ಶೋಷಿತರನ್ನು ಮತ್ತಷ್ಟು ಶೋಷಿಸುತ್ತಿರುವ ಹಾಗೂ ಸಂವಿಧಾನವನ್ನು ವಿರೋಧಿಸುತ್ತಿರುವ ಬಿಜೆಪಿಯನ್ನು ನನ್ನ ಕೊನೇ ಉಸಿರಿನ ತನಕ ವಿರೋಧ ಮಾಡುತ್ತಲೇ ಇರುತ್ತೇನೆ. ಇದು ನನ್ನ ಸಿದ್ಧಾಂತ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. 

I will oppose BJP as long as I live Says Siddaramaiah gvd
Author
First Published Mar 7, 2023, 4:20 AM IST

ಟಿ.ನರಸೀಪುರ (ಮೈಸೂರು) (ಮಾ.07): ದೇಶದಲ್ಲಿ ಶೋಷಿತರನ್ನು ಮತ್ತಷ್ಟು ಶೋಷಿಸುತ್ತಿರುವ ಹಾಗೂ ಸಂವಿಧಾನವನ್ನು ವಿರೋಧಿಸುತ್ತಿರುವ ಬಿಜೆಪಿಯನ್ನು ನನ್ನ ಕೊನೇ ಉಸಿರಿನ ತನಕ ವಿರೋಧ ಮಾಡುತ್ತಲೇ ಇರುತ್ತೇನೆ. ಇದು ನನ್ನ ಸಿದ್ಧಾಂತ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ವರುಣಾ ಕ್ಷೇತ್ರದಲ್ಲಿ ಮಾತನಾಡಿ, ಬಿಜೆಪಿಯ ಇತಿಹಾಸ ನೋಡಿದಾಗ ಅದೊಂದು ಮೇಲ್ಜಾತಿ ಪಕ್ಷ. ಅವರು ಬಾಬಾ ಸಾಹೇಬರು ಕೊಟ್ಟಸಂವಿಧಾನ ಪರವಾಗಿ ಇಲ್ಲ ಎಂದರು. ಹಿಂದು, ಮುಸ್ಲಿಂ, ಕ್ರಿಶ್ಚಿಯನ್‌ ಸೇರಿ ಯಾವ ಧರ್ಮದಲ್ಲೂ ಧರ್ಮದ ಹೆಸರಲ್ಲಿ ಸಮಾಜದಲ್ಲಿ ಅಸಮಾನತೆ, ದ್ವೇಷ ಮಾಡು ಎಂದು ಹೇಳಿಲ್ಲ. ಆದರೆ ಸನಾತನ ಧರ್ಮವನ್ನು ಆರೆಸ್ಸೆಸ್‌ ಅಜೆಂಡಾದಂತೆ ಪೋಷಿಸುತ್ತಿರುವ ಬಿಜೆಪಿಯವರು ಹಿಂದುತ್ವದ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ಧರ್ಮ, ಧರ್ಮಗಳ ನಡುವೆ ಕಂದಕ ಸೃಷ್ಟಿಸುತ್ತಿದ್ದಾರೆ ಎಂದರು.

ನಾನು ಲೋಕಾ ಬಂದ್‌ ಮಾಡಿದ್ದರೆ ಇಂದೇ ರಾಜೀನಾಮೆ ಕೊಡ್ತೇನೆ: ನಾನು ಲೋಕಾಯುಕ್ತ ಬಂದ್‌ ಮಾಡಿದ್ದರೆ ಇವತ್ತೇ ರಾಜೀನಾಮೆ ಕೊಡುತ್ತೇನೆ. ನಾನು ಲೋಕಾಯುಕ್ತ ಬಂದ್‌ ಮಾಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ನಾವು ಭ್ರಷ್ಟಾಚಾರ ನಿಗ್ರಹಕ್ಕೆ ಎಸಿಬಿ ರಚನೆ ಮಾಡಿದ್ದೆ ಅಷ್ಟೆ. ಲೋಕಾಯುಕ್ತದ ಯಾವ ಅಧಿಕಾರವನ್ನೂ ಕಿತ್ತುಕೊಂಡಿಲ್ಲ. ನಮ್ಮ ಕಾಲದಲ್ಲೂ ಲೋಕಾಯುಕ್ತ ಇದ್ದರು. ಎಲ್ಲಾ ಸತ್ಯ ಗೊತ್ತಿದ್ದರೂ ಬೊಮ್ಮಾಯಿ ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು. ಎಸಿಬಿ ರದ್ದು ಮಾಡುತ್ತೇವೆ ಎಂದು ಬಿಜೆಪಿ ಪ್ರಣಾಳಿಕೆಯಲ್ಲೇ ಹೇಳಿತ್ತು. ಆದರೆ, ಎಸಿಬಿ ರದ್ದು ಮಾಡಿದ್ದು ಬಿಜೆಪಿ ಸರ್ಕಾರವಲ್ಲ, ಎಸಿಬಿ ರದ್ದು ಮಾಡಿದ್ದು ನ್ಯಾಯಾಲಯ. 

ಜೆಡಿ​ಎಸ್‌ಗೆ ಕೊಟ್ಟ ಮತ ವೇಸ್ಟ್‌, ದುಡ್ಡಿದೆ ಅಂತ ಪಂಚರತ್ನ ಯಾತ್ರೆ ಮಾಡ್ತಿದ್ದಾರೆ: ಸಿದ್ದ​ರಾ​ಮಯ್ಯ

ಬಿಜೆಪಿಯವರಿಗೆ ಸುಳ್ಳು ಹೇಳುವುದು ಚಟ. ಸುಳ್ಳೇ ಬಿಜೆಪಿ ಮನೆದೇವರು. ಹೀಗಾಗಿ, ಲೋಕಾಯುಕ್ತ ವಿಚಾರದಲ್ಲಿ ಬಿಜೆಪಿಯವರು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಅವರು ಕಟುಕಿದರು. ಶಾಸಕ ಮಾಡಾಳ್‌ ವಿರೂಪಾಕ್ಷಪ್ಪನನ್ನ ಸರ್ಕಾರವೇ ರಕ್ಷಣೆ ಮಾಡುತ್ತಿದೆ. ವಿರೂಪಾಕ್ಷ ಎಲ್ಲಿದ್ದಾನೆ ಎಂಬುದು ಸರ್ಕಾರಕ್ಕೆ ಗೊತ್ತಿದೆ. ಅವನು ಅವನ ಮೆನೆಯಲ್ಲೇ ಓಡಾಡಿಕೊಂಡಿದ್ದಾನೆ. ಅವನನ್ನು ಬಂಧಿಸದೆ ಇವರು ನಾಟಕ ಮಾಡ್ತಿದ್ದಾರೆ. ಲುಕ್‌ಔಟ್‌ ನೋಟಿಸ್‌ ಹೆಸರಿನಲ್ಲಿ ಜನರ ಗಮನ ಬೇರೆಡೆ ಸೆಳೆಯುತ್ತಿದ್ದಾರೆ ಅಷ್ಟೆ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲು ಬಂದಾಗಲೇ ಯಾಕೆ ಬಂಧಿಸಲಿಲ್ಲ ಎಂದು ಪ್ರಶ್ನಿಸಿದರು.

ಮೈ-ಬೆಂ ಹೈವೇ ಮಾಡಿದ್ದು ನಾವು, 9ಕ್ಕೆ ರಸ್ತೆ ಪರಿಶೀಲಿಸ್ತೇವೆ: ಮಾರ್ಚ್‌ 12ರಂದು ಪ್ರಧಾನಿ ಮೋದಿ ಉದ್ಘಾಟಿಸಲಿರುವ ಮೈಸೂರು- ಬೆಂಗಳೂರು ದಶಪಥ ರಸ್ತೆ ಕುರಿತಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಕ್ರೆಡಿಟ್‌ ವಾರ್‌ ಆರಂಭವಾಗಿದ್ದು, ಇದು ಉಭಯ ಪಕ್ಷಗಳ ನಾಯಕರ ನಡುವಿನ ಮಾತಿನ ಚಕಮಕಿಗೆ ಕಾರಣವಾಗಿದೆ. ಈ ರಸ್ತೆಯ ಕ್ರೆಡಿಟ್‌ ನಮ್ಮ ಸರ್ಕಾರಕ್ಕೆ ಸಲ್ಲಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿದ್ದು, ಇದಕ್ಕೆ ಸಂಸದ ಪ್ರತಾಪ್‌ ಸಿಂಹ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಸೇರಿದಂತೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ. ಪ್ರಧಾನಿ ಮೋದಿ ಮಾಡಿದ ಕೆಲಸದ ಕ್ರೆಡಿಟ್‌ ಪಡೆಯಲು ಕಾಂಗ್ರೆಸ್‌ ನಾಟಕವಾಡುತ್ತಿದೆ ಎಂದು ಟೀಕಿಸಿದ್ದಾರೆ.

ದೇಶದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌ ತಬ್ಬಲಿ: ಬಿ.ಎಸ್‌.ಯಡಿಯೂರಪ್ಪ

ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮಾ.9 ರಂದು ಎಕ್ಸ್‌ಪ್ರೆಸ್‌ ವೇ ಪರಿಶೀಲನೆ ನಡೆಸುತ್ತೇವೆ. ಆ ರಸ್ತೆಯ ಕ್ರೆಡಿಟ್‌ ನಮ್ಮ ಸರ್ಕಾರಕ್ಕೆ ಸಲ್ಲಬೇಕು. ಪ್ರತಾಪ್‌ ಸಿಂಹನದಾಗಲಿ, ಬಿಜೆಪಿ ಸರ್ಕಾರದಾಗಲಿ ಯಾವ ಪಾತ್ರವೂ ಇಲ್ಲ. ಪ್ರತಾಪ ಸಿಂಹ ಲೋಕಸಭಾ ವ್ಯಾಪ್ತಿಗೆ ಕೆಲವು ಕಿ.ಮೀ ಮಾತ್ರ ಸೇರುತ್ತದೆ. ಆದರೂ, ನಮ್ಮದು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಡಾ.ಎಚ್‌.ಸಿ.ಮಹದೇವಪ್ಪ ಮುಂದೆ ನಿಂತು ಈ ರಸ್ತೆ ಮಾಡಿಸಿದರು ಎಂದು ಹೇಳಿದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪ್ರತಾಪ್‌ ಸಿಂಹ, ಇದು ಮೋದಿ ಕನಸಿನ ಕೂಸು. ಸಿದ್ದರಾಮಯ್ಯನವರೇ, 2 ತಿಂಗಳು ಕಾಯಿರಿ. ಜನ ನಿಮಗೆ ಹೇಗಿದ್ದರೂ ನಿವೃತ್ತಿ ಕೊಡುತ್ತಾರೆ. ಆಗ ಮೊಮ್ಮಕ್ಕಳ ಜೊತೆ ಬೆಂಗಳೂರು-ಮೈಸೂರಿಗೆ ಜಾಲಿ ರೈಡ್‌ ಓಡಾಡುವಿರಂತೆ. ಈಗ ಪರಿಶೀಲನೆ ಮಾಡೋಕೆ ಏನೂ ಉಳಿದಿಲ್ಲ. ಜಾಲಿ ರೈಡ್‌ ಮಾಡೋದಕ್ಕೆ ಒಂದು ಒಳ್ಳೆ ಹೈವೇ ಮಾಡಿದ್ದೇನೆ ಎಂದು ಕುಟುಕಿದರು.

Follow Us:
Download App:
  • android
  • ios