Asianet Suvarna News Asianet Suvarna News

ಬಿಜೆಪಿ ಸರ್ಕಾರ 40 % ಅಲ್ಲ, ಕಾಮಗಾರಿ ನಡೆಸದೇ 100% ಕಮಿಷನ್ ಹೊಡೆದಿದೆ: ಎಚ್‌ಡಿಕೆ

ಹಿಂದಿನ ಬಿಜೆಪಿ ಸರ್ಕಾರದ ಮೇಲೆ 40 ಪರ್ಸೆಂಟ್‌ ಕಮಿಷನ್‌ ಸರ್ಕಾರ ಎಂಬ ಆರೋಪವಿತ್ತು. ಆದರೆ, ಕೆಲ ಕಾಮಗಾರಿಗಳನ್ನು ನಡೆಸದೇ ಶೇ. 100 ರಷ್ಟುಕಮಿಷನ್‌ ಸಹ ಹೊಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

I was Chief Minister twice but not by majority says HDK at uttara kannada rav
Author
First Published Apr 13, 2023, 12:21 PM IST | Last Updated Apr 13, 2023, 12:21 PM IST

ಶಿರಸಿ (ಏ.13) : ಹಿಂದಿನ ಬಿಜೆಪಿ ಸರ್ಕಾರದ ಮೇಲೆ 40 ಪರ್ಸೆಂಟ್‌ ಕಮಿಷನ್‌ ಸರ್ಕಾರ ಎಂಬ ಆರೋಪವಿತ್ತು. ಆದರೆ, ಕೆಲ ಕಾಮಗಾರಿಗಳನ್ನು ನಡೆಸದೇ ಶೇ. 100 ರಷ್ಟುಕಮಿಷನ್‌ ಸಹ ಹೊಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ನಗರದಲ್ಲಿ ಬುಧವಾರ ರೋಡ್‌ ಶೋ(JDS Kumaraswamy road show) ನಡೆಸಿ ಪಕ್ಷದ ಪರ ಮತಯಾಚಿಸಿ ಬಳಿಕ ವಿದ್ಯಾಧಿರಾಜ ಕಲಾ ಕ್ಷೇತ್ರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟವರು ಅಭಿವೃದ್ಧಿಗೆ ಎಷ್ಟರ ಮಟ್ಟಿಗೆ ಸ್ಪಂದಿಸಿದ್ದಾರೆ ಎಂಬುದನ್ನು ಅವಲೋಕಿಸಬೇಕು. ಹಿಂದು- ಮುಸಲ್ಮಾನರು ಉತ್ತಮ ಬಾಂಧವ್ಯದಿಂದ ಬದುಕುತ್ತಿದ್ದಾರೆ. ಆದರೆ, ಅಧಿಕಾರಕ್ಕಾಗಿ ಅಮಾಯಕರ ನಡುವೆ ಹೊಡೆದಾಟ ಹಚ್ಚಲಾಗುತ್ತಿದೆ. ಪ್ರಾಮಾಣಿಕವಾಗಿ ಅಭಿವೃದ್ಧಿಯೆಡೆ ಗಮನ ಹರಿಸಿದ್ದರೆ ಬೆಂಗಳೂರಿಗೆ ಪರಾರ‍ಯಯವಾಗಿ ಕರಾವಳಿ ಬೆಳೆಸಬಹುದು. ಆದರೆ, ಧರ್ಮ ಮುಂದಿಟ್ಟು ಹಲವರು ರಾಜಕಾರಣ ಮಾಡುತ್ತಾರೆ. ಧರ್ಮ ಉಳಿಸಲು ರಕ್ತದ ಓಕುಳಿಯಿಂದ ಸಾಧ್ಯವಾಗುವುದಿಲ್ಲ ಎಂದರು.

ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌: ಎಚ್‌ಡಿಕೆ

ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಉತ್ತರ ಕನ್ನಡಕ್ಕೆ ಕೊಟ್ಟಕೊಡುಗೆ ಏನು? ಹಳ್ಳಿ ಜನ ಅರಣ್ಯ ಕಾಯ್ದೆ ಹೆಸರಿನಲ್ಲಿ ಆತಂಕದಲ್ಲೇ ಬದುಕುತ್ತಿದ್ದಾರೆ. ಅವರ ಬದುಕಿಗೆ ನ್ಯಾಯ ಕೊಡದವರು ಯಾವ ನೆಲೆಯಲ್ಲಿ ಜೆಡಿಎಸ್‌ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡುತ್ತಾರೆ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಜಿಲ್ಲಾ ಕೇಂದ್ರ ಗೋವಾ ಗಡಿಯಲ್ಲಿದೆ. ಜಿಲ್ಲಾ ಕೇಂದ್ರಕ್ಕೆ ಬರಲು ಭಟ್ಕಳ, ಶಿರಸಿ ಸಿದ್ದಾಪುರದವರೆಗೆ ತಾಂತ್ರಿಕ ಸಮಸ್ಯೆ ಆಗುತ್ತಿದೆ ಎಂಬ ಕಾರಣಕ್ಕೆ ಶಿರಸಿ ಪ್ರತ್ಯೇಕ ಜಿಲ್ಲೆಯ ಕೂಗು ಕೇಳಿಬಂದಿದ್ದು, ಅವರ ಬೇಡಿಕೆ ನ್ಯಾಯಯುತವಾಗಿದೆ. ಜಿಲ್ಲೆಯ ಜನತೆ ಎದುರಿಸುತ್ತಿರುವ ಇ ಸೊತ್ತಿನ ಸಮಸ್ಯೆ ಗಮನದಲ್ಲಿದೆ. ಅಡಕೆ ಬೆಳೆಗಾರರ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಅರಿತಿದ್ದೇನೆ. ಹಿಂದಿನ ಬಾರಿ ಬಂದಾಗ ಇಲ್ಲಿಯ ಸಮಸ್ಯೆಗಳನ್ನು ಬೆಂಗಳೂರಿಗೆ ತೆರಳಿದ ಬಳಿಕ ಚರ್ಚೆ ನಡೆಸಿ ಅಧಿಕಾರಿಗಳಿಗೆ ಪರಿಹಾರಕ್ಕೆ ಸೂಚನೆ ನೀಡಿದ್ದೆ. ಆದರೆ, ಅಷ್ಟರಲ್ಲಿ ಸರ್ಕಾರ ಉರುಳಿದ್ದರಿಂದ ಮುಂದೆ ಬಂದವರು ಗಮನ ಹರಿಸಲಿಲ್ಲ ಎಂದರು.

ಅರಣ್ಯ ಕಾಯ್ದೆ, ಕಿರುಕುಳದ ಬಗ್ಗೆ ಬಿಜೆಪಿ ಕಾಂಗ್ರೆಸ್‌ ಗೆ ಚಿಂತೆ ಇಲ್ಲ. ನಾನು ಎರಡು ಬಾರಿ ಮುಖ್ಯಮಂತ್ರಿ ಆದರೂ ಪಕ್ಷ ಸ್ವತಂತ್ರವಾಗಿ ಅಧಿಕಾರದಲ್ಲಿರಲಿಲ್ಲ. ಹೀಗಾಗಿ ಹಲವು ಪ್ರಮುಖ ನಿರ್ಧಾರ ಕೈಗೊಳ್ಳಲಾಗಲಿಲ್ಲ. ರೈತರ ಬದುಕಿನ ಸಮಸ್ಯೆ, ಮನೆ ಇರದ ಸಮಸ್ಯೆ ಈ ಭಾಗದಲ್ಲಿ ಇಂದಿಗೂ ಹಾಗೆಯೇ ಇದೆ.

ಬಡಮಕ್ಕಳಿಗೆ ಯೋಗ್ಯ ಶಿಕ್ಷಣ ಅತ್ಯಗತ್ಯ. ಖಾಸಗಿ ಶಾಲೆಯಲ್ಲಿ ಡೊನೇಶನ್‌ ಜಾಸ್ತಿ. ಸರ್ಕಾರದ ಮೂಲಕವೇ ಉತ್ತಮ ಶಾಲೆ ನಿರ್ಮಾಣ ಮಾಡುತ್ತೇವೆ. ಖಾಸಗಿ ಶಾಲೆಗಿಂತ ಉತ್ತಮ ಶಿಕ್ಷಣ ಒಗಗಿಸಬೇಕು ಎಂಬುದು ನಮ್ಮ ಗುರಿ. ರೈತರು ಸಾಲಗಾರರಾಗದಂತೆ ಗೊಬ್ಬರ, ಬಿತ್ತನೆ ಬೀಜಕ್ಕೆ ಪ್ರತಿ ಎಕರೆಗೆ .10 ಸಾವಿರ ನೀಡಲು ನಿರ್ಧರಿಸಿದ್ದೇವೆ. ಕೂಲಿಗಳಿಗೆ .10 ಸಾವಿರ, ಹಿರಿಯ ನಾಗರಿಕರಿಗೆ .5 ಸಾವಿರ, ವಿಧವೆಯರಿಗೆ .2500, ಮನೆ ರಹಿತರಿಗೆ ಮನೆ ನೀಡಿ ಸಮಸ್ಯೆ ಬಗೆಹರಿಸಲಿದ್ದೇವೆ ಎಂದರು.

ಅಭ್ಯರ್ಥಿ ಉಪೇಂದ್ರ ಪೈ ಮಾತನಾಡಿ, ಆಟೋ ಚಾಲಕನಾಗಿ ವೃತ್ತಿ ಆರಂಭಿಸಿದವನು ನಾನು. ವೈಯಕ್ತಿಕವಾಗಿ ಏನೋ ಮಾಡುವ ಸಲುವಾಗಿ ನಾನು ರಾಜಕೀಯಕ್ಕೆ ಬಂದಿಲ್ಲ. 9 ವರ್ಷಗಳಿಂದ ಶಿರಸಿ ಜಿಲ್ಲೆಗೆ ಹೋರಾಟ ಮಾಡಿದ್ದೇನೆ. ಕುಮಾರಸ್ವಾಮಿ ಅವರು ಇನ್ನು ಆರು ತಿಂಗಳಿದ್ದಿದ್ದರೆ ಶಿರಸಿ ಜಿಲ್ಲೆ ಆಗಿರುತ್ತಿತ್ತು. ಇ ಸೊತ್ತು ನಿಯಮಗಳಿಂದಾಗಿ ತೊಡಕಾಗಿದೆ. ಶಿರಸಿ ನಗರದಲ್ಲಿ 9 ಸಾವಿರ ಜನ ಸ್ವಂತ ಮನೆ ನಿರ್ಮಿಸಲು ಸಾಧ್ಯವಾಗದಂತಾಗಿದೆ. ಇದೆಲ್ಲದ ಪರಿಹಾರಕ್ಕೆ ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕಿದೆ ಎಂದರು.

 

ಎಚ್ಡಿಕೆ ಸಮ್ಮುಖದಲ್ಲಿ ಹಲವರು ಜೆಡಿಎಸ್‌ ಸೇರ್ಪಡೆ

ಜಿಲ್ಲಾ ಉಸ್ತುವಾರಿ ಎಂ.ಬಿ. ಮಾಧವ, ನಾಗೇಶ ನಾಯ್ಕ ಕಾಗಾಲ, ಸತೀಶ ಹೆಗಡೆ ಬೈಲಳ್ಳಿ, ಭೀಮಣ್ಣ ತಳವಾರ, ಶಶಾಂಕ ಹೊನ್ನಾವರ, ಮುಜೀಬ, ಹರೀಶ ಗೌಡ ಇತರರಿದ್ದರು. ಇದಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ತೆರೆದ ಜೀಪಿನ ಮೆರವಣಿಗೆಯಲ್ಲಿ ಕುಮಾರಸ್ವಾಮಿ ಪಾಲ್ಗೊಂಡರು.

Latest Videos
Follow Us:
Download App:
  • android
  • ios