ಲಿಂಗಾಯತರಲ್ಲಿ ನಾನು ತುಂಬಾ ಹಿರಿಯನಾಗಿದ್ದು, ನಾನು ಸಿಎಂ ಸ್ಥಾನದ ಆಕಾಂಕ್ಷಿ: ಬಸವರಾಜ್ ರಾಯರೆಡ್ಡಿ

ರಾಜ್ಯದಲ್ಲಿ ಸಿಎಂ ಆಗಬೇಕು ಅಂತ ಕೆಲವರು ಆಸೆ ಪಡ್ತಿದ್ದಾರೆ. ಸಿಎಂ ಹುದ್ದೆ ಆಸೆ ಪಡೋದು ತಪ್ಪಲ್ಲಾ. ಆದ್ರೆ ಸಿಎಂ ಹುದ್ದೆ ಖಾಲಿಯಿಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ತಿಳಿಸಿದ್ದಾರೆ. 

I am very senior among Lingayats I am a CM aspirant Says Basavaraj Rayareddy gvd

ಕೊಪ್ಪಳ (ಸೆ.09): ರಾಜ್ಯದಲ್ಲಿ ಸಿಎಂ ಆಗಬೇಕು ಅಂತ ಕೆಲವರು ಆಸೆ ಪಡ್ತಿದ್ದಾರೆ. ಸಿಎಂ ಹುದ್ದೆ ಆಸೆ ಪಡೋದು ತಪ್ಪಲ್ಲಾ. ಆದ್ರೆ ಸಿಎಂ ಹುದ್ದೆ ಖಾಲಿಯಿಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ತಿಳಿಸಿದ್ದಾರೆ. ಸಿದ್ದರಾಮಯ್ಯ ಮುಂದಿನ ಮೂರು ವರ್ಷ ಸಿಎಂ ಆಗಿ ಇರಬೇಕು. ಅವರು ಕೆಳಗಿಳಿತಾರೆ ಅಂತ ಯಾರು ಹೇಳ್ತಾರೆ. ಕೋರ್ಟ್ ತನಿಖೆಗೆ ಗೆ ಆದೇಶ ನೀಡಿದ್ರು ಅವರು ರಾಜೀನಾಮೆ ನೀಡಬಾರದು. ಯಾರು ಬೇಕಾದ್ರು ರಾಜ್ಯದ ಸಿಎಂ ಆಗಬಹುದು ಎಂದರು.

ನಾನು ಸಿಎಂ ಸ್ಥಾನದ ಆಕಾಂಕ್ಷಿ ಇದ್ದೇನೆ. ನಾನು ಯಾಕೆ ಆಗಬಾರದು?. ನಾನು‌ ಲಿಂಗಾಯತ ಸಮುದಾಯಕ್ಕೆ ಸೇರಿದ್ದೇನೆ. ಲಿಂಗಾಯತರಲ್ಲಿ ನಾನು ತುಂಬಾ ಹಿರಿಯ ಇದ್ದೇನೆ. ಕಲ್ಯಾಣ ಕರ್ನಾಟಕ ದಲ್ಲಿ ಅತಿ ಹೆಚ್ಚು ಬಾರಿ ಆಯ್ಕೆಯಾಗಿದ್ದೇನೆ. ಲಿಂಗಾಯತ ಸಮುದಾಯಕ್ಕೆ ಕೊಡೋದಾದ್ರೆ ನನಗೆ ಕೊಡಲಿ. ಆಸೆ ಪಡೋದರಲ್ಲಿ ಯಾವುದೇ ತಪ್ಪಿಲ್ಲಾ. ಯಾರು ಸಿಎಂ ಆಗಬೇಕು ಅನ್ನೋದನ್ನು ವರೀಷ್ಟರು, ಶಾಸಕರು ಮಾಡಬೇಕು. ಜೊತೆಗೆ ಸಿದ್ದರಾಮಯ್ಯ ನವರು ಆಶಿರ್ವಾದ ಮಾಡಬೇಕು ಹೇಳಿದರು.

ಬಿಜೆಪಿ-ಕಾಂಗ್ರೆಸ್‌ ಹೊಂದಾಣಿಕೆಯಿಂದ ಅನ್ಯಾಯ: ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ

ಸಿದ್ದರಾಮಯ್ಯನವರು ಸೂಚಿಸಿದ ವ್ಯಕ್ತಿ ಮುಂದೆ ಸಿಎಂ ಆಗುತ್ತಾರೆ ಅನ್ನೋದು ನನ್ನ ಅಭಿಪ್ರಾಯ. ಯಾರಿಗೆ ಯಾವಾಗ ಲಾಠರಿ ಹೊಡೆಯುತ್ತೆ ಗೊತ್ತಿಲ್ಲಾ. ಆದ್ರೆ ಸಿದ್ದರಾಮಯ್ಯ ನವರು ಮುಂದುವರಿಯುತ್ತಾರೆ. ಒಕ್ಕಲಿಗರರಲ್ಲಿ ಅನೇಕರು ಇದ್ದಾರೆ, ಡಿ.ಕೆ.ಶಿವಕುಮಾರ್ ಕೂಡಾ ಪ್ರಮುಖ ಎಂದು ಬಸವರಾಜ್ ರಾಯರೆಡ್ಡಿ ತಿಳಿಸಿದರು.

Latest Videos
Follow Us:
Download App:
  • android
  • ios