Asianet Suvarna News Asianet Suvarna News

ನೋಟಿಸ್‌ ಬಂದಿಲ್ಲ. ಆದರೆ ನಾನಿನ್ನು ಮಾತಾಡಲ್ಲ: ಯತ್ನಾಳ್‌

ಯಡಿಯೂರಪ್ಪ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರ ಬಗ್ಗೆ ನನಗೆ ಯಾವುದೇ ಪ್ರಶ್ನೆಗಳನ್ನು ಕೇಳಬೇಡಿ. ಯಡಿಯೂರಪ್ಪನವರು ಹಿರಿಯರು, ಅವರಿಗೆ ಬೈಯುವುದಾಗಲಿ, ಮಾತನಾಡುವುದಾಗಲಿ ಮಾಡಬೇಡಿ ಎಂದು ಪಕ್ಷದ ವರಿಷ್ಠರು ಹೇಳಿದ್ದಾರೆ. ಅದಕ್ಕೆ ನಾನು ಒಪ್ಪಿದ್ದೇನೆ ಎಂದ ಯತ್ನಾಳ್‌

I am Not Talk about Former CM BS Yediyurappa says Basanagouda Patil Yatnal grg
Author
First Published Jan 27, 2023, 6:15 AM IST

ವಿಜಯಪುರ(ಜ.27):  ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ವಿರುದ್ಧ ಪದೇಪದೇ ಬಹಿರಂಗವಾಗಿಯೇ ಹೇಳಿಕೆ ನೀಡಿ ಪಕ್ಷದ ವರಿಷ್ಠರ ಅಸಮಾಧಾನಕ್ಕೆ ಕಾರಣವಾಗಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಬಾಯಿಗೆ ಬೀಗ ಬಿದ್ದಿದೆ. ಯಡಿಯೂರಪ್ಪ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ಯತ್ನಾಳ್‌ ಅವರಿಗೆ ವರಿಷ್ಠರಿಂದ ಸ್ಪಷ್ಟ ಸಂದೇಶ ರವಾನೆಯಾಗಿದೆ. ಈ ವಿಚಾರವನ್ನು ಸ್ವತಃ ಖಚಿತಪಡಿಸಿರುವ ಯತ್ನಾಳ್‌, ನನಗೆ ಕೇಂದ್ರದಿಂದ ಯಾವುದೇ ನೋಟಿಸ್‌ ಕೊಟ್ಟಿಲ್ಲ. ಆದರೆ ನಾನು ಯಡಿಯೂರಪ್ಪ ವಿರುದ್ಧ ಮಾತನಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರ ಬಗ್ಗೆ ನನಗೆ ಯಾವುದೇ ಪ್ರಶ್ನೆಗಳನ್ನು ಕೇಳಬೇಡಿ. ಯಡಿಯೂರಪ್ಪನವರು ಹಿರಿಯರು, ಅವರಿಗೆ ಬೈಯುವುದಾಗಲಿ, ಮಾತನಾಡುವುದಾಗಲಿ ಮಾಡಬೇಡಿ ಎಂದು ಪಕ್ಷದ ವರಿಷ್ಠರು ಹೇಳಿದ್ದಾರೆ. ಅದಕ್ಕೆ ನಾನು ಒಪ್ಪಿದ್ದೇನೆ ಎಂದರು.

ಯತ್ನಾಳ್‌ಗೆ ಬಿಜೆಪಿಯ ಶಿಸ್ತುಸಮಿತಿ ಬುಲಾವ್‌, ವಿವರಣೆ ಪಡೆದು ಕ್ರಮ: ನಳಿನ್‌ ಕಟೀಲ್‌

ಹೈಕಮಾಂಡ್‌ ಹೇಳಿದ ಮೇಲೆ ಯಡಿಯೂರಪ್ಪನವರ ಬಗ್ಗೆ ಸಾಫ್ಟ್‌ ಆಗಬೇಕು. ಎಲ್ಲದಕ್ಕೂ ಗುರ್‌. ಎನ್ನುವುದಕ್ಕೆ ಬರಲ್ಲ. ಇನ್ನು ಮುಂದೆ ಯಡಿಯೂರಪ್ಪನವರ ಜೊತೆಗೆ ರಾಜಕೀಯ ಸಂಘರ್ಷಕ್ಕೆ ವಿರಾಮ ಹೇಳುತ್ತೇನೆ. ಕಾಂಪ್ರಮೈಸ್‌ ಏನೂ ಇಲ್ಲ, ರಾಜಕೀಯ ಸಂಘರ್ಷಕ್ಕೆ ಪೂರ್ಣ ವಿರಾಮ ಹಾಕಿದ್ದೇನೆ ಅಷ್ಟೆಎಂದರು.

ಇದೇ ವೇಳೆ ಪಕ್ಷದ ಮುಖಂಡರ ವಿರುದ್ಧ ಬಹಿರಂಗ ಹೇಳಿಕೆ ನೀಡಿದ ವಿಚಾರವಾಗಿ ಕೇಂದ್ರದಿಂದ ನೋಟಿಸ್‌ ನೀಡಲಾಗಿದೆ ಎಂಬ ಸುದ್ದಿಯನ್ನು ಯತ್ನಾಳ್‌ ತಳ್ಳಿಹಾಕಿದ್ದಾರೆ. ನನಗೆ ಯಾವುದೇ ನೋಟಿಸ್‌ ಬಂದಿಲ್ಲ. ನನ್ನ ಬಗ್ಗೆ ಊಹಾಪೋಹಗಳು ಯಾಕೆ ಏಳುತ್ತವೆ ಎಂಬುದೇ ಗೊತ್ತಾಗುತ್ತಿಲ್ಲ ಎಂದರು.

ಗುರ್‌ ಎನ್ನಲಾಗದು

ಹೈಕಮಾಂಡ್‌ ಹೇಳಿದ ಮೇಲೆ ಬಿಎಸ್‌ವೈ ಬಗ್ಗೆ ಸಾಫ್ಟ್‌ ಆಗಬೇಕು. ಎಲ್ಲದಕ್ಕೂ ಗುರ್‌ ಎನ್ನುವುದಕ್ಕೆ ಬರಲ್ಲ. ಇನ್ನು ಮುಂದೆ ಅವರ ಜೊತೆ ರಾಜಕೀಯ ಸಂಘರ್ಷಕ್ಕೆ ವಿರಾಮ ಹೇಳುತ್ತೇನೆ. ಕಾಂಪ್ರಮೈಸ್‌ ಏನೂ ಇಲ್ಲ ಅಂತ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ತಿಳಿಸಿದ್ದಾರೆ. 

Follow Us:
Download App:
  • android
  • ios