ನಾನು ಸೈಲೆಂಟ್‌ ಆಗಿಲ್ಲ, ಹೇಳಿಕೆ ಕೊಡುವುದನ್ನೂ ಕಡಿಮೆ ಮಾಡಿಲ್ಲ. ನಮಗೆ ಶತ್ರುಗಳಿದ್ದಷ್ಟೂ ಒಳ್ಳೆಯದೇ ಎಂದು ಕಾಂಗ್ರೆಸ್‌ ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು (ಡಿ.21): ನಾನು ಸೈಲೆಂಟ್‌ ಆಗಿಲ್ಲ, ಹೇಳಿಕೆ ಕೊಡುವುದನ್ನೂ ಕಡಿಮೆ ಮಾಡಿಲ್ಲ. ನಮಗೆ ಶತ್ರುಗಳಿದ್ದಷ್ಟೂ ಒಳ್ಳೆಯದೇ ಎಂದು ಕಾಂಗ್ರೆಸ್‌ ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹೇಳಿಕೆ ಕೊಡೋದನ್ನು ಬಿಟ್ಟಿಲ್ಲ. 

ಶತ್ರುಗಳಿದ್ದರೆ ನಮಗೂ ಒಳ್ಳೆಯದೇ ಎನ್ನುವ ಮೂಲಕ ಮತ್ತೆ ಸ್ವಪಕ್ಷೀಯರ ವಿರುದ್ಧ ಅಸಮಾಧಾನ ತೋಡಿಕೊಂಡರು. ಜಾತಿಗಣತಿ ಪರ ಅಹಿಂದ ಸಮಾವೇಶಕ್ಕೆ ಹೋಗುತ್ತೀರಾ ಎಂಬ ಪ್ರಶ್ನೆಗೆ, ಅಹಿಂದ ಸಮಾವೇಶಕ್ಕೆ ನಾನು ಹೋಗುವುದಿಲ್ಲ. ಗುರು ನಾರಾಯಣ ಪೀಠದಿಂದ ಜನವರಿಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಸಮಾವೇಶ ಇದೆ. ಅದಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ ಎಂದು ಹೇಳಿದ್ದೇನೆ ಎಂದರು.

ಟ್ರ್ಯಾಪ್ ಮಾಡಲು ಪ್ರತಾಪ್ ಸಿಂಹ ಹುಡುಗನಲ್ಲ: ಡಿ.ಕೆ.ಶಿವಕುಮಾರ್‌

ಸಿದ್ದರಾಮಯ್ಯ ಪರಿಚಯ ನನಗೆ ಅಷ್ಟಾಗಿ ಇಲ್ಲ: ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಿಚಯ ಅಷ್ಟಾಗಿ ಇಲ್ಲ. ಹಾಗಂತ, ಅವರ ಮೇಲೆ ವೈಮನಸ್ಸೂ ಇಲ್ಲ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ ಬೇಸರದಿಂದ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ವೈಯಕ್ತಿಕವಾಗಿ ನನ್ನ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಸಂಬಂಧ ಅಷ್ಟೇನೂ ಚೆನ್ನಾಗಿ ಇರಲಿಲ್ಲ. ಪಕ್ಷದ ಚೌಕಟ್ಟಿನಲ್ಲಿ ಆಗಾಗ ಮಾತನಾಡಿದ್ದೇವೆ ಅಷ್ಟೇ ಎಂದರು. 

ಇಲ್ಲಿಯವರೆಗೆ ಕಾಂಗ್ರೆಸ್ ಸರ್ಕಾರ ಹನಿಮೂನ್ ಪಿರಿಯಡ್​ನಲ್ಲಿತ್ತು. ಮುಂದೆ ನೈಜವಾಗಿ ಕೆಲಸ ಮಾಡಲು ಹೋದಾಗ ಎಲ್ಲವೂ ಗೊತ್ತಾಗುತ್ತದೆ. ಅಧಿಕಾರಕ್ಕೆ ಬಂದವರು ಜನತೆಯ ಆಶಯಗಳನ್ನು ಈಡೇರಿಸಬೇಕು. ಈಡೇರಿಸಲು ಆಗದಿದ್ದಾಗ ಪಕ್ಷದ ಚೌಕಟ್ಟಿನಲ್ಲಿ ನಾನು ಪ್ರಶ್ನೆ ಮಾಡಿದ್ದೇನೆ. ಮಾಡುತ್ತಾ ಇರುತ್ತೇನೆ ಎಂದರು. ಬೆಂಗಳೂರಿನಲ್ಲಿ ಆರ್ಯ-ಈಡಿಗ ಸಮಾವೇಶ ಆಯೋಜಿಸಲಾಗಿತ್ತು. ಮದುವೆಯಲ್ಲಿ ಪಾಲ್ಗೊಳ್ಳಲು ನಾನು ಹುಬ್ಬಳ್ಳಿಗೆ ಬಂದಿದ್ದೇನೆ. ಸಮಾವೇಶ ನಡೆಸುವುದು ತಪ್ಪಲ್ಲ. 

ಕಾಂಗ್ರೆಸ್‌ ಪಕ್ಷದಿಂದ ದೇಶದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ: ಕೆ.ಎಸ್‌.ಈಶ್ವರಪ್ಪ

ಸರ್ಕಾರದ ಗಮನ ಸೆಳೆಯಲು ಸಮಾವೇಶ ನಡೆಸಲಾಗುತ್ತದೆ. ಆದರೆ, ರಾಜಕೀಯವಾಗಿ ದುರುಪಯೋಗ ಮಾಡಿಕೊಳ್ಳಬಾರದು. ಈಡಿಗ ಸಮಾಜದಲ್ಲಿ ಒಡಕು ಉಂಟು ಮಾಡಲಾಗಿದೆ. ಅವರು ಯಾರು ಎಂಬುದು ನನಗೆ ಗೊತ್ತಿದೆ. ಸಮಾಜದ ಪ್ರಣಾವಾನಂದ ಶ್ರೀಗಳನ್ನು ಬಿಟ್ಟು ಏಕೆ ಸಮಾವೇಶ ಮಾಡಲಾಗಿದೆ?. ಒಗ್ಗಟ್ಟು ಮೂಡಿಸಬೇಕಾದರೆ ಸಮಾಜದ ಸ್ವಾಮೀಜಿಗಳನ್ನು ಸೇರಿ ಸಮಾವೇಶ ಮಾಡಬೇಕಿತ್ತಲ್ಲ ಎಂದು ಹರಿಪ್ರಸಾದ ಪ್ರಶ್ನಿಸಿದರು.