ನಾನು ಉಡಾಫೆ ರಾಜಕಾರಣಿಯಲ್ಲ: ಶಾಸಕ ಮಂಜುನಾಥ್
ನಾನು ಉಡಾಫೆ ರಾಜಕಾರಣಿಯಲ್ಲ. ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದೇ ನನ್ನ ಗುರಿಯಾಗಿದೆ ಎಂದು ಮಾಗಡಿ ಶಾಸಕ ಎ.ಮಂಜುನಾಥ್ ಹೇಳಿದರು. ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಡಾ. ವಿಷ್ಣುವರ್ಧನ್ ಅಭಿಮಾನಿ ಬಳಗದಿಂದ 13ನೇ ವರ್ಷದ ವಿಷ್ಣುವರ್ಧನ್ ಪುಣ್ಯಸ್ಮರಣೆ ಅಂಗವಾಗಿ ರಸಮಂಜರಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಗಡಿ (ಜ.15): ನಾನು ಉಡಾಫೆ ರಾಜಕಾರಣಿಯಲ್ಲ. ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದೇ ನನ್ನ ಗುರಿಯಾಗಿದೆ ಎಂದು ಮಾಗಡಿ ಶಾಸಕ ಎ.ಮಂಜುನಾಥ್ ಹೇಳಿದರು. ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಡಾ. ವಿಷ್ಣುವರ್ಧನ್ ಅಭಿಮಾನಿ ಬಳಗದಿಂದ 13ನೇ ವರ್ಷದ ವಿಷ್ಣುವರ್ಧನ್ ಪುಣ್ಯಸ್ಮರಣೆ ಅಂಗವಾಗಿ ರಸಮಂಜರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾವೇರಿ ನೀರು ಮಾಗಡಿಗೆ ಎಲ್ಲಿಂದ ಬರುತ್ತದೆ ಎಂದು ಪ್ರಶ್ನೆ ಮಾಡಿದ್ದ ಮಾಜಿ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಜನರೇ ನೀರು ಬಿಡುತ್ತಾರೆ ಎಂದು ವ್ಯಂಗ್ಯವಾಡಿದರು.
ಸತ್ತೇಗಾಲದಿಂದ ದೇವೇಗೌಡ ಬ್ಯಾರೇರ್ಜ್‌ಗೆ ನೀರು ತರಿಸಿ ಕಣ್ವ ಮೂಲಕ ವೈ.ಜಿ.ಗುಡ್ಡ ಜಲಾಶಯ ಮತ್ತು ಮಂಚನಬೆಲೆ ಜಲಾಶಯಕ್ಕೆ ಕಾವೇರಿ ನೀರನ್ನು ಹರಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಹೇಮಾವತಿ ಯೋಜನೆಯನ್ನು ಪೂರ್ಣಗೊಳಿಸಿ ಕೆರೆ ತುಂಬಿಸುವ ಕೆಲಸಕ್ಕೆ ಚಾಲನೆ ಕೊಡುತ್ತೇನೆ. ಮಾಜಿ ಶಾಸಕರು ಕೋಟೆ ಕಾರ್ಯಕ್ರಮದಲ್ಲಿ ಕ್ಷೇತ್ರಕ್ಕೆ ನೀರು ಬಿಡದಿದ್ದರೆ ನಿಮಗೆ ನೀರು ಬಿಡುತ್ತಾರೆ ಎಂದು ಹೇಳಿಕೆ ಕೊಟ್ಟಿದ್ದರು. ಈಗ ಕ್ಷೇತ್ರಕ್ಕೆ ನೀರು ಹರಿಸಿದ್ದೇವೆ ಇದು ನಮ್ಮ ಬದ್ಧತೆ. 20 ವರ್ಷಗಳಿಂದ ನೀವೇಕೆ ಈ ರೀತಿ ಮಾಡಿರಲಿಲ್ಲ ಎಂದು ಮಾಜಿ ಶಾಸಕರ ಬಾಲಕೃಷ್ಣರನ್ನು ಪ್ರಶ್ನಿಸಿದರು.
ಕೊರೋನಾ ಕಾಲದಲ್ಲಿ ಸರ್ಕಾರಿ ನೌಕರರ ಸೇವೆ ಶ್ಲಾಘನೀಯ: ಡಿ.ಕೆ.ಶಿವಕುಮಾರ್
ಪದೇಪದೆ ಮಾಜಿ ಶಾಸಕರು ಅಭಿವೃದ್ಧಿ ವಿಚಾರವಾಗಿ ಚರ್ಚೆಗೆ ಬನ್ನಿ ಎಂದು ಹೇಳುತ್ತಾರೆ ನಾನು ಸವಾಲನ್ನು ಸ್ವೀಕರಿಸಿದ್ದೇನೆ. ನೀವು ಮೊದಲ ಬಾರಿಗೆ ಬಿಜೆಪಿಯಲ್ಲಿ ಶಾಸಕರಾಗಿದ್ದಾಗ 1994ರಿಂದ 99ರವರೆಗೆ ಕ್ಷೇತ್ರದಲ್ಲಿ ಎಷ್ಟುಅಭಿವೃದ್ಧಿ ಮಾಡಿದ್ದೀರಾ ನಾನು ಮೊದಲ ಬಾರಿ ಶಾಸಕನಾಗಿ 2018ರಿಂದ 2023ರವರೆಗೆ ಕ್ಷೇತ್ರದಲ್ಲಿ ಎಷ್ಟುಅಭಿವೃದ್ಧಿ ಮಾಡಿದ್ದೇನೆ ಎಂಬುದರ ಬಗ್ಗೆ ಚರ್ಚೆಗೆ ಬರಲಿ ನಾನು ಬರುತ್ತೇನೆ ಎಂದು ಮಾಜಿ ಶಾಸಕರಿಗೆ ಎ.ಮಂಜುನಾಥ್ ಸವಾಲು ಹಾಕಿದರು.
ಸಂಸದೆ ಸುಮಲತಾ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ: ಸಿ.ಪಿ.ಯೋಗೇಶ್ವರ್
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪೂಜಾರಿ ಪಾಳ್ಯ ಕೃಷ್ಣಮೂರ್ತಿ ಮಾತನಾಡಿ, 20 ವರ್ಷಗಳದಿಂದ ಕ್ಷೇತ್ರ ಯಾವ ರೀತಿ ಇತ್ತು. ಈಗ ಎ.ಮಂಜುನಾಥ್ ಆಯ್ಕೆಯಾಗಿ ಅಧಿಕಾರ ನಡೆಸಿದ ನಂತರ ಕ್ಷೇತ್ರ ಹೇಗೆ ಬದಲಾವಣೆಯಾಗಿದೆ ಎಂಬುದನ್ನು ಜನತೆ ಅರಿಯಬೇಕು. ಕ್ಷೇತ್ರ ಮತ್ತಷ್ಟುಅಭಿವೃದ್ಧಿಯಾಗುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅವರನ್ನು ಆಯ್ಕೆ ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಕಾರ‍್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷ ವಿಜಯ ರೂಪೇಶ್, ಸದಸ್ಯರಾದ ಅನಿಲ ಕುಮಾರ್, ಅಶ್ವತ್‌್ಥ, ಎಂ.ಎನ್.ಮಂಜು, ಕೆ.ವಿ.ಬಾಲು, ಮಹೇಶ್, ಶೈಲಜಾ, ವಿಜಯ… ಕುಮಾರ್, ಕಿರಣ್, ವಿಜಯಸಿಂಹ, ಹನುಮಂತರಾಜು, ಹೊಸಹಳ್ಳಿ ರಂಗಣ್ಣಿ, ಚಿಕ್ಕಣ್ಣ, ಮಹಾಂತೇಶ್ ಇತರರಿದ್ದರು.