ಉತ್ತರ ಕರ್ನಾಟಕ ಅಲ್ಲ, ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗುವ ಯೋಗ್ಯತೆ ನನಗಿದೆ; ಉಮೇಶ್ ಕತ್ತಿ

  • 40% ಭ್ರಷ್ಟಾಚಾರ ಆರೋಪ; ಸಿದ್ದರಾಮಯ್ಯ ವಿರುದ್ಧ ಉಮೇಶ್ ಕತ್ತಿ ವಾಗ್ದಾಳಿ
  • ಭ್ರಷ್ಟಾಚಾರ ನಡೆದಿದ್ರೆ ರಾಜ್ಯದ ಜನ ವಿರೋಧ ಪಕ್ಷದ ನಾಯಕ, ಸಿಎಂ ಅವರನ್ನ ಅಡ್ಡಾಡೋದಕ್ಕೂ ಬಿಡ್ತಿರಲಿಲ್ಲ.
  • ಸುಳ್ಳು ಹೇಳಿಕೆ ಕೊಡೋದನ್ನ ಸಿದ್ದರಾಮಯ್ಯ ಬಂದ್ ಮಾಡ್ಬೇಕು
  • ಭ್ರಷ್ಟಾಚಾರ ನಡೆದ್ರೆ ದೂರು ನೀಡಲಿ. ನಡುಬೀದಿಯಲ್ಲಿ ಹೇಳಿಕೆ ಕೊಡೋದು ನಿಲ್ಲಿಸಲಿ

 

I am fit to be the chief minister of whole Karnataka not North Karnataka says umesh Katthi at gadag

ಗದಗ (ಆ.26) : ಸುಳ್ಳು ಹೇಳಿಕೆ ಕೊಡೋದನ್ನ ಸಿದ್ದರಾಮಯ್ಯ ಬಂದ್ ಮಾಡ್ಬೇಕು, ಭ್ರಷ್ಟಾಚಾರ ನಡೆದಿದ್ರೆ ದೂರು ನೀಡಿ ಎಂದು ಸಚಿವ ಉಮೇಶ್ ಕತ್ತಿ(umesh Katti) ಸಿದ್ದರಾಮಯ್ಯ(Siddaramaiah) ವಿರುದ್ಧ ವಾಗ್ದಾಳಿ ನಡೆಸಿದರು. ತಾಲೂಕಿನ ಬಿಂಕದಕಟ್ಟಿ(Binkadakatte) ಉದ್ಯಾನ ಉದ್ಘಾಟನೆಗೂ ಮುನ್ನ ಸುದ್ದಿಗಾರರ ಜೊತೆ ಮಾತ್ನಾಡಿದ ಸಚಿವ ಉಮೇಶ್ ಕತ್ತಿ, ಭ್ರಷ್ಟಾಚಾರ(Currupt) ನಡೆದಿದ್ರೆ ಜನ ನಮ್ಮನ್ನ ಓಡಾಡೋದಕ್ಕೆ ಬಿಡುತ್ತಿರಲಿಲ್ಲ. ಮಾಜಿ ಮುಖ್ಯಮಂತ್ರಿಗಳಾಗಿ ನಿಮ್ಮ ಇತಿಮಿತಿಯಲ್ಲಿ ಏನೇನಾಗಿದೆ ಅಂತಾ ಚರ್ಚೆ ಮಾಡ್ಬೇಕು. ಆದ್ರೆ 40/50 ಪರ್ಸೆಂಟ್ ಅಂತಾ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಬಾರದು ಅಂತಾ ಚಾಟಿ ಬೀಸಿದ್ರು.

ಮಾರ್ಚ್ ಅಂತ್ಯಕ್ಕೆ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಿ

ಕೆಂಪಯ್ಯ ಯಾರು ಅನ್ನೋದು ಗೊತ್ತಿಲ್ಲ; ಕಂಪಯ್ಯ(Kempayya) ಯಾರು ಅನ್ನೊದು ಗೊತ್ತಿಲ್ಲ.. ಬಹಳ ಮಂದಿ ಅಸೋಸಿಯೇಷನ್ ಅಧ್ಯಕ್ಷರು ಇದ್ದಾರೆ. ಅದ್ರಲ್ಲಿ ಕೆಂಪಯ್ಯ ಒಬ್ಬರು. ಕೆಂಪಯ್ಯ ವಿರುದ್ಧ ಸಚಿವ ಉಮೇಶ್ ಕತ್ತಿ ಹರಿಹಾಯ್ದರು. ಕೆಂಪಯ್ಯ ಅವರನ್ನ ಸಿದ್ದರಾಮಯ್ಯ ಭೇಟಿಯಾಗಿದ್ದಾರೆ ಅನ್ನೋ ಮಾಹಿತಿ ಇದೆ. ಭ್ರಷ್ಟಾಚಾರ ನಡೆದಿದ್ರೆ ಕೆಂಪಯ್ಯ, ಸಿದ್ದರಾಮಯ್ಯ ಕಂಪ್ಲೆಂಟ್ ಕೊಡ್ಲಿ. ಲೋಕಾಯುಕ್ತ, ಸಿಬಿಐ, ಇಡಿ.. ಎಲ್ಲಿ ಕಂಪ್ಲೆಂಟ್ ಕೊಡ್ತೀರಾ ಕೊಡಿ. ಕುಮಾರಸ್ವಾಮಿಯಾದಿಯಾಗಿ ಯಾರೇ ಆರೋಪ ಮಾಡಿದ್ರೂ ಕಂಪ್ಲೆಂಟ್ ಕೊಡಬೇಕು. ನನ್ನ ವಿರುದ್ಧ ಆರೋಪ ಇದ್ರೂ ಕಂಪ್ಲೆಂಟ್ ಕೊಡಲಿ, ಆದರೆ ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ರೆ ನಿಜವಾಗುತ್ತಾ ಅಂತ ಪ್ರಶ್ನಿಸಿದರು.

ಉತ್ತರ ಕರ್ನಾಟಕ್ಕೆ ಅನ್ಯಾಯ ಆದ್ರೆ ರಾಜೀನಾಮೆಗೂ ಸಿದ್ಧ:

ಮಹದಾಯಿ, ಕೃಷ್ಣ, ಆಲಮಟ್ಟಿ ಅಭಿವೃದ್ಧಿಗೆ ದ್ರೋಹ ಮಾಡಿದ್ರೆ ರಾಜೀನಾಮೆಗೆ ರೆಡಿ ಅಂತಾ ಉತ್ತರ ಕರ್ನಾಟಕ ಪರವಾಗಿ ಮತ್ತೊಮ್ಮೆ ಉಮೇಶ್ ಕತ್ತಿ ಧ್ವನಿ ಎತ್ತಿದ್ರು. ಇದೇ ವೇಳೆ ಪ್ರತ್ಯೇಕ ಉತ್ತರ ಕರ್ನಾಟಕ ಧ್ವನಿ ಎತ್ತಬೇಕು. ನೀವೂ ಉತ್ತರ ಕರ್ನಟಕ ವಿಷಯವಾಗಿ ಸ್ಪಂದಿಸ್ಬೇಕು ಅಂತಾ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದ್ರು.  ಅಭಿವೃದ್ಧಿ ನಿಂತ್ರೆ ಹೋರಾಟ ಇದ್ದೇ ಇರುತ್ತೆ.. ಅಭಿವೃದ್ಧಿ ನಡೆದ್ರೆ ತೊಂದ್ರೆ ಇಲ್ಲ.

Belagavi ವಿಭಜನೆ ಕೂಗು, 3 ಜಿಲ್ಲೆಗಳ ರಚನೆಗೆ ಸರ್ಕಾರಕ್ಕೆ ಮನವಿ

ಉತ್ತರ ಕರ್ನಾಟಕ ಮುಖ್ಯಮಂತ್ರಿ ಆಗಲ್ಲ. ಅಖಂಡ ಕರ್ನಾಟಕ ಸಿಎಂ ಆಗುವ ಯೋಗ್ಯತೆ ನನಗಿದೆ:

ನಮ್ಮವರೇ ಸಿಎಂ ಇದ್ದಾಗ ಸಿಎಂ ಆಸೆ ಪಡೋದಿಲ್ಲ. ಸಿಎಂ ಅವಕಾಶ ಬಂದ್ರೆ ನಸೀಬು ನೋಡೋಣ. ಬೆನ್ನು ಹತ್ತಿ ಹೋಗಲ್ಲ. ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗ್ಬೇಕು. ನಾನು ಕರ್ನಾಟಕದ ರಾಜಕಾರಣಿ, ಹಿರಿಯ ರಾಜಕಾರಣಿ ಅನುಭವ ಇದ್ದವನು.. ಇನ್ನೂ 15 ವರ್ಷ ನನ್ನ ರಾಜಕೀಯ ಜೀವನ ಇದೆ.. ಭವಿಷ್ಯದಲ್ಲಿ ನೋಡೋಣ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios