ನಾನೂ ತೇರದಾಳ ಮತಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ: ಮಾರಾಪೂರ

2001ರಿಂದ 2010ವರೆಗೆ ಮಧಬಾವಿ ಗ್ರಾ.ಪಂ. ಸದಸ್ಯನಾಗಿ ಹಾಗೂ ಅಧ್ಯಕ್ಷನಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಇವತ್ತೂ ಕೂಡ ಆ ಕಾರ್ಯಗಳಿಂದ ರಾಜಕೀಯ ಮತ್ತು ಸಾಮಾಜಿಕವಾಗಿ ಜನತೆ ನನ್ನನ್ನು ಗುರುತಿಸುವಂತಾಗಿದೆ: ಮಾರಾಪುರ 

I am Also Aspirant for BJP Ticket from Teradal Constituency says Mahadev Marapur grg

ಮಹಾಲಿಂಗಪುರ(ಜ.21):  ತೇರದಾಳ ಮತಕ್ಷೇತ್ರದ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷದ ಟಿಕೆಟ್‌ ಆಕಾಂಕ್ಷಿ ಆಗಿದ್ದೇನೆ ಎಂದು ಸಮೀಪದ ಮಾರಾಪುರ ಗ್ರಾಮದ ಮಹಾದೇವ ಮಾರಾಪುರ ಹೇಳಿದರು. ಸ್ಥಳೀಯ ಸಿದ್ಧಾರೂಢ ಆಶ್ರಮದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2001ರಿಂದ 2010ವರೆಗೆ ಮಧಬಾವಿ ಗ್ರಾ.ಪಂ. ಸದಸ್ಯನಾಗಿ ಹಾಗೂ ಅಧ್ಯಕ್ಷನಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಇವತ್ತೂ ಕೂಡ ಆ ಕಾರ್ಯಗಳಿಂದ ರಾಜಕೀಯ ಮತ್ತು ಸಾಮಾಜಿಕವಾಗಿ ಜನತೆ ನನ್ನನ್ನು ಗುರುತಿಸುವಂತಾಗಿದೆ.

ಅಲ್ಲದೆ ಹಾಲು ಉತ್ಪಾದಕರ ಸಂಘಕ್ಕೆ 20 ವರ್ಷಗಳಿಂದ ಅಧ್ಯಕ್ಷನಾಗಿ, 2012ರಿಂದ 2014ರವರೆಗೆ ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕನಾಗಿ, ಜಿಲ್ಲಾ ಸಹಕಾರ ಯೂನಿಯನ್‌ ನಾಮನಿರ್ದೇಶಿತ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದೇನೆ.

'ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಪರಿಕಲ್ಪನೆ ಹರಿಕಾರ'

ಈ ಭಾಗದ ಎಲ್ಲ ಚುನಾವಣೆಗಳಲ್ಲಿ ಎಲ್ಲ ವರ್ಗಗಳ ಜನರು ನನ್ನ ಅಭಿವೃದ್ಧಿ ಕೆಲಸಗಳನ್ನು ಗಮನಿಸಿ ಬಿಜೆಪಿಗೆ ಅಮೂಲ್ಯ ಮತಗಳನ್ನು ನೀಡಿ, ಎಲ್ಲ ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ, ಶಾಸಕ ಸಿದ್ದು ಸವದಿ ಅವರ ಗೆಲುವಿನಲ್ಲಿಯೂ ನಿರ್ಣಾಯಕ ಪಾತ್ರವಹಿಸಿದ್ದೇನೆ.

ಈ ಕಾರಣಗಳಿಂದ ತೇರದಾಳ ಮತ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯೂ ಆಗಿದ್ದು ರಾಜ್ಯ ಮತ್ತು ಜಿಲ್ಲೆಯ ನಾಯಕರು ತಮ್ಮ ಸೇವೆಯನ್ನು ಪರಿಗಣಿಸಿ ಟಿಕೆಟ್‌ ನೀಡುತ್ತಾರೆ ಎಂಬ ಭರವಸೆ ನನಗಿದೆ ಹಾಗೂ ಜನರ ಕಷ್ಟಕಾರ್ಪಣ್ಯಗಳನ್ನು ಹತ್ತಿರದಿಂದ ನೋಡಿ ಅನುಭವಿಸಿರುವ ನಾನು ಈ ಭಾಗದ ಸಮಗ್ರ ಅಭಿವೃದ್ಧಿಯ ಕನಸು ಹೊಂದಿದ್ದೇನೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೈದಾಪೂರ ಗ್ರಾ.ಪಂ ಉಪಾಧ್ಯಕ್ಷ ಮಲ್ಲಪ್ಪ ಸೈದಾಪೂರ, ಪರಪ್ಪ ತಿಮ್ಮಾಪುರ, ವಿನೋದ ಉಳ್ಳಾಗಡ್ಡಿ, ಸಿದ್ದಪ್ಪ ಚಿಕ್ಕೋಡಿ, ವಿಠ್ಠಲ ಮುಧೋಳ, ಆನಂದ ಭಾಗೋಜಿ, ಗಿರೆಪ್ಪ ಉಳ್ಳಾಗಡ್ಡಿ, ನಾಗಪ್ಪ ಕೇತಗೌಡರ ಸಂತೋಷ ಹುದ್ದಾರ, ವಿನೋದ ಉಳ್ಳಾಗಡ್ಡಿ, ವಿಠ್ಠಲ ಮುಧೋಳ, ಸಿದ್ದಪ್ಪ ಚಿಕ್ಕೋಡಿ, ಪರಸಪ್ಪ ತಿಮ್ಮಾಪೂರ, ಆನಂದ ಭಾಗೋಜಿ, ಇತರರು ಇದ್ದರು.

Latest Videos
Follow Us:
Download App:
  • android
  • ios