ಹೈದರಾಬಾದ್, (ಜೂನ್.21): ಗನ್​ಮ್ಯಾನ್​ಗೆ ಕೊರೋನಾ ಪಾಸಿಟಿವ್ ದೃಢಪಟ್ಟಿ ಹಿನ್ನೆಯಲ್ಲಿ ತೆಲಂಗಾಣ ರಾಜ್ಯದ ಬಿಜೆಪಿ ಶಾಸಕ ರಾಜ ಸಿಂಗ್ ಹೋಂ ಕ್ವಾರಂಟೈನ್​ನಲ್ಲಿದ್ದಾರೆ. 

 ಗನ್​ಮ್ಯಾನ್​ಗೆ ಸೋಂಕು ತಗುಲಿರುವುದು ನಿನ್ನೆ ತಿಳಿಯುತ್ತಿದ್ದಂತೆಯೇ ಗೋಶಮಹಲ್ ಬಿಜೆಪಿ ಶಾಸಕ ರಾಜ ಸಿಂಗ್ ಖುದ್ದಾಗಿ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಅಲ್ಲದೇ ಅವರ ಕುಟುಂಬದವರೂ ಸಹ ಕ್ವಾರಂಟೈನ್‌ನಲ್ಲಿದ್ದಾರೆ.ಈ ಬಗ್ಗೆ ಶಾಸಕ ರಾಜ ಸಿಂಗ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕನಿಗೂ ತಗುಲಿದ ಕೊರೋನಾ ಸೋಂಕು..!

ಕ್ವಾರಂಟೈನ್​ನಲ್ಲಿದ್ದೇ ವ್ಯಾಯಾನ ಮಾಡುತ್ತಿರುವ ಶಾಸಕ, ಅದನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಅಪ್​ಲೋಡ್​ ಮಾಡಿದ್ದು,  ವ್ಯಾಯಾಮದಿಂದ ರೋಗನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ ಎಂದಿರುವ ಶಾಸಕ, ಎಲ್ಲರೂ ಅದನ್ನು ಪಾಲಿಸುವಂತೆ ಟ್ವಿಟರ್​ ಮೂಲಕ ಕರೆ ಕೊಟ್ಟಿದ್ದಾರೆ.

ಇನ್ನು ತೆಲಂಗಾಣದ ಕಾಂಗ್ರೆಸ್ ಹಿರಿಯ ನಾಯಕ ವಿ. ಹನುಮಂತ ರಾವ್‌ ಅವರಿಗೂ ಇಂದು (ಶನಿವಾರ) ಕೊರೋನಾ ದೃಢಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹದು.

ತೆಲಂಗಾಣದಲ್ಲಿ ಒಟ್ಟು 7072 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, 3506 ಮಂದಿ ಗುಣಮುಖರಾಗಿದ್ದಾರೆ. 203 ಮಂದಿ ಮೃತಪಟ್ಟಿದ್ದಾರೆ.