ಕಾಂಗ್ರೆಸ್‌ನಿಂದ ಸುಳ್ಳು ಭರವಸೆ ಮಾತ್ರ, ಅಭಿವೃದ್ಧಿ ಇಲ್ಲ: ಶಾಸಕ ರೇಣುಕಾಚಾರ್ಯ
ಕಾಂಗ್ರೆಸ್ ನಾಯಕರು ತಮ್ಮ ಅಧಿಕಾರವಧಿಯಲ್ಲಿ ಯಾವ ಅಭಿವೃದ್ಧಿ ಕಾರ್ಯಗಳ ಮಾಡದೆ ಈಗ ಚುನಾವಣೆ ಸಮಯದಲ್ಲಿ 10 ಕೆ.ಜಿ. ಅಕ್ಕಿ, 200 ಯುನಿಟ್ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಹೊನ್ನಾಳಿ/ ನ್ಯಾಮತಿ (ಜ.29): ಕಾಂಗ್ರೆಸ್ ನಾಯಕರು ತಮ್ಮ ಅಧಿಕಾರವಧಿಯಲ್ಲಿ ಯಾವ ಅಭಿವೃದ್ಧಿ ಕಾರ್ಯಗಳ ಮಾಡದೆ ಈಗ ಚುನಾವಣೆ ಸಮಯದಲ್ಲಿ 10 ಕೆ.ಜಿ. ಅಕ್ಕಿ, 200 ಯುನಿಟ್ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ನ್ಯಾಮತಿ ತಾಲೂಕಿನ ಚಟ್ನಹಳ್ಳಿ ಗ್ರಾಮದಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪ್ರತಿ ಮಹಿಳೆಯರಿಗೆ 2 ಸಾವಿರ ನಗದು ಕೊಡುತ್ತೇವೆ ಎಂದು ಸುಳ್ಳು ಭರವಸೆ ನೀಡಿದ್ದಾರೆ. ಇದನ್ನು ಈಡೇರಿಸಲು ಸಾಧ್ಯವೇ ನೀವೇ ಹೇಳಿ, ಕೇವಲ ಮತ ಪಡೆಯಲು ಇಂತಹ ಸುಳ್ಳು ಘೋಷಣೆಗಳ ಮಾಡಿದ್ದಾರೆ ಎಂದರು.
ಬಿಜೆಪಿ ಸರ್ಕಾರ ಯಾವುದೇ ಸುಳ್ಳು ಭರವಸೆಯ ನೀಡದೆ ಅಧಿಕಾರಕ್ಕೆ ಬಂದ ತಕ್ಷಣ ರೈತ ಮಕ್ಕಳಿಗೆ ವಿದ್ಯಾನಿಧಿ, ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿ ರೈತರಿಗೆ 4 ಸಾವಿರ ರು. ಹೈನುಗಾರ ರೈತರಿಗೆ ಪ್ರೋತ್ಸಾಹ ಧನ ಸೇರಿ ಅನೇಕ ಯೋಜನೆಗಳ ಜಾರಿಗೆ ತಂದು ರಾಜ್ಯದಲ್ಲಿ ಅಭಿವೃದ್ಧಿ ಕೈಗೊಂಡಿರುವುದು ಬಿಜೆಪಿ ಎಂದರು. ಕಳೆದ ಐದು ವರ್ಷದಲ್ಲಿ 4 ಸಾವಿರ ಕೋಟಿಗೂ ಹೆಚ್ಚು ಅನುದಾನ ತಂದು ಅವಳಿ ತಾಲೂಕಿನಲ್ಲಿ ಅಭಿವೃದ್ಧಿ ಮಾಡಿದ್ದೇನೆ, ಯಾರು ಬೇಕಾದರು ಪರಿಶೀಲಿಸಲಿ,ಅಭಿವೃದ್ಧಿ ಆಗಿಲ್ಲ ಎಂದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ಯಾದಗಿರಿಯಿಂದ ಸ್ಪರ್ಧಿಸಿದರೆ 1 ಕೋಟಿ ರು. ದೇಣಿಗೆ: ಆಹ್ವಾನ ನೀಡಿದ ಬಿಜೆಪಿ ಮುಖಂಡ
ಸಾಗುವಳಿ ಚೀಟಿ ವಿತರಣೆ: ಈ ಭಾಗದಲ್ಲಿ ಕಳೆದ 25 ವರ್ಷದಿಂದಲೂ ಸಾಗುವಳಿ ಚೀಟಿ ಕೊಟ್ಟಿರಲಿಲ್ಲ, ಮೂರು ಬಾರಿ ಸಭೆ ನಡೆಸಿ 53 ಅರ್ಹ ಫಲಾನುಭವಿಗಳಿಗೆ ಸಾಗುವಳಿ ಆದೇಶ ಪತ್ರ ನೀಡಲಾಗಿದೆ ಎಂದರು. ಈ ಬಗ್ಗೆ ಕೆಲವರು ನನ್ನ ಬಗ್ಗೆ ವಿನಾಕಾರಣ ಸುಳ್ಳು ಆರೋಪ ಮಾಡಿ ಸಾಗುವಳಿ ಪತ್ರ ನೀಡಲಿಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಅಪಪ್ರಚಾರ ನಡೆಸಿದ್ದರು.
ಚಟ್ನಹಳ್ಳಿ ಗ್ರಾಮಕ್ಕೆ 8.38 ಕೋಟಿ, ಸೋಗಿಲು ತಾಂಡದಲ್ಲಿ 1.13 ಕೋಟಿ,ಸೋಗಿಲು ಗ್ರಾಮದಲ್ಲಿ 5.37 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕೈಗೊಂಡಿದೆ. ಚಟ್ನಹಳ್ಳಿ ಹಾಗೂ ಇತರ ಗ್ರಾಮಗಳಲ್ಲಿ ಭಾಗದಲ್ಲಿ ಚೆಕ್ ಡ್ಯಾಂ ನಿರ್ಮಿಸಲು 52 ಕೋಟಿ ರು. , ಕುಡಿಯುವ ನೀರಿಗೆ 83 ಕೋಟಿ ರು.,ಅವಳಿ ತಾಲೂಕಿನಲ್ಲಿ 7 ಪವರ್ ಸ್ಟೇಷನ್ ನಿರ್ಮಿಸಲಾಗಿದೆ ಎಂದರು. ಸ್ವತಂತ್ರ ಹೋರಾಟಗಾರ ಈಶ್ವರಪ್ಪರನ್ನು ಸನ್ಮಾನಿಸಲಾಯಿತು. ಸಂಜೀವಿನಿ ಒಕ್ಕೂಟದ ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ ಹಾಗೂ ಡೊಳ್ಳು ಕುಣಿತ ಏರ್ಪಡಿಸಲಾಗಿತ್ತು.
ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ನ್ಯಾಮತಿ ತಹಸೀಲ್ದಾರ್ ಗಿರೀಶ್‌ಬಾಬು, ತಾಲೂಕು ಪಂಚಾಯಿತಿ ಇಒ ರಾಮಭೋವಿ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷೆ ನೀಲಾಬಾಯಿ, ಉಪಾಧ್ಯಕ್ಷೆ ಶೃತಿರವಿ, ಸದಸ್ಯರಾದ ನೇತ್ರಾವತಿ, ನವೀನ್, ವೀರೇಶ್, ಗೀತಾ, ಶಾಂತಿಬಾಯಿ, ರೇಖ್ಯಾನಾಯ್ಕ್, ಮಂಜಪ್ಪ, ಬಗರ್ ಹುಕುಂ ಅಧ್ಯಕ್ಷ ಈರಣ್ಣ, ಮಲ್ಲೇಶ್, ತಾಲೂಕು ಮಟ್ಟದ ಅಧಿಕಾರಿಗಳಾದ ಮಂಜುನಾಥ್, ಉಮಾ, ಪ್ರತಿಮಾ ಹಾಗೂ ಇತರರಿದ್ದರು.
ಜಯಮುತ್ತು ಸರ್ವಾಧಿಕಾರಿ ಧೋರಣೆ ಜೆಡಿಎಸ್‌ಗೇ ಕುತ್ತು: ಸಿ.ಪಿ.ಯೋಗೇಶ್ವರ್
ಪ್ರಧಾನಿ ನರೇಂದ್ರ ಮೋದಿಯವರ ಬಾಯಿಗೆ ಬಂದ ಹಾಗೆ ಟೀಕಿಸುವ ವಿಪಕ್ಷಗಳು ತಮ್ಮ ಅಧಿಕಾರವಧಿಯಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ? ಮೋದಿಯವರು ಅಧಿಕಾರಕ್ಕೆ ಬಂದ ನಂತರ ವಿಶ್ವವೇ ಭಾರತದೆಡೆ ತಿರುಗಿ ನೋಡುವ ರೀತಿಯಲ್ಲಿ ಅಧಿಕಾರ ನಡೆಸುತ್ತಿದ್ದಾರೆ. ನೆರೆಯ ಪಾಕಿಸ್ತಾನದಲ್ಲಿ ಆಹಾರಕ್ಕೂ ಹಾಹಕಾರ ಎದ್ದಿದೆ. ಇತ್ತ ಶ್ರೀಲಂಕಾದಲ್ಲೂ ಇದೇ ವಾತಾವರಣವಿದೆ ಆದರೆ ಭಾರತ ಮಾತ್ರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ, ಇದಕ್ಕೆ ಮೋದಿಯವರ ಸಮರ್ಥ ಆಡಳಿತ ಕಾರಣ.
-ಎಂ.ಪಿ.ರೇಣುಕಾಚಾರ್ಯ, ಶಾಸಕ