RR ನಗರ ಬೈ ಎಲೆಕ್ಷನ್: ಬಿಜೆಪಿ ಗೆಲುವಿಗೆ, ಕಾಂಗ್ರೆಸ್ ಸೋಲಿಗೆ ಕಾರಣಗಳು...!
ಬೆಂಗಳೂರಿನ ಆರ್‌ಆರ್ ನಗರ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದ್ದು, ಕಾಂಗ್ರೆಸ್‌ಗೆ ಮುಖಭಂಗವಾಗಿದೆ. ಇನ್ನು ಬಿಜೆಪಿ ಗೆಲುವು ಹಾಗೂ ಕಾಂಗ್ರೆಸ್‌ನ ಸೋಲಿಗೆ ಕಾರಣಗಳು ಇಂತಿವೆ.
ಬೆಂಗಳೂರು, (ನ.10): ಶಿರಾ ಮತ್ತು ಆರ್ ಆರ್ ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾರರು ಅಭ್ಯರ್ಥಿಗಳ ಹಣೆಬರಹ ಬರೆದಾಗಿದೆ. ಅದರಲ್ಲೂ ತೀವ್ರ ಕುತೂಹಲ ಮೂಡಿಸಿದ್ದಲ್ಲೇ ತೀವ್ರ ಪತಿಷ್ಠೆಯ ಕಣವಾಗಿದ್ದ ಆರ್‌ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ವಿಜಯ ಪತಾಕೆ ಹಾರಿಸಿದ್ದಾರೆ.
ಇದರೊಂದಿಗೆ ಹ್ಯಾಟ್ರಿಕ್ ಗೆಲವು ಸಾಧಿಸಿದರು. ಅಂದಹಾಗೇ ಮುನಿರತ್ನ 2013ರ ಚುನಾವಣೆಯಲ್ಲಿ 71,064 ಮತಗಳನ್ನು ಗಳಿಸಿದ್ದ ಅವರು, 18,813 ಮತಗಳ ಅಂತರದಿಂದ ಗೆದ್ದಿದ್ದರು. 2018ರ ಚುನಾವಣೆಯಲ್ಲಿ ಮುನಿರತ್ನ 1,08,064 ಮತಗಳನ್ನು ಗಳಿಸಿ, 25,492 ಮತಗಳ ಅಂತರದಿಂದ ಗೆದ್ದಿದ್ದರು.
RR ನಗರದಲ್ಲಿ ಗೆಲುವು ಸಾಧಿಸಿದ ಮುನಿರತ್ನ: ಕಾಂಗ್ರೆಸ್ ತಂತ್ರಗಳು ಉಲ್ಟಾ..!
ಇದೀಗ 2020ರ ಉಪ ಚುನಾವಣೆಯಲ್ಲಿ 1,03,291 ಮತಗಳನ್ನು ಗಳಿಸಿದ್ದು, 44,548ಕ್ಕೂ ಹೆಚ್ಚು ಮತಗಳಿಂದ ಭರ್ಜರಿ ಹ್ಯಾಟ್ರಿಕ್ ಗೆಲುವನ್ನು ಸಾಧಿಸಿದ್ದಾರೆ. ಚುನಾವಣಾ ಆಯೋಗದಿಂದ ಮುನಿರತ್ನ ಗೆಲುವನ್ನು ಅಧಿಕೃತವಾಗಿ ಘೋಷಣೆ ಮಾಡಬೇಕಿದೆ. ಇನ್ನು ಬಿಜೆಪಿ ಗೆಲುವು ಹಾಗೂ ಕಾಂಗ್ರೆಸ್ ಸೋಲಿಗೆ ಕಾರಣಗಳನ್ನ ನೋಡುವುದಾದರೆ ಅವು ಈ ಕೆಳಗಿನಂತಿವೆ.
ಬಿಜೆಪಿ ಗೆಲುವಿನ ಕಾರಣವಾದ ಅಂಶಗಳು..
* ಕೊರೋನಾ ಸಂಕಷ್ಟದ ಕಾಲದಲ್ಲಿ ಮತದಾರರಿಗೆ ಅಗತ್ಯ ನೆರವು ನೀಡಿರುವುದು..
* ಸಾಂಪ್ರದಾಯಿಕ ಬಿಜೆಪಿ ಮತಗಳನ್ನು ಕ್ರೋಢಿಕರಣ ಮಾಡುವಲ್ಲಿ ಯಶಸ್ವಿಯಾಗಿದ್ದು..
* ಮುನಿಸಿಕೊಂಡಿದ್ದ ಎಲ್ಲಾ ಕಾರ್ಯಕರ್ತರು, ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದು..
* ಆರ್ ಅಶೋಕ್ ನಾಯಕತ್ವದಲ್ಲಿ ಒಕ್ಕಲಿಗ ಮತಗಳನ್ನು ಪಡೆಯಲು ರಣತಂತ್ರ ರೂಪಿಸಿದ್ದು..
* ನಿಗದಿತ ಸಮಯದಲ್ಲಿ ಪ್ರಚಾರ ಆರಂಭಿಸಿ, ಅಭಿವೃದ್ಧಿಯ ಹೆಸರಿನಲ್ಲಿ ಮತಯಾಚನೆ ಮಾಡಿದ್ದು..
* ತುಳಸಿ ಮುನಿರಾಜುಗೌಡ ಬೆಂಬಲಿಗರನ್ನ ವಿಶ್ವಾಸಕ್ಕೆ ಪಡೆದುಕೊಂಡಿದ್ದರು.
* ಆಡಳಿತ ಪಕ್ಷ ಗೆಲ್ಲಿಸಿದ್ರೆ ಅಭಿವೃದ್ಧಿಯಾಗುತ್ತೆ ಎಂದ ಮತದಾರರು.
* ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವ್ಯಕ್ತಿ ನೋಡಿ ಪ್ರಚಾರ ಮಾಡಿದ್ದು...
ಕಾಂಗ್ರೆಸ್ ಸೋಲಿಗೆ ಕಾರಣಗಳು
* ಕೊರೋನಾ ಸಂಕಷ್ಟದ ಕಾಲದಲ್ಲಿ ಕಾಂಗ್ರೆಸ್ ನಿಂದ ಮತದಾರರಿಗೆ ನೆರವಾಗದಿರುವುದು..
* ಕ್ಷೇತ್ರದಲ್ಲಿ ತಳಮಟ್ಟದ ಕಾರ್ಯಕರ್ತರು ಚುನಾವಣೆ ಮುನ್ನೆಡೆಸಲು ಲಭ್ಯವಾಗದಿರುವುದು..
* ಮೇಲ್ನೋಟಕ್ಕೆ ನಾಯಕರ ಮಧ್ಯೆ ಹೊಂದಾಣಿಕೆಯಿದ್ದರೂ, ಒಳಗೊಳಗೆ ನಾಯಕತ್ವದ ಹೋರಾಟ..
* ಟಿಕೆಟ್ ವಂಚಿತ ತುಳಸಿ ಮುನಿರಾಜುಗೌಡ ಬೆಂಬಲಿಗರು ಪಕ್ಷದ ಆದೇಶಕ್ಕೆ ತಲೆಬಾಗಿ ಕೆಲಸ ಮಾಡಿದ್ದು..
* ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಪರಿಚಯ ಮಾಡಲು ಸೂಕ್ತ ಸಮಯಾವಕಾಶ ಸಿಗದಿರುವುದು...
* ಜೆಡಿಎಸ್ ಹಾಗೂ ಕಾಂಗ್ರೆಸ್ ಜಾತಿ ಮೇಲೆ ಆರೋಪ-ಪ್ರತ್ಯಾರೋಪ ಮಾಡಿರುವುದು
* ಮೂಲ ಕಾಂಗ್ರೆಸ್ ಕಾರ್ಯಕರ್ತರು ಮುನಿರಾಜು ಪರ ವಾಲಿದ್ದು,
* ಹೊಸ ಮುಖಕ್ಕೆ ಮಣೆ ಹಾಕಿರುವುದು ಕ್ಷೇತ್ರದ ಜನರಿಗೆ ಗೊಂದಲ
* ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬೆಂಬಲಿಗರ ಮುಸುಕಿನ ಗುದ್ದಾಟ.
ಜೆಡಿಎಸ್ ಸೋಲಿಗೆ ಕಾರಣಗಳು
* ಸೂಕ್ತ ಅಭ್ಯರ್ಥಿಯನ್ನು ಹುಡುಕಾಟ ಮಾಡುವಲ್ಲಿ ವರಿಷ್ಟರು ತಡವರಿಸಿದ್ದು..
* ಸಾಂಪ್ರದಾಯಿಕ ಒಕ್ಕಲಿಗ ಮತಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದು..
* ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾರ್ಯಕರ್ತರು, ಮುಖಂಡರಿಗೆ ಸೂಕ್ತ ಸ್ಥಾನಮಾನ ಸಿಗದಿರುವುದು.
* ಹಿಂದೆ ಅಭ್ಯರ್ಥಿಯಾಗಿದ್ದ ಹನುಮಂತರಾಯಪ್ಪ ಜೊತೆಗೆ ಮುಖಂಡರ ಸಾಮೂಹಿಕ ಪಕ್ಷಾಂತರ..
* ಕರಾರುವಕ್ಕಾದ ಪ್ರಚಾರ, ಮತದಾರದಾರ ಓಲೈಕೆಯಲ್ಲಿ ಜೆಡಿಎಸ್ ನಾಯಕರು ವಿಫಲವಾಗಿದ್ದು...