Asianet Suvarna News Asianet Suvarna News

ಜೆಡಿಎಸ್‌ ಅಧಿಕಾರಕ್ಕೆ ಬರೋದು ಸೂರ್ಯ, ಚಂದ್ರರಷ್ಟೇ ಸತ್ಯ, ಕುಮಾರಣ್ಣ ಮುಂದಿನ ಮುಖ್ಯಮಂತ್ರಿ'

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿ ರಾಜ್ಯದ ಜನತೆಗೆ ಕೊಡುಗೆ ನೀಡಿದ್ದಾರೆ: ನಾಡಗೌಡ

HD Kumaraswamy Will be The Next CM of Karnataka says Venkatrao Nadagouda grg
Author
First Published Nov 16, 2022, 10:00 PM IST

ಸಿಂಧನೂರು(ನ.16): ರಾಷ್ಟ್ರೀಯ ಪಕ್ಷಗಳಾದ ಭಾರತೀಯ ಜನತಾ ಪಕ್ಷ ಹಾಗೂ ಕಾಂಗ್ರೆಸ್‌ ಪಕ್ಷದಿಂದ ಅಭಿವೃದ್ಧಿ ಅಸಾಧ್ಯ. ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ನಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿ ರಾಜ್ಯದ ಜನತೆಗೆ ಕೊಡುಗೆ ನೀಡಿದ್ದಾರೆ. 2023ರ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರರಷ್ಟೇ ಸತ್ಯ. ಕುಮಾರಣ್ಣ ಮುಖ್ಯಮಂತ್ರಿಯಾಗುವುದು ಅಷ್ಟೇ ಸತ್ಯ ಎಂದು ಶಾಸಕ ವೆಂಕಟರಾವ್‌ ನಾಡಗೌಡ ಭವಿಷ್ಯ ನುಡಿದರು.

ತಾಲೂಕಿನ ರೈತನಗರ ಕ್ಯಾಂಪಿನಲ್ಲಿ ನಾಡಗೌಡರ ನಡೆ ಸಾಧನೆಯ ಕಡೆ ಜನಸಂಪರ್ಕ ಸಭೆ ಹಾಗೂ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಅಭಿವೃದ್ಧಿ ವಿಚಾರದಲ್ಲಿ ತಾವೆಂದು ರಾಜಕೀಯ ಮಾಡುವುದಿಲ್ಲ. ಯಾವುದೇ ಪಕ್ಷದ ಕಾರ್ಯಕರ್ತರಿರಲಿ ರಾತ್ರಿ 12 ಗಂಟೆಗೆ ಅನಾರೋಗ್ಯದ ಕುರಿತು ಪೋನಾಯಿಸಿದರು ಅವರಿಗೆ ಸಹಾಯ ಮಾಡಿದ್ದೇನೆ. ಇಲ್ಲಿ ಮಾನವಿಯತೆ ಮುಖ್ಯವಾಗುತ್ತದೆಯೆ ಹೊರತು ರಾಜಕಾರಣವಲ್ಲ. ಇಂತಹ ಕೆಲಸಗಳಿಮದ ಅನೇಕ ಬಾರಿ ನಮ್ಮ ಜೆಡಿಎಸ್‌ ಕಾರ್ಯಕರ್ತರ ಆಕ್ರೋಶಕ್ಕೂ ಗುರಿಯಾಗಿದ್ದೇನೆ. ತಮ್ಮ ಎರಡು ಶಾಸಕತ್ವದ ಅವಧಿಯಲ್ಲಿ ಯಾವ ಗ್ರಾಮದಲ್ಲಿಯು ಜಗಳ, ಕೇಸ್‌ಗಳು ರಾಜಕೀಯ ಕಾರಣಕ್ಕೆ ದಾಖಲಾಗಿಲ್ಲ. ಹಿಂದಿನ ಶಾಸಕರ ಅವಧಿಯಲ್ಲಿ ಆಗಿರುವ ಬಡಿದಾಟಗಳ ಪ್ರಕರಣಗಳಲ್ಲಿ ಇರುವವರು ಇನ್ನು ಕೋರ್ಚ್‌ ಕಚೇರಿಗೆ ಅಲೆದಾಡುತ್ತಿದ್ದಾರೆ ಎಂದು ವಿವರಿಸಿದರು.

2023ರ ಚುನಾವಣೆಯಲ್ಲಿ ಮತ್ತೆ ಅರಳುತ್ತೆ ಕಮಲ: ಬಿ.ವೈ.ರಾಘವೇಂದ್ರ

ಈ ಸಂದರ್ಭದಲ್ಲಿ ಜೆಡಿಎಸ್‌ ಮುಖಂಡ ಚಂದ್ರಭೂಪಾಲ ನಾಡಗೌಡ, ವೆಂಕೋಬಣ್ಣ ಕಲ್ಲೂರು, ಸತ್ಯನಾರಾಯಣ, ವೀರಭದ್ರಪ್ಪ, ವೆಂಕೋಬ, ಖಾಸಿಂಸಾಬ, ಭಾಗ್ಯಮ್ಮ, ಹರಿಕಿಶೋರರೆಡ್ಡಿ, ತಿಮ್ಮನಗೌಡ, ಯಮನಪ್ಪ, ಕರಿಯಪ್ಪ, ಜಕ್ಕರಾಯ ಇದ್ದರು. ಸುಮಿತ್‌ ತಡಕಲ್‌ ಕಾರ್ಯಕ್ರಮ ನಿರೂಪಿಸಿದರು.
 

Follow Us:
Download App:
  • android
  • ios