ಈ ಕ್ಷೇತ್ರಕ್ಕೆ ಎಚ್.ಡಿ ಕುಮಾರಸ್ವಾಮಿಯವರೇ ಮಂತ್ರಿ, ಮುಖ್ಯಮಂತ್ರಿಯಂತೆ...!
ಈ ಕ್ಷೇತ್ರಕ್ಕೆ ಕುಮಾರಸ್ವಾಮಿ ಅವರೇ ಮಂತ್ರಿ, ಮುಖ್ಯಮಂತ್ರಿಯಂತೆ: ಈಗಂತ ಅಸ್ವತಃ ಅವರೇ ಹೇಳಿದ್ದಾರೆ. ಹಾಗಾದ್ರೆ, ಈ ಮಾತನ್ನು ಯಾರಿಗೆ ಹೇಳಿದರು..?
ರಾಮನಗರ, (ನ.27): ಚನ್ನಪಟ್ಟಣಕ್ಕೆ ನಾನೇ ಮಂತ್ರಿ, ನಾನೇ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಗುಡುಗಿದ್ದಾರೆ.
ಇಂದು (ಶುಕ್ರವಾರ) ಚನ್ನಪಟ್ಟಣದಲ್ಲಿ ಮಾತನಾಡಿದ ಎಚ್.ಡಿ ಕುಮಾರಸ್ವಾಮಿ, ಬಿಜೆಪಿಯಲ್ಲಿ ಮಂತ್ರಿ ಮಾಡಬೇಡಿ ಎಂದು ನಾನು ಹೇಳಿದ್ದೀನಂತೆ. ಯಾರನ್ನೋ ಮಂತ್ರಿ ಮಾಡಿದರೆ ನಾನು ಹೆದರಿಕೊಳ್ಳುವ ವ್ಯಕ್ತಿಯಲ್ಲ ಎಂದು ಪರೋಕ್ಷವಾಗಿ ಸಿ.ಪಿ ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.
ಯಾರನ್ನೋ ಮಂತ್ರಿ ಮಾಡುತ್ತಾರೆಂದು ನಾನು ಹೆದರುತ್ತೇನಾ. ನಮ್ಮ ಕುಟುಂಬದಲ್ಲಿ ಬಹಳ ಜನರನ್ನ ನೋಡಿದ್ದೇವೆ. ನಾವು ಮುಖ್ಯಮಂತ್ರಿಗಳನ್ನೇ ಹೆದರಿಸಿದ್ದೇವೆ ಎಂದು ಸಿ ಪಿ ಯೋಗೇಶ್ವರ್ ಗೆ ತಿರುಗೇಟು ಕೊಟ್ಟರು.
ದಿಲ್ಲಿಯಿಂದ ಅಮಿತ್ ಶಾ ಫೋನ್ ಕಾಲ್: ಸಿಎಂ ಬಿಎಸ್‌ವೈ ಫುಲ್ ಶಾಕ್...!
ಇನ್ನು ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಸಿಎಂ ಅವರನ್ನು ಭೇಟಿ ಮಾಡಿದ್ದೇನೆ ಅಷ್ಟೇ, ಬೇರೆ ಯಾವ ಕಾರಣಕ್ಕೂ ಅಲ್ಲ. ಇಲ್ಲಿ 20 ಕೆರೆ ತುಂಬಿಸಿ ಭಗೀರಥ ಆದ್ರೂ, ಆದರೆ ನಾನು 128 ಕೆರೆ ತುಂಬಿಸಿದ್ದೇನೆ. ಆದರೆ ನಾನೇನು ಬೋರ್ಡ್ ಹಾಕಿಕೊಂಡಿಲ್ಲ ಎಂದರು.
ರಾಮನಗರ ಜಿಲ್ಲೆಯಲ್ಲಿ ಬಡವರಿಗೆ ಅನ್ಯಾಯ ಹಾಗೂ ಅಕ್ರಮ ಚಟುವಟಿಕೆ ನಡೆಯಲು ಅವಕಾಶ ಮಾಡಿಕೊಡುವುದಿಲ್ಲ. ಯಡಿಯೂರಪ್ಪ ನಮ್ಮ ಜಿಲ್ಲೆಯವರನ್ನೇ 4 ಜನ ಮಂತ್ರಿ ಮಾಡಲಿ. ಇವರನ್ನು ಮಂತ್ರಿ ಮಾಡಬೇಡಿ ಎಂದು ಕೀಳು ಮಟ್ಟಕ್ಕೆ ಇಳಿಯುವುದಿಲ್ಲ ಎಂದು ಮಾಜಿ ಹೇಳಿದರು.
ಸಿ.ಪಿ.ಯೋಗೇಶ್ವರ್ ಅವರಿಗೆ ಮಂತ್ರಿ ಸ್ಥಾನ ನೀಡಬೇಡಿ ಎಂದು ಕುಮಾರಸ್ವಾಮಿ ಅವರು ಸಿಎಂಗೆ ಮನವಿ ಮಾಡಿದ್ದಾರೆಂಬ ಸುದ್ದಿಗಳು ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಸ್ಪಷ್ಟನೆ ಕೊಟ್ಟರು.