ಬೆಂಗಳೂರು, [ನ.13]:  ಜಿಟಿ ದೇವೇಗೌಡ್ರಿಗೆ ಫ್ಯೂಸ್ ಹೋಗಿದೆ. ಇನ್ನೆಲ್ಲಿ ಶಾಕ್ ಹೊಡೆಯುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ, ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅವರು ಜೆಡಿಎಸ್ ಪಕ್ಷವನ್ನು ತೊರೆಯಲಿದ್ದಾರೆ ಎಂಬ ಬಗ್ಗೆ ವ್ಯಂಗ್ಯವಾಡಿರುವ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ, ಜಿಟಿಡಿ ಅವರಿಗೆ ಫ್ಯೂಸ್ ಹೋಗಿದೆ, ಇನ್ನೆಲ್ಲಿ ಶಾಕ್ ಹೊಡೆಯುತ್ತದೆ ಎಂದರು.

ಜೆಡಿಎಸ್‌ನಿಂದ ನಾನು ಈಗ ದೂರ ಎಂದು ಪುನರುಚ್ಛರಿಸಿದ ಜಿಟಿಡಿ

ಮಾಧ್ಯಮಗಳು ಜೆಡಿಎಸ್‍ಗೆ ಮತ್ತೊಂದು ಶಾಕ್. ಜಿಟಿ ದೇವೇಗೌಡರು ಜೆಡಿಎಸ್ ಬಿಡುತ್ತಾರೆ ಎಂದು ವರದಿ ಮಾಡಿದ್ದವು. ಆದರೆ ಅದು ಶಾಕ್ ಹೊಡೆಯುವುದಿಲ್ಲ. ಈಗಾಗಲೇ ಫ್ಯೂಸ್ ಕಿತ್ತು ಹೋಗಿದೆ. ಎಂಎಲ್‍ಸಿ ಪುಟ್ಟಣ್ಣ ಕೂಡ 3 ವರ್ಷದ ಹಿಂದೆ ಜೆಡಿಎಸ್ ಪಕ್ಷವನ್ನು ಬಿಟ್ಟು ಹೋಗಿ ಟೋಪಿ ಹಾಕಿದ್ದಾರೆ. ಇನ್ನೂ ಆ ಶಾಕ್ ಈಗ ಹೇಗೆ ಹೊಡೆಯುತ್ತೆ. ಅಲ್ಲಿಯೂ ಕರೆಂಟ್ ಇಲ್ಲ. ಇದೆಲ್ಲಾ ಮುಗಿದ ಕಥೆಗಳು ಅಷ್ಟೆ. ಮತ್ತೆ ಶಾಕ್ ಹೊಡೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ .ಟಿ.ದೇವೇಗೌಡ ಅವರು ಇತ್ತೀಚೆಗೆ ಜೆಡಿಎಸ್ ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿದ್ದು, ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಟಿಡಿ ನಡೆ ಬಿಜೆಪಿಯತ್ತ ಮುಖ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.