ಬೆಂಗಳೂರಿನಿಂದ ಗದಗ ತನಕ ಕರೆಯಿಸಿ ಕುಮಾರಸ್ವಾಮಿಗೆ ಅವಮಾನ ಮಾಡಿದ್ರಾ?
* ಬೆಂಗಳೂರಿನಿಂದ ಗದಗ ತನಕ ಕರೆಯಿಸಿ ಕುಮಾರಸ್ವಾಮಿಗೆ ಅವಮಾನ ಮಾಡಿದ್ರಾ?
* ನಿಗದಿಯಾಗಿದ್ದ ಕಾರ್ಯಕ್ರಮ ರದ್ದು
* ಕಾರ್ಯಕ್ರಮಕ್ಕೆ ಬಂದಿದ್ದ ಎಚ್‌ಡಿ ಕುಮಾರಸ್ವಾಮಿಗೆ ಬೇಸರ
ಗದಗ, (ಆ.23): ಕೆರೆ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿ ದಿಢೀರ್ ರದ್ದುಗೊಳಿಸಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಹೌದು...ಇಂದು (ಆ.23) ಗದಗ ಜಿಲ್ಲೆಯ ಸುಗ್ನಳ್ಳಿ ಗ್ರಾಮದ ಅಲದಮ್ಮನ ಕೆರೆ ಭೂಮಿ ಪೂಜೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ದಿಢೀರನೇ ಕಾರ್ಯಕ್ರಮ ರದ್ದುಗೊಂಡಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಅವಮಾನ ಮಾಡಲಾಗಿದೆ ಎಂದು ಜೆಡಿಎಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ವರ್ಚಸ್ಸು ನಶಿಸಿದ್ದಕ್ಕೆ ಯಾತ್ರೆ : ಎಚ್‌ಡಿಕೆ
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ಮುಖ್ಯಮಂತ್ರಿಯಾಗಿದ್ದಾಗ ಗ್ರಾಮ ವಾಸ್ತವ್ಯಕ್ಕೆ ಈ ಗ್ರಾಮಕ್ಕೆ ಆಗಮಿಸಿದ್ದಾಗ ಸುಗ್ನಳ್ಳಿ ಕೆರೆಗೆ ಅನುದಾನ ಒದಗಿಸಿದ್ದೆ. ಇದೀಗ ಹೀಗಾಗಿ ಕೆರೆ ಭೂಮಿ ಪೂಜೆ ನಡೆಯಲಿದ್ದು ನನಗೆ ಆಹ್ವಾನ ನೀಡಿದ್ದರು. ಶಿರಹಟ್ಟಿ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಸ್ವತಃ ಆಹ್ವಾನ ನೀಡಿದ್ದರು. ಉಸ್ತುವಾರಿ ಸಚಿವ ಸಿ ಸಿ ಪಾಟೀಲ್ ಅವರೊಂದಿಗೂ ಮಾತನಾಡಿದ್ದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ಗದಗಕ್ಕೆ ಆಗಮಿಸಿದ್ದೆ. ಆದರೆ ನಿನ್ನೆ (ಆ.22) ರಾತ್ರಿ ಅನಿರೀಕ್ಷಿತವಾಗಿ ಇಂದಿನ ಕಾರ್ಯಕ್ರಮನ್ನು ರದ್ದುಗೊಳಿಸಿದ್ದಾರೆ ಎಂದರು.
ಯಾಕೆ ಹೀಗೆ ನಡೆದಿದೆ ಎಂದು ನನಗೆ ತಿಳಿದಿಲ್ಲ. ಆದರೆ ರಾಜಕೀಯ ಮಾಡದೇ ಜನರ ಪರವಾಗಿ ಕೆಲಸ ನಿರ್ವಹಿಸಿ ಎಂದಷ್ಟೇ ಇಲ್ಲಿಯ ಜನಪ್ರತಿನಿಧಿಗಳಿಗೆ ಸಲಹೆ ನೀಡುತ್ತೇನೆ ಎಂದು ಹೇಳಿದರು.