ಆಟೋ ಚಾಲಕರ ಕೈ ಹಿಡಿದ ಕುಮಾರಣ್ಣ: ಮಾಸಿಕ 2 ಸಾವಿರ ರೂ. ನೆರವು ಘೋಷಣೆ

ರಾಜ್ಯದಲ್ಲಿ ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲ ಆಟೋ ಡ್ರೈವರ್‌ಗಳಿಗ ಮಾಸಿಕ 2 ಸಾವಿರ ರೂ. ಆರ್ಥಿಕ ನೆರವು ನೀಡುವುದಾಗಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.

HD Kumaraswamy Announces 2000 Rs for Auto drivers in JDS Manifesto ahead of Karnataka Election sat

ಬೆಂಗಳೂರು (ಮಾ.29): ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಣಾಳಿಕೆ ಸಿದ್ಧಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಆಟೋ ಡ್ರೈವರ್‌ಗೆ ಮಾಸಿಕ 2 ಸಾವಿರ ರೂ. ನೆರವು ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷ ಈಗಾಗಲೇ ಶೇ50 ರಿಂದ ಶೇ.60ರಷ್ಟು ಚುನಾವಣಾ ಪ್ರಚಾರ ಕಾರ್ಯಗಳನ್ನು ಮುಗಿಸಲಾಗಿದೆ. ಈಬಾರಿಯ 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 123 ಕ್ಷೇತ್ರಗಳಲ್ಲಿ ಗೆಲ್ಲಿವ ಗುರಿ ಇಟ್ಟುಕೊಳ್ಳಲಾಗಿದೆ. ಈ ಗುರಿ ಮುಟ್ಟಲು ಎರಡನೇ ಹಂತದಲ್ಲಿ  ಪ್ರಯತ್ನ ಮಾಡಬೇಕಿದೆ. ಇನ್ನು ಜೆಡಿಎಸ್‌ ಪಕ್ಷದ ಪ್ರಣಾಳಿಕೆ ಸಿದ್ದತೆ ಆಗಿದೆ. ರಾಜ್ಯದ ಎಲ್ಲ ಆಟೊ ಚಾಲಕರಿಗೆ ಮಾಸಿಕ 2,000 ರೂ. ಸಹಾಯಧನ ನೀಡಲಾಗುವುದು. ಇನ್ನು ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಯನ್ನು ಈಡೇರಿಸುವ ಉದ್ದೇಶಿದಂದ ಎಲ್ಲ ಅಂಗನವಾಡಿ ಕಾರ್ಯಕರ್ತರಿಗೆ ಮಾಸಿಕ ಗೌರವಧನ 7 ಸಾವಿರ ರೂ.ಗೆ ಹೆಚ್ಚಳ ಮಾಡಲಾಗುವುದು. ಇನ್ನೂ ಕೆಲವು ಕಾರ್ಯಕ್ರಮಗಳನ್ನು ಸೇರಿಸಿ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

ಕರ್ನಾಟಕ ವಿಧಾನಸಭೆ 2018ರ ಚುನಾವಣೆ ಪಕ್ಷಗಳ ಬಲಾಬಲ ಎಷ್ಟಿದೆ?: 2023ಕ್ಕೆ ಏನಾಗಲಿದೆ.!

ನಾನು ಎರಡು ಕ್ಷೇತ್ರದಲ್ಲಿ ನಿಲ್ಲಲ್ಲ: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ನಾನು ಯಾವುದೇ ಕಾರಣಕ್ಕೂ 2 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದಿಲ್ಲ. ಆದರೆ, ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿಯೂ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಸುದ್ದಿಗಳು ಹರಿದಾಡುತ್ತಿವೆ. ಆದರೆ ಅದು ಸುಳ್ಳು. ಇನ್ನು 2018ರ ಚುನಾವಣೆಯಲ್ಲಿ ನನಗೆ ಎರಡು ಕಡೆ ಸ್ಪರ್ಧೆ ಮಾಡುವ ಅನಿವಾರ್ಯತೆ ಇತ್ತು. ಹಾಗಾಗಿ ಎರಡು ಕಡೆ ಸ್ಪರ್ಧೆ ಮಾಡಿದ್ದೆನು. ಇನ್ನು ಮಂಡ್ಯದ ಶಾಸಕ ಎಂ. ಶ್ರೀನಿವಾಸ್‌ ಇಂದೂ ಕೂಡ ಮಂಡ್ಯದಲ್ಲಿ ನೀವೇ ಜೆಡಿಎಸ್‌ನಿಂದ ಸ್ಪರ್ಧೆ ಮಾಡಲು ಬರುವಂತೆ ಮನವಿ ಮಾಡಿದರು. ಆದರೆ ನಾನು ನಿರಾಕರಿಸಿ ಕಳಿಸಿದ್ದೇನೆ ಎಂದು ಹೇಳಿದರು.

ಕೆಲವು ಕ್ಷೇತ್ರಗಳಲ್ಲಿ ದೇವೇಗೌಡರಿಂದ ಪ್ರಚಾರ: ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಅವರು ಪ್ರಚಾರ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಪಾಲ್ಗೊಂಡಿರಲಿಲ್ಲ. ಆದರೆ, ಬೆಂಗಳೂರು ಸೇರಿ ಕೆಲವು ಕಾರ್ಯಕ್ರಮಗಳಲ್ಲಿ ಮಾತ್ರ ಭಾಗವಹಿಸಿದ್ದರು. ಆದರೆ, ಈಗ ಕೆಲವು ಕ್ಷೇತ್ರ ಗಳಿಗೆ ದೇವೇಗೌಡರು ಪ್ರಚಾರಕ್ಕೆ ಬರಲಿದ್ದಾರೆ. ನಾವು ಬೇಡಾ ಎಂದರೂ ಕೂಡಾ ಅವರು ಬರುವ ಉತ್ಸಾಹದಲ್ಲಿ ಇದ್ದಾರೆ. ಇನ್ನು ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಅಸಮರ್ಥರಿದ್ದಾರೆ ಎಂದು ವಿಪಕ್ಷಗಳು ಟೀಕೆ ಮಾಡುತ್ತಿವೆ. ಆದರೆ, ಇದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

ಬಳ್ಳಾರಿ ಪಾಲಿಕೆಗೆ 23 ವರ್ಷದ ಯುವತಿ ಮೇಯರ್‌: ರಾಜ್ಯದ ಕಿರಿಯ ಮೇಯರ್‌ ಹೆಗ್ಗಳಿಕೆ

ಭವಾನಿಗೆ ಟಿಕೆಟ್‌ ಕೊಡಲ್ಲ ಎಂದ ಕುಮಾರಸ್ವಾಮಿ: ಹಾಸನ ಟಿಕೆಟ್ ವಿಚಾರದಲ್ಲಿ ಪಕ್ಷದ ಬೆಳೆವಣಿಗೆ ಮುಖ್ಯವಾಗಿದೆ. ಜೊತೆಗೆ, ಪಕ್ಷದ ಕಾರ್ಯಕರ್ತರು ಮುಖ್ಯ ಆಗುತ್ತದೆ. ಅನಿವಾರ್ಯ ಇದ್ದರೆ ಮಾತ್ರ ನಮ್ಮ ಕುಟುಂಬದ ತಲೆಗೆ ಕೊಡುತ್ತೇವೆ. ಹಾಸನದಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ. ಹೀಗಾಗಿ ಕುಟುಂಬದವರು ಸ್ಪರ್ಧೆ ಅವಶ್ಯಕತೆ ಇಲ್ಲ. ಮತ್ತೆ ಕುಟುಂಬದ ಸ್ಪರ್ಧೆ ಅಂದರೆ ಗೊಂದಲ, ಜನರ ಮನಸ್ಸಿನಲ್ಲಿ ಬೇರೆ ಭಾವನೆ ಮೂಡುತ್ತದೆ. ಹೀಗಿರುವಾಗ ಗೊಂದಲ ಬೇಡ. ಹಾಸನ ಅಭ್ಯರ್ಥಿ ವಿಚಾರದಲ್ಲಿ ನನ್ನ ನಿರ್ಧಾರ‌ದಲ್ಲಿ ಬದಲಾವಣೆ ಇಲ್ಲ. ಮತ್ತೆ ಭವಾನಿಗೆ ಟಿಕೆಟ್ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.

Latest Videos
Follow Us:
Download App:
  • android
  • ios