ಬೆಂಗಳೂರು(jಜೂ.10): ರಾಜ್ಯಸಭೆಗೆ ಕಣಕ್ಕಿಳಿದಿರುವ ಎಚ್‌.ಡಿ.ದೇವೇಗೌಡ ಅವರ ಒಟ್ಟು ಆಸ್ತಿ ಮೌಲ್ಯ ಒಟ್ಟು 10.29 ಕೋಟಿ ರು.ಗಿಂತ ಹೆಚ್ಚಾಗಿದ್ದು, ಅವರಿಗಿಂತ ಪತ್ನಿ ಚನ್ನಮ್ಮ ಅವರೇ ಶ್ರೀಮಂತರಾಗಿದ್ದಾರೆ. ದೇವೇಗೌಡ ಒಟ್ಟು 1.14 ಕೋಟಿ ರು. ಆಸ್ತಿ ಹೊಂದಿದ್ದರೆ, ಪತ್ನಿ ಚನ್ನಮ್ಮ 9.14 ಕೋಟಿ ರು. ಆಸ್ತಿ ಹೊಂದಿರುವುದಾಗಿ ಚುನಾವಣಾಧಿಕಾರಿಗೆ ಸಲ್ಲಿಸಿರುವ ಆಸ್ತಿ ವಿವರದಲ್ಲಿ ಘೋಷಿಸಿಕೊಂಡಿದ್ದಾರೆ.

ಹೆಚ್ಚು ಆಸ್ತಿ ಹೊಂದಿರುವ ಚನ್ನಮ್ಮ ಅವರ ಸಾಲವೂ ಹೆಚ್ಚಿದೆ. ದೇವೇಗೌಡರು 20,144 ರು. ಸಾಲ ಹೊಂದಿದ್ದರೆ, ಚನ್ನಮ್ಮ ಅವರು 97.98 ಲಕ್ಷ ರು. ಸಾಲಗಾರರಾಗಿದ್ದಾರೆ.

ದೇವೇಗೌಡರ ಹೆಸರಲ್ಲಿ ಯಾವುದೇ ವಾಣಿಜ್ಯ ಕಟ್ಟಡ, ಅಪಾರ್ಟ್‌ಮೆಂಟ್‌ ಇಲ್ಲ. ಪತ್ನಿ ಚನ್ನಮ್ಮ ಹೆಸರಲ್ಲಿ ಹಾಸನ, ಬೆಂಗಳೂರಿನ ಪದ್ಮನಾಭನಗರ ಸೇರಿ ಇತರೆಡೆಗಳಲ್ಲಿ 5.38 ಕೋಟಿ ರು. ಮೌಲ್ಯದ ಕಟ್ಟಡಗಳಿವೆ. ಮಾರುಕಟ್ಟೆಯ ಮೌಲ್ಯದ ಮೂರು ಹಳೆಯ ಅಂಬಾಸಿಡರ್‌ ಕಾರುಗಳಿವೆ. ಪತ್ನಿ ಬಳಿಕ 6.50 ಲಕ್ಷ ಮೌಲ್ಯದ ಚಿನ್ನಾಭರಣ ಇದೆ. ಅಲ್ಲದೇ, 5.05 ಲಕ್ಷ ರು. ಮೌಲ್ಯದ ಎರಡು ಟ್ರಾಕ್ಟರ್‌ಗಳಿವೆ.

ಇದಲ್ಲದೇ, 61 ಸಾವಿರ ರು. ಪಿಂಚಣಿ ಬರುತ್ತಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ. ದೇವೇಗೌಡ ಬಳಿ 50 ಸಾವಿರ ರು. ಮೌಲ್ಯದ ಚಿನ್ನಾಭರಣ, 11.22 ಲಕ್ಷ ರು.

ದೇವೇಗೌಡ ಅವರು 72.60 ಲಕ್ಷ ರು. ಚರಾಸ್ತಿ, 41.28 ಲಕ್ಷ ರು. ಸ್ಥಿರಾಸ್ತಿ ಹೊಂದಿದ್ದಾರೆ. ಚನ್ನಮ್ಮ ಅವರು 2.14 ಕೋಟಿ ರು. ಚರಾಸ್ತಿ ಮತ್ತು 5.38 ಕೋಟಿ ರು. ಸ್ಥಿರಾಸ್ತಿ ಹೊಂದಿದ್ದಾರೆ. ದೇವೇಗೌಡರ ಬಳಿ ನಗದು 2.45 ಲಕ್ಷ ರು. ಮತ್ತು ಪತ್ನಿಯ ಬಳಿ 2.61 ಲಕ್ಷ ರು. ನಗದು ಇದೆ. ವಿವಿಧ ಬ್ಯಾಂಕ್‌ಗಳ ಉಳಿತಾಯ ಖಾತೆಯಲ್ಲಿ 37.63 ಲಕ್ಷ ರು. ಇಟ್ಟಿದ್ದು, ಪತ್ನಿ ಹೆಸರಲ್ಲಿ ವಿವಿಧ ಬ್ಯಾಂಕ್‌ ಖಾತೆಯಲ್ಲಿ 80.29 ಲಕ್ಷ ರು. ಇದೆ.