ಬಿಜೆಪಿಯ ಈ ನಿರ್ಧಾರವನ್ನು ಖಡಕ್ ಆಗಿ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರು ವಿರೋಧಿಸಿದ್ದಾರೆ. ಇದಕ್ಕೆ ತಮ್ಮ ಬೆಂಬಲ ಇಲ್ಲವೆಂದು ಹೇಳಿದ್ದಾರೆ. 

ಬೆಂಗಳೂರು (ಡಿ.15):  ಗೋ ಹತ್ಯಾ ನಿಷೇಧ ವಿಧೇಯಕ ವನ್ನು ಜೆಡಿಎಸ್ ವಿರೋಧಿಸುತ್ತದೆ. ಎಂದಿಗೂ ಇದಕ್ಕೆ ನಮ್ಮ ಬೆಂಬಲ ಇಲ್ಲ ಎಂದು ಹಿರಿಯ ಮುಖಂಡ ಎಚ್ ಡಿ ದೇವೇಗೌಡ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2010 ರಲ್ಲಿ ಬಿಜೆಪಿ ಸರ್ಕಾರ ಈ ಕಾಯ್ದೆ ಜಾರಿಗೆ ಮುಂದಾಗಿತ್ತು. ಅಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿ ತರಲು ಹೊರಟಿದ್ದಕ್ಕೆ ನಾವು ವಿರೋಧ ಮಾಡಿದ್ದೆವು ಎಂದು ದೇವೇಗೌಡ ಹೇಳಿದ್ದಾರೆ. 

ಆ ನಾಯಕನನ್ನು ಭೇಟಿ ಮಾಡಿದ ಸಾ.ರಾ.ಮಹೇಶ್ : ಏನಿದು ಕುತೂಹಲದ ರಾಜಕೀಯ..? .

 ರಾಜ್ಯಪಾಲರು, ಹಾಗೂ ರಾಷ್ಟ್ರಪತಿ ಗಳಿಗೆ ಪತ್ರ ಬರೆದು ಈ ಮಸೂದೆಗೆ ಒಪ್ಪಿಗೆ ನೀಡಬಾರದು ಎಂದು ಮನವಿ ಮಾಡಿದ್ದೆವು. ನಂತರ ಸರ್ಕಾರ ಬದಲಾಗಿ ಈ ಮಸೂದೆ ವಾಪಸ್ ಪಡೆಯಲಾಗಿತ್ತು.

ಈಗ ಮತ್ತೊಮ್ಮೆ ರಾಜ್ಯದಲ್ಲಿ ಗೋ ಹತ್ಯಾ ನಿಷೇಧದ ಮಸೂದೆಯನ್ನು ತರಲು ಬಿಜೆಪಿ ಸರ್ಕಾರ ಹೊರಟಿದೆ. ಇದಕ್ಕೆ ಜೆಡಿ ಎಸ್ ಪಕ್ಷ ದ ವಿರೋಧವಿದೆ ಎಂದು ಎಚ್ ದೇವೇಗೌಡರು ಹೇಳಿಕೆ ನೀಡಿದ್ದಾರೆ.