Asianet Suvarna News Asianet Suvarna News

ನಾನು ಸತ್ತರೂ ಪ್ರಾದೇಶಿಕ ಪಕ್ಷ ಉಳಿಯಬೇಕು : ಭಾವನಾತ್ಮಕ ಸಂದೇಶ ನೀಡಿದ ಗೌಡರು

  • ಸಿಂದಗಿ ಉಪಚುನಾವಣೆಗೆ ಸಂಬಂಧಿಸಿ ಚಟ್ಟರಕಿ ಗ್ರಾಮದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಬಹಿರಂಗ ಸಮಾವೇಶ
  • ‘ನಾನು ಸತ್ತರೂ ಪ್ರಾದೇಶಿಕ ಪಕ್ಷ ಉಳಿಯಬೇಕು’ ಎಂದು ಭಾವನಾತ್ಮಕವಾಗಿ ಹೇಳಿಕೆ
HD Devegowda Emotional Statement About  party snr
Author
Bengaluru, First Published Oct 19, 2021, 10:03 AM IST
  • Facebook
  • Twitter
  • Whatsapp

 ವಿಜಯಪುರ (ಅ.19):  ಸಿಂದಗಿ (Sindagi) ಉಪಚುನಾವಣೆಗೆ (By Election) ಸಂಬಂಧಿಸಿ ಚಟ್ಟರಕಿ ಗ್ರಾಮದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಬಹಿರಂಗ ಸಮಾವೇಶದಲ್ಲಿ ಜೆಡಿಎಸ್‌ (JDS) ವರಿಷ್ಠ ಎಚ್‌.ಡಿ.ದೇವೇಗೌಡ (HD Devegowda) ಮಾತನಾಡಿ ‘ನಾನು ಸತ್ತರೂ ಪ್ರಾದೇಶಿಕ ಪಕ್ಷ ಉಳಿಯಬೇಕು’ ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ದೇವೇಗೌಡ, ಮುಸ್ಲಿಂ (Muslim) ಹೆಣ್ಣುಮಗಳನ್ನು ಚುನಾವಣೆಯಲ್ಲಿ (Election) ಜೂಜಿಗಾಗಿ ನಿಲ್ಲಿಸಿಲ್ಲ. ನಾನು ಇಲ್ಲಿ ಬಿಜೆಪಿ (BJP) ಏಜೆಂಟ್‌ ಆಗಿ ಹೆಣ್ಣು ಮಗಳನ್ನು ಬಲಿ ಕೊಡಲು ಬಂದಿಲ್ಲ. ಹಾಗಂತ ಹೇಳುವವರಿಗೆ ದೈವವೇ ಉತ್ತರಿಸುತ್ತದೆ ಎಂದು ವಿಪಕ್ಷಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಉಪಕದನಕ್ಕೆ ಕಾಂಗ್ರೆಸ್‌ ಮಾಸ್ಟರ್ ಪ್ಲಾನ್ : ಹಾನಗಲ್‌ಗೆ 61- ಸಿಂದಗಿಗೆ 47 ಉಸ್ತುವಾರಿಗಳ ನೇಮಕ

ಇಂದು ರಾಜಕೀಯ (Politics) ಸಂಪೂರ್ಣ ಹಾಳಾಗಿ ಹೋಗಿದೆ. ಕೇವಲ ಗೆದ್ದು ಬಂದು ದುಡ್ಡು ಮಾಡೋದಷ್ಟೇ ರಾಜಕೀಯ ಎಂಬಂತಾಗಿದೆ ಎಂದು ಪ್ರಸ್ತುತ ರಾಜಕೀಯ ಕುರಿತು ಬೇಸರದ ಮಾತನಾಡಿದ ದೇವೇಗೌಡ, ಜೆಡಿಎಸ್‌ ಅಭ್ಯರ್ಥಿ ನಾಜಿಯಾ (Nazia) ಪರ ಕೈಮುಗಿದು ಮತಯಾಚಿಸಿದರು.

ಪ್ರಚಾರಕರ ಪಟ್ಟಿ ರಿಲೀಸ್

 

ಸಿಂಧಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ (By Election) ಕದನ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಗೆಲುವಿಗಾಗಿ ರಾಜಕೀಯ ಬಿಜೆಪಿ, ಕಾಂಗ್ರೆಸ್ (Congress) ಹಾಗೂ ಜೆಡಿಎಸ್ (JDS) ಭರ್ಜರಿ ಪ್ರಚಾರದಲ್ಲಿ ತೊಡಗಿವೆ.

ಇದರ ಭಾಗವಾಗಿ ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಜೆಡಿಎಸ್ 20 ಜನ ಸ್ಟಾರ್ ಪ್ರಚಾರಕರ (Star campaigners) ಪಟ್ಟಿ ಬಿಡುಗಡೆ ಮಾಡಿದೆ.

ಎಚ್  ಡಿ ದೇವೇಗೌಡ (HD Devegowda), ಎಚ್ ಡಿ ಕುಮಾರಸ್ವಾಮಿ (HD Kumaraswamy),  ಎಚ್ ಕೆ ಕುಮಾರಸ್ವಾಮಿ (HK Kumaraswamy), ಜಫ್ರುಲ್ಲಾ ಖಾನ್, ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ, ಸೇರಿದಂತೆ ಒಟ್ಟು 20 ಜನರ ಹೆಸರು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದೆ.

ಉಪಕದನಕ್ಕೆ ಕಾಂಗ್ರೆಸ್‌ ಮಾಸ್ಟರ್ ಪ್ಲಾನ್ : ಹಾನಗಲ್‌ಗೆ 61- ಸಿಂದಗಿಗೆ 47 ಉಸ್ತುವಾರಿಗಳ ನೇಮಕ

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ  ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ  ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್‌ ಜಫ್ರುಲ್ಲಾ ಖಾನ್‌, ಮಾಜಿ ಸಚಿವರಾದ ಎಚ್‌.ಡಿ.ರೇವಣ್ಣ( HD Revanna), ಬಂಡೆಪ್ಪ ಕಾಶೆಂಪೂರ್, ವೆಂಕಟರಾವ್‌ ನಾಡಗೌಡ, ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna), ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy), ಶಾಸಕರಾದ ಡಾ.ಕೆ.ಅನ್ನದಾನಿ, ಡಾ.ದೇವಾನಂದ ಚವ್ಹಾಣ್‌, ಬಿ.ಎಂ.ಫಾರೂಕ್‌, ರಾಜಾ ವೆಂಕಟಪ್ಪ ನಾಯಕ, ಮಾಜಿ ಶಾಸಕ ಎನ್‌.ಎಚ್‌.ಕೋನರೆಡ್ಡಿ, ಮುಖಂಡರಾದ ಬಿ.ಜಿ.ಪಾಟೀಲ್‌, ಮಲ್ಲಿಕಾರ್ಜುನ ಯಂಡಿಗೇರಿ, ನಾಜೀರ್‌ ಹುಸೇನ್‌ ಉಸ್ತಾದ್‌, ಸಯ್ಯದ್‌ ಮೋಹಿದ್‌ ಆಲ್ತಾಫ್‌, ರಾಜುಗೌಡ, ಬಿ.ಡಿ. ಪಾಟೀಲ್‌ ಇಂಡಿ ಅವರನ್ನು ಚುನಾಣೆ ಸ್ಟಾರ್ ಪ್ರಚಾರಕರನ್ನಾಗಿ ಮಾಡಲಾಗಿದೆ.

ಸಿಂಧಗಿ ಉಪಚುನಾವಣೆ ಕಣದಲ್ಲಿ ನಾಜಿಯಾ ಶಕೀಲಾ ಅಂಗಡಿ ಕಣದಲ್ಲಿದ್ರೆ, ಹಾನಗಲ್‌ನಲ್ಲಿ ನಿಯಾಜ್ ಶೇಕ್ ಅವರನ್ನ ಕಣಕ್ಕಿಳಿಸಿದ್ದು, ಈ ಅಭ್ಯರ್ಥಿಗಳ ಪರ ಈ ಜೆಡಿಎಸ್‌ ಪ್ರಚಾರಕರು ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ.

Follow Us:
Download App:
  • android
  • ios