ಹಾಸನ ವಿಧಾ​ನ​ಸಭಾ ಕ್ಷೇತ್ರದ ಟಿಕೆಟ್‌ ವಿಚಾ​ರಕ್ಕೆ ಸಂಬಂಧಿಸಿ ಇನ್ನು 2-3 ದಿನ​ಗ​ಳ​ಲ್ಲಿ ಸಕಾ​ರಾ​ತ್ಮಕ ತೀರ್ಮಾನ ಕೈಗೊಳ್ಳು​ತ್ತೇನೆ. ಕೆಲವೇ ದಿನ​ಗ​ಳಲ್ಲಿ ಜೆಡಿ​ಎ​ಸ್‌ನ ಆಕಾಂಕ್ಷಿ​ಗಳ ಪಟ್ಟಿಬಿಡು​ಗ​ಡೆ​ಯಾ​ಗ​ಲಿದ್ದು, ಅದ​ರಲ್ಲಿ ಹಾಸ​ನದ ಹೆಸರೂ ಇರ​ಲಿ​ದೆ. 

ಹಾಸನ/ಚಿಕ್ಕ​ಮ​ಗ​ಳೂ​ರು (ಫೆ.27): ಹಾಸನ ವಿಧಾ​ನ​ಸಭಾ ಕ್ಷೇತ್ರದ ಟಿಕೆಟ್‌ ವಿಚಾ​ರಕ್ಕೆ ಸಂಬಂಧಿಸಿ ಇನ್ನು 2-3 ದಿನ​ಗ​ಳ​ಲ್ಲಿ ಸಕಾ​ರಾ​ತ್ಮಕ ತೀರ್ಮಾನ ಕೈಗೊಳ್ಳು​ತ್ತೇನೆ. ಕೆಲವೇ ದಿನ​ಗ​ಳಲ್ಲಿ ಜೆಡಿ​ಎ​ಸ್‌ನ ಆಕಾಂಕ್ಷಿ​ಗಳ ಪಟ್ಟಿ ಬಿಡು​ಗ​ಡೆ​ಯಾ​ಗ​ಲಿದ್ದು, ಅದ​ರಲ್ಲಿ ಹಾಸ​ನದ ಹೆಸರೂ ಇರ​ಲಿ​ದೆ. ಹಾಸನ ಟಿಕೆಟ್‌ ವಿಚಾ​ರ​ವಾಗಿ ಜೆಡಿ​ಎಸ್‌ ರಾಷ್ಟ್ರಾ​ಧ್ಯಕ್ಷ ಎಚ್‌.​ಡಿ.ದೇವೇ​ಗೌ​ಡರೇ ನಿರ್ಧಾ​ರ ಮಾಡ​ಲಿ​ದ್ದಾ​ರೆ. ಯಾವುದೇ ಕಾರ​ಣಕ್ಕೂ ಕಾರ್ಯ​ಕ​ರ್ತರ ಕೈಬಿ​ಡ​ಲ್ಲ ಎಂದು ಮಾಜಿ ಮುಖ್ಯ​ಮಂತ್ರಿ ಎಚ್‌.​ಡಿ.​ಕು​ಮಾ​ರ​ಸ್ವಾಮಿ ಹೇಳಿ​ದ್ದಾರೆ. ಈ ಮೂಲಕ ಹಾಸನದ ಜೆಡಿ​ಎಸ್‌ ಟಿಕೆಟ್‌ ವಿಚಾ​ರಕ್ಕೆ ಸಂಬಂಧಿ​ಸಿದ ಕುತೂ​ಹಲ ಮತ್ತಷ್ಟುಹೆಚ್ಚಾ​ದಂತಾ​ಗಿ​ದೆ.

ಚಿಕ್ಕ​ಮ​ಗ​ಳೂ​ರಿ​ನಲ್ಲಿ ಪಂಚ​ರತ್ನ ಯಾತ್ರೆ ಮುಗಿಸಿ ಬೆಂಗ​ಳೂ​ರಿಗೆ ತೆರ​ಳುವ ಮಾರ್ಗ ಮಧ್ಯೆ ಹಾಸ​ನದ ರಿಂಗ್‌ ರೋಡ್‌ ರಸ್ತೆ ಸುಬೇ​ದಾರ್‌ ವೃತ್ತ​ದಲ್ಲಿ ತಮ್ಮನ್ನು ಎದು​ರಾದ ಕಾರ್ಯ​ಕ​ರ್ತ​ರ​ನ್ನು​ದ್ದೇ​ಶಿಸಿ ಮಾತ​ನಾ​ಡಿದ ಅವ​ರು, ಲಕ್ಷಾಂತರ ಕಾರ್ಯಕರ್ತರು ನನ್ನ ಕುಟುಂಬ ಇದ್ದಂತೆ. ಅವರ ನಂಬಿಕೆಗೆ ಧಕ್ಕೆಯಾಗುವ ರೀತಿ ಯಾವ ನಿರ್ಧಾರವನ್ನೂ ಕೈಗೊಳ್ಳಲ್ಲ. ಹಾಗೆಯೇ ನನಗೆ ಕುಟುಂಬದ ಮೇಲೆ ವ್ಯಾಮೋಹವೂ ಇಲ್ಲ. ಎರಡ್ಮೂರು ದಿನ ಅವಕಾಶ ಕೊಡಿ. ಸಕಾರಾತ್ಮಕ ತೀರ್ಮಾನ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿ​ದ​ರು.

ಎಚ್‌ಡಿಕೆ ಅಧಿಕಾರ ಇದ್ದಾಗ ಏಕೆ ಪಂಚರತ್ನ ಜಾರಿ ಮಾಡಲಿಲ್ಲ?: ಸಚಿವ ಸುಧಾಕರ್‌ ಪ್ರಶ್ನೆ

ಕೆಲವೇ ದಿನದಲ್ಲಿ ಜೆಡಿ​ಎಸ್‌ ಅಭ್ಯ​ರ್ಥಿ​ಗ​ಳ 2ನೇ ಪಟ್ಟಿ ಪ್ರಕಟ ಆಗುತ್ತದೆ. ಅದರಲ್ಲಿ ಹಾಸನದ ಹೆಸರು ಕೂಡ ಇರುತ್ತದೆ. ನಾನು ಈವರೆಗೆ ಹಾಸನದ ರಾಜಕೀಯದಲ್ಲಿ ನೇರವಾಗಿ ಭಾಗಿಯಾಗಿಲ್ಲ. ಕೇವಲ ಹಾಸನ ವಿಧಾನಸಭಾ ಕ್ಷೇತ್ರಕ್ಕೋಸ್ಕರ ನನ್ನ ಪಕ್ಷ ಹಾಳು ಮಾಡಲು ತಯಾರಿಲ್ಲ. ನನ್ನ ಕಾರ್ಯಕರ್ತರನ್ನು ಬಿಟ್ಟು ಕೊಡುವ ಮಾತೇ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು. ದೇವೇಗೌಡರ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲ. ಅವರ ಜೀವ ಕಾಪಾಡಲು ಕುಟುಂಬದ ವೈದ್ಯರು ಶ್ರಮಿಸುತ್ತಿದ್ದಾರೆ ಎಂದರು.ನನಗೂ ಎರಡು ಬಾರಿ ಹಾರ್ಟ್‌ ಆಪರೇಷನ್‌ ಆಗಿದೆ. ನಾನು ಕೈಗೊಳ್ಳುವ ತೀರ್ಮಾನದಲ್ಲಿ ಒಡಕು ಇರಬಾರದು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಇದಕ್ಕೂ ಮುನ್ನ ಚಿಕ್ಕ​ಮ​ಗ​ಳೂ​ರಿ​ನ ಕೊಪ್ಪ​ದ​ಲ್ಲಿ ಸುದ್ದಿ​ಗಾ​ರರ ಜತೆಗೆ ಮಾತ​ನಾ​ಡಿದ ಅವ​ರು, ಯಾವುದೇ ಗೊಂದಲಕ್ಕೆ ಅವಕಾಶ ಆಗಬಾರದೆಂಬ ಉದ್ದೇಶದಿಂದ ಮುಕ್ತವಾಗಿ ಚರ್ಚಿಸಲು ಸಮಾನ ಮನಸ್ಕರಿಗೆ ಭಾನು​ವಾರ ಸಂಜೆ 6ಕ್ಕೆ ಸಭೆಗೆ ಬರಲು ಹೇಳಿದ್ದೆ. ಕಾರ್ಯಕರ್ತರ ಭಾವನೆ ಅರ್ಥ​ಮಾ​ಡಿ​ಕೊಂಡು ಸರಿಪಡಿಸುವುದು ನನ್ನ ಚಿಂತನೆಯಾಗಿತ್ತು. ಆದರೆ, ಕೊನೇ ಹಂತದಲ್ಲಿ ಸಭೆ ರದ್ದುಪಡಿಸಿದ್ದಾರೆಂದು ರಾತ್ರಿ ಗೊತ್ತಾಯಿತು. ಹಾಸನ ಟಿಕೆಟ್‌ ವಿಚಾ​ರ​ವಾಗಿ ಅಂತಿಮ ತೀರ್ಮಾನ ತೆಗೆದು ಕೊಳ್ಳಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇ​ಗೌ​ಡ​ರೇ ಸಭೆ ಕರೆಯುತ್ತಾರೆ ಎಂದು ತಿಳಿ​ಸಿ​ದ​ರು.

ಶೃಂಗೇರಿ ಕ್ಷೇತ್ರದಲ್ಲಿ ಜೆಡಿಎಸ್‌ ಪರ ಉತ್ತಮ ಅಲೆಯಿದೆ: ಎಚ್‌.ಡಿ.ಕುಮಾರಸ್ವಾಮಿ

ನನಗೆ ದೇವೇಗೌಡರ ಆರೋಗ್ಯ ಮುಖ್ಯ. ನಾನು ಹಾಸನದ ವಿಷಯವನ್ನು ಅವರ ಮುಂದೆ ಚರ್ಚಿಸಿ, ಅವರ ಆರೋಗ್ಯ ಕೆಡುವ ವಾತಾವರಣ ನಿರ್ಮಿಸು​ವಂತಾ​ಗ​ಬಾ​ರ​ದು ಎಂಬುದು ನನ್ನ ಅಭಿಪ್ರಾಯ ಆಗಿತ್ತು. ಆದರೆ, ಬೇರೆಯವರಿಗೆ ದೇವೇಗೌಡರ ಆರೋಗ್ಯಕ್ಕಿಂತ ಅವರ ಭಾವನೆಗಳೇ ಮುಖ್ಯವಾದರೆ ನಾನು ಹಿಡಿಯಲು ಆಗಲ್ಲ ಎಂದು ಪರೋಕ್ಷ ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ದ​ರು.