Asianet Suvarna News Asianet Suvarna News

ಮಂಡ್ಯದಲ್ಲಿ ನಿಖಿಲ್​​ ಸೋಲಿಗೆ ಕಾರಣ ಬಿಚ್ಚಿಟ್ಟ ಮಾಜಿ ಸಚಿವ ಮಂಜು..!

* ಸಿದ್ದು೦ಕುಮಾರಸ್ವಾಮಿ ಆರೋಪ-ಪ್ರತ್ಯಾರೋಪ
* ಕುಮಾರಸ್ವಾಮಿ-ಸಿದ್ದರಾಮಯ್ಯ ವಾಕ್ಸಮರ ಮಧ್ಯೆ ಎ ಮಂಜು ಎಂಟ್ರಿ
* ಮಂಡ್ಯದಲ್ಲಿ ನಿಖಿಲ್​​ ಸೋಲಿಗೆ ಕಾರಣ ಬಿಚ್ಚಿಟ್ಟ ಮಾಜಿ ಸಚಿವ ಎ. ಮಂಜು..!
 

Hassan BJP Leader Reacts On HD Kumaraswamy and Siddaramaiah Talk War rbj
Author
Bengaluru, First Published Oct 18, 2021, 11:18 PM IST
  • Facebook
  • Twitter
  • Whatsapp

ಹಾಸನ, (ಅ.18): ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ(Siddaramaiah), ಎಚ್​ಡಿ ಕುಮಾರಸ್ವಾಮಿ (HD Kumaraswamy) ನಡುವಿನ ವಾಕ್ಸಮರದ ವಿಚಾರವಾಗಿ ಮಾಜಿ ಸಚಿವ ಎ. ಮಂಜು (A Manju) ಪ್ರತಿಕ್ರಿಯಿಸಿದ್ದಾರೆ.

ಹಾಸನದಲ್ಲಿ (Hassan) ಇಂದು (ಅ.18) ಸುದ್ದಿಗಾರರೊಂದಿಗೆ ಮಾತನಾಡಿದ ಮಂಜು, ಮಾಜಿ ಸಿಎಂ ಕುಮರಸ್ವಾಮಿ, ಪುಟಗೋಸಿ ಎಂಬ ಹೇಳಿಕೆಯನ್ನ ನೀಡಿದ್ದಾರೆ. ಇದರಿಂದ ನನಗೆ ಬೇಸರವಾಗಿದೆ. ಮಾಜಿ ಮುಖ್ಯಮಂತ್ರಿಯಾಗಿದ್ದವರು ಇಂತಹ ಪದ ಬಳಕೆ ಮಾಡೋದು ಒಳ್ಳೆದಲ್ಲ ಎಂದರು.

ನಿಮ್ಮ ತಂದೆ ಕೂಡ ವಿಪಕ್ಷ ನಾಯಕರಾಗಿದ್ರು, ಅದು ಪುಟಗೋಸಿನಾ? ಎಚ್‌ಡಿಕೆಗೆ ಸಿದ್ದು ಗುದ್ದು

ಕುಮಾರಸ್ವಾಮಿ ಯಾಕೆ ಹೀಗೆ ಮಾತನಾಡ್ತಾ ಇದ್ದಾರೆ ಎನ್ನೋದು ಗೊತ್ತಾಗುತ್ತಿಲ್ಲ. ಎಚ್​ಡಿಕೆ ಈ ರೀತಿಯ ಹೇಳಿಕೆ ಕೊಡೋದನ್ನ ನಿಲ್ಲಿಸದೇ ಹೋದ್ರೆ ಎಲ್ಲರಿಗೂ ಅವಮಾನವಾಗೋದು ಖಂಡಿತ. ಇಂತಹ ಪದ ಬಳಸಿದ್ರಿಂದಲೇ ಮಂಡ್ಯದಲ್ಲಿ (Mandya) ನಿಖಿಲ್​ ಕುಮಾರಸ್ವಾಮಿ (Nukhil Kumaraswamy) ಸೋತಿದ್ದು ಎಂದರು.

 ಜನ ದಡ್ಡರಲ್ಲ. ಅವರು ಎಲ್ಲವನ್ನೂ ನೋಡ್ತಾ ಇದ್ದಾರೆ. ಹಾಗಾಗಿ ಕುಮಾರಸ್ವಾಮಿ ಮಾತನಾಡುವಾಗ ಯೋಚನೆ ಮಾಡಿ ಮಾತಾಡಿದ್ರೆ ಒಳ್ಳೆದು ಎಂದು ಮಾಜಿ ಸಚಿವ ಎ. ಮಂಜು ಸಲಹೆ ನೀಡಿದರು.

ವಿರೋಧ ಪಕ್ಷದ ನಾಯಕ ಸ್ಥಾನ ಗಿಟ್ಟಿಸಿಕೊಳ್ಳಲು ಕುಮಾರಸ್ವಾಮಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟು ಅವರ ಪಕ್ಷದಲ್ಲಿದ್ದ 23 ಮಂತ್ರಿಗಳನ್ನು ಬೀದಿಗೆ ತಂದು ನಿಲ್ಲಿಸಿದರು ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಏಕವಚನದಲ್ಲಿ ಬಹಿರಂಗವಾಗಿ ಗಂಭೀರವಾದ ಆರೋಪ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ಎಚ್.ಡಿ. ದೇವೇಗೌಡ (HD Devegowda) ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ಹಾಗಾದರೆ ನಿಮ್ಮ ತಂದೆ ಕೂಡ ಪುಟಗೋಸಿ ಹುದ್ದೆಯಲ್ಲಿ ಇದ್ದದ್ದಾ ಎಂದು ಎಚ್.ಡಿ.ಕುಮಾರಸ್ವಾಮಿಗೆ ತಿರುಗೇಟು ಕೊಟ್ಟಿದ್ದರು.

Follow Us:
Download App:
  • android
  • ios