ಚಿತ್ರದುರ್ಗ (ಜ.24):  ರಾಜಕಾರಣದಲ್ಲಿ ಯಾರು ಗಟ್ಟಿಯಾಗಿ ಏರು ದನಿಯಲ್ಲಿ ಮಾತನಾಡುತ್ತಾರೋ ಅವರು ಒಂಟಿಯಾಗುವುದು ಗ್ಯಾರಂಟಿ. ಹಾಗಂತ ನಾನು ಒಂಟಿಯಾಗಿಲ್ಲ, ರಾಜ್ಯದ ಜನ ನನ್ನ ಜೊತೆ ಇದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಹೇಳಿದರು.

ಕಾಗಿನೆಲೆ ಶ್ರೀಗಳ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಹದಿನೇಳು ಜನರ ಟೀಂ ಕಟ್ಟಿಕೊಂಡು ಮುನ್ನಡೆಸಿದ್ದೆ. ಸದಾ ವಾಸ್ತವ ನೆಲೆಗಟ್ಟಿನಲ್ಲಿ ಮಾತನಾಡಿಕೊಂಡು ಬಂದಿದ್ದೆ. ಸ್ನೇಹಿತರು ನನ್ನನ್ನು ಒಂಟಿ ಮಾಡಿ ಹೋಗಿದ್ದಾರೆ. ಕೇವಲ ಬಿಡಿ ಮಂತ್ರಿ ಆಗಲು ಮಾತ್ರ ಅವರು ಸೀಮಿತ ಎಂದು ಹೇಳಿದರು.

ಜೆಡಿಎಸ್ ಮುಖಂಡಗೆ ಬಿಜೆಪಿಗೆ ಆಹ್ವಾನ : BSY ವಿರುದ್ಧ ವಿಶ್ವನಾಥ್ ಕಿಡಿ ..

ನನಗೆ ಮಂತ್ರಿಗಿರಿ ಸಿಗುತ್ತೋ, ಇಲ್ಲವೋ ಬೇರೆ ವಿಚಾರ. ನನ್ನ ಬಿಟ್ಟು ಸ್ನೇಹಿತರು ಸಭೆ ನಡೆಸಿದ್ದಾರೆ. ನನ್ನ ಬಳಿ ಮಾತನಾಡಿದರೆ ಸಿಎಂ ಬಿ.ಎಸ್‌ ವೈ ಏನಂದುಕೊಂಡಾರೋ ಎಂಬ ಅಳಕು ಅವರಿಗಿದೆ ಎಂದು ಪ್ರಶ್ನೆಯೊಂದಕ್ಕೆ ವಿಶ್ವನಾಥ್‌ ಉತ್ತರಿಸಿದರು.