* ಬೆಳಗ್ಗೆ ಒಬ್ಬರಿಗೆ, ಸಂಜೆ ಒಬ್ಬರಿಗೆ ಟೋಪಿ ಹಾಕುವ ನಾಟಕಕಾರ* ಎಚ್‌ಡಿಕೆ ಊಸರವಳ್ಳಿ: ಶ್ರೀನಿವಾಸ್‌* ಹಿತೈಷಿಗಳಿಂದ ಅಡ್ಡ ಮತ ಮಾಡಿಸಿ ನನ್ನ ಮೇಲೆ ದೂರ್ತಿದ್ದಾರೆ

ತುಮ​ಕೂ​ರು(ಜೂ.12): ಅಡ್ಡ​ಮ​ತ​ದಾ​ನದ ಆರೋಪ ಮಾಡು​ತ್ತಿ​ರುವ ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಯಾವು​ದ​ರಲ್ಲಿ ಉತ್ತಮ ಎಂದು ಪ್ರಶ್ನಿಸಿರುವ ಗುಬ್ಬಿ ಜೆಡಿ​ಎಸ್‌ ಶಾಸಕ ಎಸ್‌.ಆರ್‌. ಶ್ರೀನಿ​ವಾಸ್‌, ಅವರು ಎಲ್ಲರಿಗೂ ಟೋಪಿ ಹಾಕುವುದನ್ನೇ ಕರಗತ ಮಾಡಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಶನಿ​ವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾಡಿದ ಅವರು ಕುಮಾ​ರ​ಸ್ವಾಮಿ ವಿರುದ್ಧ ಏಕ​ವ​ಚ​ನ​ದಲ್ಲೇ ಹರಿ​ಹಾ​ಯ್ದರು. ಎಲ್ಲರಿಗೂ ಟೋಪಿ ಹಾಕುವುದನ್ನೇ ಕುಮಾರಸ್ವಾಮಿ ಕರಗತ ಮಾಡಿಕೊಂಡಿದ್ದಾರೆ. ಬೆಳಗ್ಗೆ ಒಬ್ಬರಿಗೆ, ಸಂಜೆ ಒಬ್ಬರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿರುವ ಕುಮಾರಸ್ವಾಮಿಯವರಿಂದ ನಾನು ಯಾವುದೇ ನೀತಿಯನ್ನು ಕಲಿಯಬೇಕಿಲ್ಲ. ಕುಮಾರಸ್ವಾಮಿ ಒಬ್ಬ ದೊಡ್ಡ ನಾಟಕಕಾರ, ಒಂದು ರೀತಿ​ಯಲ್ಲಿ ಊಸರವಳ್ಳಿ ಇದ್ದ ಹಾಗೆ. ಅವನೊಬ್ಬನೆ ಸತ್ಯ ಹರಿಶ್ಚಂದ್ರ, ಅವನೊಬ್ಬನೆ ಸರ್ವಜ್ಞ ಅಂತ ತಿಳಿ​ದು​ಕೊಂಡಿ​ದ್ದಾರೆ ಎಂದು ಛೇಡಿಸಿದರು.

ಇನ್ನು ರಾಜ್ಯ​ಸಭಾ ಚುನಾ​ವ​ಣೆಗೆ ಮತ ಹಾಕುವ ವೇಳೆ 3ರಿಂದ 4 ನಿಮಿಷ ಪೇಪರ್‌ ತೋರಿ​ಸಿ​ದ್ದೇನೆ. ಅಗ ನೋಡಬೇ​ಕಿತ್ತು. ನಾನು ಸರಿಯಾಗಿಯೇ ಪೇಪರ್‌ ತೋರಿ​ಸಿ​ದ್ದೀನಿ. ಹೆಬ್ಬೆ​ಟ್ಟನ್ನು ಮುಚ್ಚಿ​ಕೊಂಡಿ​ದ್ದೀಯ, ಪೂರ್ತಿ​ಯಾಗಿ ಪೇಪರ್‌ ತೋರಿಸು ಅನ್ನ​ಬೇ​ಕಿತ್ತು. ಇವರ ಮನೆಯವರೇ ನಾಟಕ ಮಾಡಿಕೊಂಡು ನನ್ನನ್ನು ಮುಗಿಸ​ಬೇ​ಕು ಅಂತ ಅವರ ಹಿತೈ​ಷಿಗಳಿಂದ ಕ್ರಾಸ್‌ವೋಟ್‌ ಮಾಡಿಸಿ ನನ್ನ ಮೇಲೆ ಗೂಬೆ ಕೂರಿ​ಸು​ವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ನನಗೂ ಕುಮಾರಸ್ವಾಮಿಗೂ ಆಗಲ್ಲ. ನನ್ನ ವಿರುದ್ಧ ಬೇರೆ ಅಭ್ಯರ್ಥಿ ಹಾಕಿ ಬೇರೆ ರೀತಿ ಕಸರತ್ತು ಮಾಡಿದ್ದಾರೆ. ನನ್ನನ್ನ ಸೋಲಿಸ್ಲೇಬೇಕು ಅಂತ ಸಂಚು ರೂಪಿಸಿದ್ದಾರೆ. ನನ್ನ ಮೇಲೆ ಮಾಡಿರುವ ಷಡ್ಯಂತ್ರ ಇದಾಗಿದೆ. ಇದೇ ಕುಮಾರಸ್ವಾಮಿ ಕ್ರಾಸ್ ವೋಟ್ ಮಾಡ್ಸಿ ಅದನ್ನ ನನ್ನ ಮೇಲೆ ಹಾಕ್ತಿದ್ದಾನೆ. ಅವರಿಗೆ ಗೊತ್ತು ನಮ್ಮ ಅಭ್ಯರ್ಥಿ ಗೆಲ್ಲಲ್ಲ ಅಂತ. ಯಾವ್ದೋ ಬೇರೆ ಕ್ರಾಸ್ ವೋಟ್ ಮಾಡ್ಸಿ ಈ ರೀತಿಯಾಗಿ ಮಾಡಿದ್ದಾನೆ. ಅವನ ಯೋಗ್ಯತೆಗೆ ಯಾರು ವೋಟ್ ಹಾಕಲ್ಲ ಅಂತಾನೂ ಗೊತ್ತಿದೆ. ನನ್ನ ತೇಜೊವಧೆ ಮಾಡೋಕೆ ಈ ರೀತಿಯಾಗಿ ಮಾಡಿದ್ದಾನೆ. ನಾನು ಇವನಿಗೆ ಹೆದರಿಕೊಂಡು, ಬೇರೆ ಅವರಿಗೆ ಹೆದರಿಕೊಂಡು ಯಾರಿಗೂ ನಾನು ಕಚ್ಚೆ ಕಟ್ಟಲ್ಲ. ಯಾರಿಗೂ ಕೇರ್ ಮಾಡಲ್ಲ. ನಾನು ನನ್ನ ಸ್ವಾಭಿಮಾನ ಹಾಗೂ ನನ್ನ ಮನಸಾಕ್ಷಿ ವಿರುದ್ಧ ಯಾವತ್ತು ಹೊಗಲ್ಲ. ಇವರು ಇದೆಲ್ಲಾ ನಾಟಕ ಮಾಡ್ತಿದ್ದಾರೆ ಅಂತ ಎಚ್‌ಡಿಕೆ ವಿರುದ್ಧ ಹರಿಹಾಯ್ದಿದ್ದಾರೆ. 

ಅಡ್ಡ ಮತದಾನ: ಗುಬ್ಬಿ ಶಾಸಕ ಶ್ರೀನಿವಾಸ್ ಕೈಲಾಸ ಸಮಾರಾಧನೆ ಫೋಟೋ ವೈರಲ್‌..!

ಕುಮಾರಸ್ವಾಮಿ ಒಬ್ಬ ದೊಡ್ಡ ನಾಟಕಕಾರ

ಕುಮಾರಸ್ವಾಮಿ ಒಬ್ಬ ದೊಡ್ಡ ನಾಟಕಕಾರ, ಒಂತರ ಉಸರವಳ್ಳಿ ಇದ್ದ ಹಾಗೆ, ಅವನೊಬ್ಬನೆ ಸತ್ಯ ಹರಿಶ್ಚಂದ್ರ ಅವನೊಬ್ಬನೆ ಸರ್ವಜ್ಞ ಅಂತ ತಿಳ್ಕೊಂಡಿದ್ದಾನೆ. ಅವನಿಗಿಂತ ಒಳ್ಳೆಯ ವ್ಯಕ್ತಿತ್ವ ತಿಳಿದುಕೊಂಡಿರೋರು ಇದ್ದಾರೆ. ನನ್ನ ವಿರುದ್ಧ ಪ್ರತಿಭಟನೆ ಮಾಡ್ತಾರಂತೆ ಮಾಡ್ಲಿ, ಅವನ ಹಡಗು ಮುಳುಗ್ತಾ ಇದಿಯಲ್ಲ. ಅದಕ್ಕೋಸ್ಕರ ಈ ರೀತಿಯಾಗಿ ಆಡ್ತಾ ಅವ್ನೆ ಕುಮಾರಸ್ವಾಮಿ. ಯಾವನ್ ಬರ್ತಾನೆ ಬರ್ಲಿ ಮನೆ ಮುತ್ತಿಗೆ ಹಾಕೋಕೆ. ಅವನೇ ಬರ್ಲಿ ತಾಕತ್ ಇದ್ರೆ. ಅದ್ಯಾವನು ಬರ್ತಾನೆ ಮನೆ ಹತ್ರ ಬರ್ಲಿ ನಾನು ಅದಕ್ಕೆ ಎಲ್ಲೂ ಹೋಗ್ದೆ ಮನೇಲಿ ಕಾಯ್ತಿದಿನಿ. ಕುಮಾರಸ್ವಾಮಿಗೆ ತಾಕತ್ ಇದ್ರೆ ನನ್ನ ಕ್ಷೇತ್ರದಲ್ಲಿ ನಿಂತು ನನ್ನ ವಿರುದ್ಧ ಗೆದ್ದು ತೋರಿಸಲಿ. ನಾನು ಅವನಿಗೆ ಓಪನ್ ಚಾಲಿಜಿಂಗ್ ಮಾಡ್ತಿನಿ. ನಾನು ಯಾವ ಪಕ್ಷದಿಂದಲಾದ್ರು ನಿಂತು ತೊರಿಸ್ತಿನಿ. ಅವನದು ಪಕ್ಷ ಇದೆಯಲ್ಲ ಅದರಿಂದಲೇ ನಿಂತು ಗೆದ್ದು ತೋರಿಸಲಿ ಅಂತ ಬಹಿರಂಗವಾಗಿಯೇ ಸವಾಲ್‌ ಹಾಕಿದ್ದಾರೆ. 

ಯಾಕೆ ಇನ್ನೊಬ್ಬರನ್ನ ತೇಜೋವಧೆ ಮಾಡ್ಬೇಕು‌. ಇವನ ಪಕ್ಷ ಕಟ್ಕಂಡು ನನಗೆ ಏನಾಗ್ಬೇಕು. ಆಗ್ಲೆ ನನ್ನ ವಿರುದ್ಧ ಬೇರೆ ಅಭ್ಯರ್ಥಿಯನ್ನ ಹಾಕಿದ ಮೇಲೆ ಅವನ ಪಕ್ಷ ಕಟ್ಕೋಂಡು ಏನಾಗ್ಬೇಕು. ನಾವು, ಜಿಟಿ ದೇವೆಗೌಡರು, ಅರಸಿಕೇರೆ ಶಾಸಕ ಶಿವಲಿಂಗೆಗೌಡರು, ಶ್ರೀನಿವಾಸ್ ಗೌಡ ಎಲ್ಲ ಸೆರ್ಕೋಂಡು ಮಿಟಿಂಗ್ ಮಾಡಿದ್ವಿ, ಶ್ರೀನಿವಾಸ್ ಗೌಡ ನಾನು ಕಾಂಗ್ರೆಸ್‌ಗೆ ವೋಟ್ ಹಾಕ್ತಿನಿ ಅಂದ್ರು. ನಾವು ಬೇಡ ಅಂದ್ವಿ, ನಮ್ಮ ಪಕ್ಷ ಬಿ ಫಾರಂ ಕೊಟ್ಟಿದೆ ಪಕ್ಷಕ್ಕೆ ದ್ರೋಹ ಮಾಡೋದು ಬೇಡ ಅಂತ ಜೆಡಿಎಸ್‌ ಗೆ ವೋಟ್ ಹಾಕಿದಿವಿ. ಅದನ್ನ ತಿರುಚಿಸುವ ಕೆಲಸ ಮಾಡ್ತಿದ್ದಾನಲ್ಲ ಕುಮಾರಸ್ವಾಮಿ. ಇವ್ನಗೆ ಏನ್ ಹೇಳ್ಬೇಕು, ನಾಚಿಕೆ ಮಾನ ಮರ್ಯಾದೆ ಇಲ್ಲ. ಗಳಿಗೆಗೆ ಒಂದು ಗಂಟೆಗೆ ಒಂದು ಹೇಳ್ಕಂಡು, ಇವನನ್ನ ಯಾರಾದ್ರು ಲೀಡರ್ ಅಂತಾರೇನ್ರಿ ರಾಜಕಾರಣ ಮಾಡೋಕೆ ಬರುತ್ತಾ ಅವನಿಗೆ ಅಂತ ಖಾರವಾಗಿ ಕಿಡಿ ಕಾರಿದ್ದಾರೆ.